ಡಿಕೆಎಸ್ಸಿ ಯೂತ್‌ವಿಂಗ್ ಕಾರ್ಯಕರ್ತರಿಗಾಗಿ ಅಧ್ಯಯನ ಶಿಬಿರ

ಯುಎಇ, ಸೆ.20:ಡಿಕೆಎಸ್‌ಸಿ ಯೂತ್‌ವಿಂಗ್ ಯುಎಇ ಕಾರ್ಯಕರ್ತರಿಗಾಗಿ ಅರಂಭಿಸಿದ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು.
ಡಿಕೆಎಸ್‌ಸಿ ಯುಎಇ ರಾಷ್ಟ್ರಿಯ ಸಮಿತಿಯ ಗೌರವಾಧ್ಯಕ್ಷ ಸೈಯದ್ ತ್ವಾಹ ಬಾಫಖಿ ತಂಙಳ್ ದುಆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಡಿಕೆಎಸ್‌ಸಿ ಯುಎಇ ರಾಷ್ಟ್ರಿಯ ಸಮಿತಿಯ ಅಧ್ಯಕ್ಷ ಹುಸೈನ್ ಹಾಜಿ ಕಿನ್ಯ, ಡಿಕೆಎಸ್ಸಿ ಸಂಘಟನೆಗಾಗಿ ಕಾರ್ಯಾಚರಿಸಬೇಕಾದ ಅನಿವಾರ್ಯತೆಯನ್ನು ಸಭೆಯ ಮುಂದಿಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಲ್‌ಐನ್ ಜೂನಿಯರ್ ಕಾಮರ್ಸ್ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಉಮ್ಮರ್ ಎಸ್.ಎಂ., ‘ಒಂದು ಹೆಜ್ಜೆ ಮುಂದೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪ್ರತಿಯೊಂದು ತಾಲೂಕು ಗಳಲ್ಲೂ ಡಿಕೆಎಸ್‌ಸಿ ನಡೆಸುವಂತಹ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್‌ನಂತಹ ವಿದ್ಯಾಕೇಂದ್ರಗಳನ್ನು ಸ್ಥಾಪಿಸಬೇಕು. ಅದಕ್ಕಾಗಿ ನಾವೆಲ್ಲರೂ ಒಂದಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಡಿಕೆಎಸ್‌ಸಿ ಯುಎಇ ರಾಷ್ಟ್ರಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಹೆಜಮಾಡಿ ಡಿಕೆಎಸ್‌ಸಿಯ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಇದೇ ಸಂದರ್ಭ ಅಲ್‌ಇಹ್ಸಾನ್ ವಿದ್ಯಾಸಂಸ್ಥೆಯ ಸಾಕ್ಷಚಿತ್ರವನ್ನು ಪ್ರದರ್ಶಿಲಾಯಿತು.
ಯೂತ್‌ವಿಂಗ್‌ನ ಅಧ್ಯಕ್ಷ ಸೈಫುದ್ದೀನ್ ಅರಂತೋಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರಿಯ ಸಮಿತಿ ನಾಯಕರಾದ ಇಬ್ರಾಹೀಂ ಹಾಜಿ ಕಿನ್ಯ, ಲತೀಫ್ ಮುಲ್ಕಿ, ಇ.ಕೆ. ಇಬ್ರಾಹೀಂ ಕಿನ್ಯ, ಅಬ್ದುರಹ್ಮಾನ್ ಹಾಜಿ ಸಂಟ್ಯಾರ್, ಶುಕೂರ್ ಮನಿಲ, ಅಬ್ದುರ್ರಝಾಕ್ ಮುಟ್ಟಿಕಲ್, ಇಸ್ಮಾಯೀಲ್ ಬಾರೂದ್ , ಕಮರುದ್ದೀನ್ ಗುರುಪುರ ಮೊದಲಾದವರು ಉಪಸ್ಥಿತರಿದ್ದರು.
ಯೂತ್‌ವಿಂಗ್‌ನ ಕಾರ್ಯಕರ್ತರಾದ ರಿಯಾಝ್ ಕಿನ್ಯ , ಅರ್ಷದ್, ರಿಝ್ವನ್, ದಾವೂದ್, ಜಮಾಲ್ ಬಜ್ಪೆ, ಝುಬೈರ್ ಆತೂರ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಮುಖ್ತಾರ್ ಅಲಿ ಅರಂತೋಡು ಸ್ವಾಗತಿಸಿದರು. ಕಮಾಲ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







