ಸ್ಪೋಟದ ಶಂಕಿತ ಆರೋಪಿ ಬಂಧನಕ್ಕೆ ನೆರವಾದ ಸಿಖ್ ಉದ್ಯಮಿ ಈಗ ನ್ಯೂಯಾರ್ಕ್ ಹೀರೊ

ನ್ಯೂಯಾರ್ಕ್, ಸೆ. 20: ನ್ಯೂಯಾರ್ಕ್ ಮತ್ತು ನ್ಯೂಜರ್ಸಿಗಳಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ ಸ್ಫೋಟಗಳ ಆರೋಪಿಯನ್ನು ಬಂಧಿಸಲು ನೆರವಾದ ಅಮೆರಿಕದ ಸಿಖ್ ವ್ಯಕ್ತಿಯೊಬ್ಬರು ಈಗ ‘ಹೀರೊ’ ಆಗಿದ್ದಾರೆ.
ಆರೋಪಿ 28 ವರ್ಷದ ಅಫ್ಘಾನ್-ಅಮೆರಿಕನ್ ಅಹ್ಮದ್ ಖಾನ್ ರಹಾಮಿ ತನ್ನ ಬಾರ್‌ನ ಬಾಗಿಲಲ್ಲಿ ಮಲಗಿರುವುದನ್ನು ಬಾರ್ ಮಾಲಕ ಹರಿಂದರ್ ಬೈನ್ಸ್ ಸೋಮವಾರ ಪತ್ತೆಹಚ್ಚಿದರು.
ತನ್ನ ಬಾರ್ ಇರುವ ಬೀದಿಯ ಇನ್ನೊಂದು ಬದಿಯಲ್ಲಿರುವ ತನ್ನದೇ ಅಂಗಡಿಯಲ್ಲಿ ಟವಿಯಲ್ಲಿ ಬರುವ ಸುದ್ದಿಗಳನ್ನು ನೋಡುತ್ತಿದ್ದೆ ಎಂದು ಬೈನ್ಸ್ ಹೇಳಿದರು. ಮೊದಲು, ಯಾರೋ ವ್ಯಕ್ತಿ ಕುಡಿದು ಮಲಗಿದ್ದಾನೆ ಎಂದು ಭಾವಿಸಿದೆ, ಆದರೆ ಬಳಿಕ ರಹಾಮಿಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದೆ ಎಂದರು.
‘‘ನಾನೋರ್ವ ಪ್ರಜೆ ಅಷ್ಟೆ. ಓರ್ವ ಪ್ರಜೆ ಏನು ಮಾಡಬೇಕೊ ಅದನ್ನಷ್ಟೆ ನಾನು ಮಾಡಿದ್ದೇನೆ. ಪೊಲೀಸರು, ಕಾನೂನು ಅನುಷ್ಠಾನ ಸಂಸ್ಥೆಗಳು ನಿಜವಾದಿ ಹೀರೊಗಳು’’ ಎಂದರು.
Next Story





