ಬಿಲಾಲ್ ಜುಮಾ ಮಸೀದಿಗೆ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಸೆ. 20: ತಲಪಾಡಿ ಕಡಮೊಗರು ಬಿಲಾಲ್ ಜುಮಾ ಮಸೀದಿ ಸಮಿತಿಯ ಮಹಾಸಭೆಯು ಇತ್ತೀಚೆಗೆ ದ.ಕ. ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಉಪಾಧ್ಯಕ್ಷ ಎಸ್.ಅಬೂಬಕರ್ ಸಜಿಪ ಅಧ್ಯಕ್ಷತೆಯಲ್ಲಿ ಮಸೀದಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಆಡಳಿತ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಅಬ್ಬಾಸ್ ತಲಪಾಡಿ, ಉಪಾಧ್ಯಕ್ಷರಾಗಿ ಯಾಕೂಬ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಸಿದ್ದೀಕ್ ಟಿ., ಜೊತೆ ಕಾರ್ಯದರ್ಶಿಗಳಾಗಿ ಇಬ್ರಾಹೀಂ ತಸ್ಲಿಂ, ಅನ್ವರ್ ಸಾದಾತ್ ಬಿ.ಎ., ಕೋಶಾಧಿಕಾರಿಯಾಗಿ ಬಿ.ಎಸ್.ಮೊದಿನ್ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಮೊದಿನ್ ಕುಟ್ಟಿ, ಕೊಳಂಗರೆ ನಿಯಾಝ್, ಬಶೀರ್ ಕೊಳಂಗರೆ, ಹಕೀಂ, ಅಬ್ದೂಲ್ಲಾ ಅವರನ್ನು ಆಯ್ಕೆ ಮಾಡಲಾಯಿತು.
ಖತೀಬ್ ಎಂ.ಎಸ್.ಎಂ.ಝೈನಿ ಕಾಮಿಲ್ ಮಾತನಾಡಿದರು. ಇಮಾಮ್ ಇಬ್ರಾಹೀಂ ಮದನಿ ದುವಾ ನೆರವೇರಿಸಿದರು. ವಕ್ಫ್ ಬೋರ್ಡ್ ಪ್ರತಿನಿಧಿಗಳಾದ ಮೊದಿನ್ ಅಲ್ ಸಫರ್, ಅಬ್ದುಲ್ ಕುಪ್ಪೆಪದವು ಉಪಸ್ಥಿತರಿದ್ದರು. ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಜಿ ಸ್ವಾಗತಿಸಿದರು.





