ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಪ್ರಾಧ್ಯಾಪಕರ ಪಾತ್ರ ಅಪಾರ: ಪ್ರೊ. ಜಿ.ಪಿ. ಠಾಕೂರ
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಮೌಲ್ಯಾಂಕನ, ಅಂಗೀಕಾರ ಪರಿಷತ್‌ನ ಪರಿಶೀಲನೆ

ಅಂಕೋಲಾ, ಸೆ.20: ತಾಲೂಕಿನಲ್ಲಿಯೂ ಕೂಡ ಅನೇಕ ಅಡೆ-ತಡೆಗಳ ನಡುವೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲರಾಗಿದ್ದು, ಅದಕ್ಕೆ ಇಲ್ಲಿನ ಪ್ರಾಧ್ಯಾಪಕ ವೃಂದವೇ ಕಾರಣ ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಅಂಗೀಕಾರ ಪರಿಷತ್ ಪೀರ್ ಟೀಮ್‌ನ ಸಂಯೋಜಕ ಕಾಶಿ ವಿದ್ಯಾಪೀಠದ ಮನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಪಿ. ಠಾಕೂರ ಅಭಿಪ್ರಾಯಪಟ್ಟರು.
ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೂರು ದಿನಗಳ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಅಂಗೀಕಾರ ಪರಿಷತ್‌ನ ಪರಿಶೀಲನೆಗೆ ಆಗಮಿಸಿದ ಅವರು ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಗಳವಾರ ವೀಕ್ಷಿಸಿ ಈ ಕುರಿತು ಮಾತನಾಡಿದರು.
ಪೀರ್ ಟೀಮ್‌ನ ಅಧ್ಯಕ್ಷ ಪಂಜಾಬ್ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ. ಕೆ.ಎನ್. ಪಾಟಕ್ ಕಾಲೇಜಿನ ಕುರಿತು ವಿವಿಧ ಮಾಹಿತಿಯನ್ನು ಕಲೆ ಹಾಕಿದರು. ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಪೀರ್ ತಂಡದ ಸಂಯೋಜಕಿ ಪ್ರೊ.ವಿಜಯಶ್ರೀ ಗಾಂವ್ಕರ, ಪ್ರಾಚಾರ್ಯ ಡಾ. ಎಸ್.ವಿ. ನಾಯಕ ಕಾಲೇಜಿನ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಪ್ರೊ. ವಿದ್ಯಾ ಡಿ. ನಾಯಕ, ಡಾ. ಗೀತಾ ನಾಯಕ, ಪ್ರೊ. ಪೂರ್ಣಿಮಾ ಗಾಂವ್ಕರ, ಶಾಂತಲಾ ಇಡೂರಕರ, ಜ್ಯೋತಿ ನಾಯಕ, ಶಬಾನಾ ಸೈಯದ್ ಯಾಸ್ಮೀನ್, ಎನ್.ಎಂ.ಖಾನ್, ದ.ರ. ಹಾಲ್ಯಾಳ್, ಡಿ. ಸುಧಾಕರ, ಕೃಷ್ಣ ಗೌಡ, ವಿನೋದ್‌ಶಾನುಭಾಗ, ವಿಜಯಕುಮಾರ ಐಗಳ, ಶ್ರೀಧರ ಬಂಟ, ಸಂತೋಷ ಬಾಂದೇಕರ, ಸೂರ್ಯಕಾಂತ ಶೆಟ್ಟಿ, ಕೆ.ಆರ್. ಭಟ್, ವನಿತಾ ದೇಶಭಂಡಾರಿ, ನಮೃತಾ ನಾಯ್ಕ, ಪಲ್ಲವಿ ನಾಯಕ, ಗ್ರಂಥಪಾಲಕಿ ನವಿತಾ ನಾಯಕ ದೇವರಬಾವಿ ಉಪಸ್ಥಿತರಿದ್ದರು.







