ಗಿರಿಜನ ದಂಪತಿ ಕಗ್ಗೊಲೆ
ಬರಿಪಾಡಾ(ಒಡಿಶಾ),ಸೆ.20: ಮಯೂರಭಾಂಜ್ ಜಿಲ್ಲೆಯ ಕಾಥಾಚುವಾ ಅಂಬಾದಹಿ ಗ್ರಾಮದಲ್ಲಿ ಮಂಗಳವಾರ ವಾಮಾಚಾರವನ್ನು ನಡೆಸುತ್ತಿದ್ದರೆಂಬ ಶಂಕೆಯಲ್ಲಿ ಗಿರಿಜನ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಹದಿ ಪುರ್ತಿ(60) ಮತ್ತು ಆತನ ಪತ್ನಿ ಮದೇಯಿ ಪುರ್ತಿ(55) ಬೆಳಗಿನ ಜಾವ ಗಾಢನಿದ್ರೆಯಲ್ಲಿದ್ದಾಗ ಅವರನ್ನು ಅಪರಿಚಿತ ದುಷ್ಕರ್ಮಿಗಳು ಕೊಲೆಗೈದಿದ್ದಾರೆ ಎಂದು ತಿಳಿಸಿರುವ ಪೊಲೀಸರು ಓರ್ವನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





