ತ.ನಾ. ಮಾಜಿ ಸಾರಿಗೆ ಸಚಿವನ ವಿರುದ್ಧದ ಎಫ್‌ಐಆರ್ ರದ್ದು
ಮದುರೈ, ಸೆ.20: 2014ರಲ್ಲಿ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗದ ಭರವಸೆ ನೀಡಿ 38 ಜನರಿಂದ 61 ಲ.ರೂ.ಗಳನ್ನು ಪಡೆದುಕೊಂಡು ವಂಚಿಸಿದ್ದ ಆರೋಪದಲ್ಲಿ ರಾಜ್ಯದ ಮಾಜಿ ಸಾರಿಗೆ ಸಚಿವ ವಿ.ಸೆಂಥಿಲ್ ಬಾಲಾಜಿ ಮತ್ತು ನಿಗಮದ ಆಡಳಿತ ನಿರ್ದೇಶಕ ರಂಗರಾಜನ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠವು ರದ್ದುಗೊಳಿಸಿದೆ.
Next Story





