ನ್ಯಾಯಾಧೀಶರ ಆಯ್ಕೆಗೆ ಸ್ವತಂತ್ರ ಸಮಿತಿ ರಚನೆ ಕೋರಿಕೆ ತಳ್ಳಿಹಾಕಿದ ಸುಪ್ರೀಂ
ಹೊಸದಿಲ್ಲಿ, ಸೆ.20: ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ಆಯ್ಕೆಗಾಗಿ ಸ್ವತಂತ್ರ ಸಮಿತಿಯೊಂದನ್ನು ರಚಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿತು.
ಅರ್ಜಿದಾರರು ಕೋರಿರುವುದು ಸಂವಿಧಾನದ ತಿದ್ದುಪಡಿಗೆ ಸಮಾನವಾಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯವು ಇದನ್ನು ಮಾಡುವಂತಿಲ್ಲ ಎಂದು ನ್ಯಾ.ಅರುಣ ಮಿಶ್ರಾ ಮತ್ತು ಯು.ಯು.ಲಲಿತ್ ಅವರ ಪೀಠವು ಹೇಳಿತು.
ನ್ಯಾಯಾಂಗ ಪಾರದರ್ಶಕತೆಗಾಗಿ ರಾಷ್ಟ್ರೀಯ ವಕೀಲರ ಅಭಿಯಾನವು ಸಲ್ಲಿಸಿದ್ದ ಅರ್ಜಿಯು ನ್ಯಾಯಾಧೀಶರಾಗಿ ನೇಮಕಕ್ಕಾಗಿ ಅಭ್ಯರ್ಥಿಗಳ ವಿಶಾಲ ಶ್ರೇಣಿಯಿಂದ ನ್ಯಾಯಸಮ್ಮತ,ಮುಕ್ತ ಮತ್ತು ನಿಷ್ಪಕ್ಷಪಾತ ಆಯ್ಕೆ ಪ್ರಕ್ರಿಯೆಯನ್ನು ಕೋರಿತ್ತು.
Next Story





