ಸೆ.24: ಎಸ್ಸೆಸ್ಸೆಫ್ ವತಿಯಿಂದ ವಿಟ್ಲ ಕ್ಯಾಂಪಸ್ ಪ್ರತಿಭೋತ್ಸವ
ವಿಟ್ಲ, ಸೆ.20: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವಿಟ್ಲ ಕ್ಯಾಂಪಸ್ ಡಿವಿಷನ್ ವತಿಯಿಂದ ಪ್ರತಿಭೋತ್ಸವ ಸೆಪ್ಟಂಬರ್ 24ರಂದು ಮಂಗಳಪದವು ಬಿಲಾಲ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಬೆಳಗ್ಗೆ 8:30ಕ್ಕೆ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಧ್ವಜಾರೋಹಣ ನೆರವೇರಿಸಲಿದ್ದು, ಪ್ರತಿಭೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ಕೋಡಪದವು ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಂಗಳಪದವು ಸೆಕ್ಟರ್ ಅಧ್ಯಕ್ಷ ಹಾಜಿ ಅಬ್ದುರ್ರಝಾಕ್ ಸಖಾಫಿ ಕೆಲಿಂಜ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಬಳಿಕ ವಿಟ್ಲ, ಕನ್ಯಾನ ಮತ್ತು ಅಡ್ಯನಡ್ಕ ಕ್ಯಾಂಪಸ್ ಗಳ ವಿದ್ಯಾರ್ಥಿಗಳಿಂದ 30ರಷ್ಟು ವೈವಿಧ್ಯಮಯ ವಿಷಯಗಳಲ್ಲಿ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿರುವುದು.
ಅಪರಾಹ್ನ 3 ಗಂಟೆಗೆ ಸಮಾರೋಪ ಸಮಾರಂಭವು ಡಿವಿಷನ್ ಅಧ್ಯಕ್ಷ ಎಂ.ಕೆ.ಎಂ.ಕಾಮಿಲ್ ಸಖಾಫಿ ಕೊಡಂಗಾಯಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ. ವಿಟ್ಲ ಉದ್ಘಾಟಿಸಲಿದ್ದಾರೆ. ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ಪ್ರತಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟಿ ಟ್ರೋಫಿ ವಿತರಿಸಲಿರುವರು.
ಮಂಗಳೂರು ಸಿಟಿ ಪೊಲೀಸ್ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ., ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಬೂಬಕರ್ ಒಕ್ಕೆತ್ತೂರು, ಅಬ್ದುರ್ರಹ್ಮಾನ್ ನೆಲ್ಲಿಗುಡ್ಡೆ, ವೀರಕಂಭ ಪಂಚಾಯತ್ ಸದಸ್ಯರಾದ ಉಬೈದ್ ಮತ್ತು ಅಬ್ಬಾಸ್ ವಿ.ಕೆ., ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಇಸ್ಮಾಯೀಲ್ ಮಾಸ್ಟರ್, ಆಸಿಫ್ ಹಾಜಿ ಕೃಷ್ಣಾಪುರ, ಶರೀಫ್ ನಂದಾವರ, ಎಸ್ವೈಎಸ್ ನಾಯಕ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ,ಇಬ್ರಾಹೀಂ ಮುಸ್ಲಿಯಾರ್, ಅಬ್ದುಲ್ ಮಜೀದ್ ಮದನಿ ಕುಡ್ತಮುಗೇರು, ಕೆ.ಎ.ಹಮೀದ್ ಹಾಜಿ ಕೊಡಂಗಾಯಿ ಮುಂತಾದವರು ಭಾಗವಹಿಸಲಿರುವರು ಎಂದು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಝಯಾದ್ ಮಾಸ್ಟರ್ ಬೈರಿಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







