ಅಲ್ ಮದೀನಾ: ಎಸ್ಸೆಸ್ಸೆಫ್ ಧ್ವಜ ದಿನಾಚರಣೆ

ಮಂಜನಾಡಿ, ಸೆ.20: ಇಲ್ಲಿನ ಅಲ್ ಮದೀನಾ ಕ್ಯಾಂಪಸ್‌ನಲ್ಲಿ ಎಸ್ಸೆಸ್ಸೆಫ್‌ನ 28ನೆ ಧ್ವಜ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಅಲ್ ಮದೀನಾ ದಅ್ವಾ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಅಝೀಝ್ ಅಹ್ಸನಿ ಉಸ್ತಾದ್ ಮುಖ್ಯಪ್ರಭಾಷಣ ಮಾಡಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಫಿ ಎಸ್ಸೆಸ್ಸೆಫ್‌ನ ತ್ರಿವರ್ಣ ಧ್ವಜವನ್ನು ಆರೋಹಣಗೈದರು. ದಅ್ವಾ ಕಾಲೇಜ್ ಮುದರ್ರಿಸರಾದ ಅಬ್ದುರ್ರಹ್ಮಾನ್ ಅಹ್ಸನಿ,ಅಬ್ದುಲ್ ಸಲಾಂ ಅಹ್ಸನಿ, ಅಶ್ರಫ್ ಸಖಾಫಿ, ಝೈನುಲ್ ಆಬಿದ್ ಸಖಾಫಿ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಕ್ಯಾಂಪಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ವಳಾಲ್ ಸ್ವಾಗತಿಸಿ ನಿರೂಪಿಸಿದರು. ಬಿಷಾರತುಲ್ ಮದೀನಾದ ಪ್ರಧಾನ ಕಾರ್ಯದರ್ಶಿ ನೌಫಾಲ್ ಮಲಾರ್ ವಂದಿಸಿದರು.
Next Story





