ಉಗ್ರರಿಗೆ ಆಶ್ರಯ ನೀಡಬೇಡಿ ಶರೀಫ್ಗೆ ಕೆರಿ ಸೂಚನೆ
ನ್ಯೂಯಾರ್ಕ್, ಸೆ. 20: ಭಯೋತ್ಪಾದಕರು ಪಾಕಿಸ್ತಾನಿ ನೆಲವನ್ನು ‘ಸುರಕ್ಷಿತ ಆಶ್ರಯ ತಾಣಗಳನ್ನಾಗಿ’ ಬಳಸುವುದನ್ನು ತಡೆಯಿರಿ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ರಿಗೆ ಸೂಚಿಸಿದ್ದಾರೆ.
ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕರು ಭಾರತೀಯ ಸೇನಾ ಶಿಬಿರವೊಂದರ ಮೇಲೆ ನಡೆಸಿದ ದಾಳಿಯೂ ಸೇರಿದಂತೆ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
Next Story





