500ನೆ ಟೆಸ್ಟ್: ತವರಿನಲ್ಲಿ ಭಾರತದ 10 ಸ್ಮರಣೀಯ ಜಯ

ಕಾನ್ಪುರ, ಸೆ.20: ಇಲ್ಲಿನ ಕಾನ್ಪುರದ ಗ್ರೀನ್‌ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ಸೆ.22ರಿಂದ 26ರ ತನಕ ನಡೆಯಲಿರುವ ಟೆಸ್ಟ್ ಭಾರತದ ಪಾಲಿಗೆ 500ನೆ ಟೆಸ್ಟ್ ಆಗಿದೆ.
ಈ ತನಕ ಭಾರತ ದಾಖಲಿಸಿರುವ ಟೆಸ್ಟ್ ಗೆಲುವಿನ ಸ್ಮರಣೀಯ ದಾಖಲೆ ಇಂತಿವೆ.
1958: ಕಾನ್ಪುರದಲ್ಲಿ ಆಸ್ಟ್ರೇಲಿಯ ವಿರುದ್ಧ 119 ರನ್ ಜಯ
ಭಾರತದ ಆಫ್ ಸ್ಪಿನ್ನರ್ ಜಸುಬಾಯ್ ಪಟೇಲ್ 1955-60ರ ಅವಧಿಯಲ್ಲಿ 7 ಟೆಸ್ಟ್‌ಗಳನ್ನು ಆಡಿದ್ದರು. ಆದರೆ ಈ ಪೈಕಿ ಅವರು 1958ರಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ 14 ವಿಕೆಟ್ ಉಡಾಯಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. 35ರ ಹರೆಯದ ಪಟೇಲ್ ಮೊದಲ ಇನಿಂಗ್ಸ್‌ನಲ್ಲಿ 69ಕ್ಕೆ 9 ಮತ್ತು ಎರಡನೆ ಇನಿಂಗ್ಸ್‌ನಲ್ಲಿ 55ಕ್ಕೆ 5 ವಿಕೆಟ್ ಉಡಾಯಿಸಿದ್ದರು. ಭಾರತ 119 ರನ್‌ಗಳ ಜಯ ದಾಖಲಿಸಿತ್ತು. 40 ವರ್ಷಗಳ ಬಳಿಕ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಉಡಾಯಿಸಿ ಪಟೇಲ್ ದಾಖಲೆ ಮುರಿದಿದ್ದರು. 1972: ಕೋಲ್ಕತಾದಲ್ಲಿ ಇಂಗ್ಲೆಂಡ್ ವಿರುದ್ಧ 28 ರನ್ ಜಯ ಕೋಲ್ಕತಾದಲ್ಲಿ 1972 ಡಿಸೆಂಬರ್ 30ರಿಂದ 1973ಜನವರಿ 3ರ ತನಕ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಭಾರತ ಸೋಲಿನ ಹಾದಿಯಲ್ಲಿದ್ದಾಗ ಚಂದ್ರಶೇಖರ 42ಕ್ಕೆ 4 ವಿಕೆಟ್ ಮತ್ತು ಬಿಶನ್ ಸಿಂಗ್ ಬೇಡಿ 63ಕ್ಕೆ 5ವಿಕೆಟ್ ಪಡೆದು ತಂಡಕ್ಕೆ ಸ್ಮರಣೀಯ ಗೆಲುವಿಗೆ ನೆರವಾಗಿದ್ದರು. ಎರಡನೆ ಇನಿಂಗ್ಸ್‌ನಲ್ಲಿ ಭಾರತ ವಿರುದ್ಧ 192 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ 163 ರನ್‌ಗಳಿಗೆ ಆಲೌಟಾಗಿತ್ತು.ಇದರೊಂದಿಗೆ ಭಾರತ 28 ರನ್‌ಗಳ ಜಯ ಗಳಿಸಿತ್ತು. ಮೊದಲ ಟೆಸ್ಟ್‌ನಲ್ಲಿ ಭಾರತ ಸೋಲು ಅನುಭವಿಸಿತ್ತು. ಎರಡನೆ ಮತ್ತು ಮೂರನೆ ಟೆಸ್ಟ್‌ನಲ್ಲಿ ಭಾರತ ಗೆಲುವು ದಾಖಲಿಸಿತ್ತು. ನಾಲ್ಕು ಮತ್ತು ಐದನೆ ಟೆಸ್ಟ್ ಡ್ರಾದಲ್ಲಿ ಕೊನೆಗೊಳ್ಳುವುದರೊಂದಿಗೆ ಭಾರತ 2-1 ಅಂತರದಲ್ಲಿ ಸರಣಿ ಜಯಿಸಿತ್ತು.
1980: ಚೆನ್ನೈನಲ್ಲಿ ಪಾಕಿಸ್ತಾನ ವಿರುದ್ಧ ್ಧ 10 ವಿಕೆಟ್ ಜಯ:
1980 , ಜನವರಿ 15ರಿಂದ 20 ತನಕ ಚೆನ್ನೈನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ವಿರುದ್ಧ 10 ವಿಕೆಟ್ಗಳ ಜಯ ಗಳಿಸಿತ್ತು. ನಾಯಕ ಕಪಿಲ್ ದೇವ್ 56ಕ್ಕೆ 7 ವಿಕೆಟ್ ಉಡಾಯಿಸಿದದರು. ಅವರು ಆಲ್‌ರೌಂಡ್ ಪ್ರದರ್ಶನ ನೀಡಿದ್ದರು ಭಾರತ ಚೆನ್ನೈನ ಟೆಸ್ಟ್‌ನಲ್ಲಿ ಭರ್ಜರಿ ಗೆಲುವಿನೊಂದಿಗೆ 6 ಟೆಸ್ಟ್‌ಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.
1988: ಚೆನ್ನೈನಲ್ಲಿ ವಿಂಡೀಸ್ ವಿರುದ್ಧ 255 ರನ್‌ಗಳ ಗೆಲುವು
1988, ಜನವರಿ 14ರಂದು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಲೆಗ್‌ಸ್ಪಿನ್ನರ್ ಮಧ್ಯಪ್ರದೇಶದ ನರೇಂದ್ರ ಹಿರ್ವಾನಿ ವಿಂಡೀಸ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 61ಕ್ಕೆ 8 ಮತ್ತು ಎರಡನೆ ಇನಿಂಗ್ಸ್‌ನಲ್ಲಿ 75ಕ್ಕೆ 8 ವಿಕೆಟ್ ಉಡಾಯಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಹಿರ್ವಾನಿ ಚೊಚ್ಚಲ ಟೆಸ್ಟ್‌ನಲ್ಲಿ 16 ವಿಕೆಟ್ ಉಡಾಯಿಸಿ ದಾಖಲೆ ಬರೆದಿದ್ದರು.
1998: ಚೆನ್ನೈನಲ್ಲಿ ಆಸ್ಟ್ರೇಲಿಯ ವಿರುದ್ಧ 179 ರನ್ ಜಯ
ಚೆನ್ನೈನಲ್ಲಿ 1998 ಮಾ.6ರಿಂದ 10ರ ತನಕ ನಡೆದ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸಚಿನ್ ತೆಂಡುಲ್ಕರ್ ಮೊದಲ ಇನಿಂಗ್ಸ್‌ನಲ್ಲಿ 4 ರನ್‌ಗೆ ಔಟಾಗಿದ್ದರು. ಆದರೆ ಎರಡನೆ ಇನಿಂಗ್ಸ್‌ನಲ್ಲಿ ಅವರು 191 ಎಸೆತಗಳಲ್ಲಿ 155 ರನ್ ಗಳಿಸಿ ತಂಡಕ್ಕೆ 179 ರನ್‌ಗಳ ಗೆಲುವಿಗೆ ನೆರವಾಗಿದ್ದರು.
1999: ದಿಲ್ಲಿಯಲ್ಲಿ ಪಾಕ್ ವಿರುದ್ಧ ಭಾರತ 212 ರನ್‌ಗಳ ಜಯ
1999, ಫೆ 7ರಂದು ದಿಲ್ಲಿಯ ಫಿರೋಝ್ ಷಾ ಕೋಟ್ಲಾ ಮೈದಾನದಲ್ಲಿ ಸ್ಪಿನ್ನರ್ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡನೆ ಇನಿಂಗ್ಸ್‌ನಲ್ಲಿ 74ಕ್ಕೆ ಎಲ್ಲ 10 ವಿಕೆಟ್‌ಗಳನ್ನು ಉಡಾಯಿಸಿ ದಾಖಲೆ ನಿರ್ಮಿಸಿದ್ದರು. ಭಾರತ ಈ ಪಂದ್ಯದಲ್ಲಿ ಪಾಕ್ ವಿರುದ್ಧ 212 ರನ್‌ಗಳ ಜಯ ಗಳಿಸಿತ್ತು.ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟಾಗಿತ್ತು. ಇದು ಪಾಕ್ ವಿರುದ್ಧ ಭಾರತ 19 ವರ್ಷಗಳಲ್ಲಿ ದಾಖಲಿಸಿದ್ದ ಮೊದಲ ಗೆಲುವು ಆಗಿತ್ತು.
2001: ಕೋಲ್ಕತಾದಲ್ಲಿ ಆಸ್ಟ್ರೇಲಿಯ ವಿರುದ್ಧ 171 ರನ್ ಜಯ. ಕೋಲ್ಕತಾ ಈಡನ್ ಗಾರ್ಡನ್ಸ್‌ನಲ್ಲಿ 2001, ಮಾರ್ಚ್ 11ರಿಂದ 15ರ ತನಕ ಆಸ್ಟ್ರೇಲಿಯ ವಿರುದ್ಧ ನಡೆದ ಎರಡನೆ ಟೆಸ್ಟ್‌ನಲ್ಲಿ ಕಲಾತ್ಮಕ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ದ್ವಿಶತಕ(281) ದಾಖಲಿಸಿದ್ದರು. ಇದು ಶತಮಾನದಲ್ಲಿ ದಾಖಲಾದ ಅತ್ಯುತ್ತಮ ಇನಿಂಗ್ಸ್ ಆಗಿ ಗುರುತಿಸಿಕೊಂಡಿದೆ. ಭಾರತ ಈ ಟೆಸ್ಟ್‌ನಲ್ಲಿ 171 ರನ್‌ಗಳ ಗೆಲುವು ದಾಖಲಿಸಿತ್ತು.
631 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ತಳವೂರಿದ್ದ ಲಕ್ಷ್ಮಣ್ 452 ಎಸೆತಗಳನ್ನು ಎದುರಿಸಿ 44 ಬೌಂಡರಿಗಳ ಸಹಾಯದಿಂದ 281 ರನ್ ದಾಖಲಿಸಿದ್ದರು. ಭಾರತ ಈ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 274 ರನ್‌ಗಳ ಹಿನ್ನೆಡೆಯೊಂದಿಗೆ ಫಾಲೋಆನ್‌ಗೆ ಒಳಗಾಗಿದ್ದರೂ, ಎರಡನೆ ಇನಿಂಗ್ಸ್‌ನಲ್ಲಿ ಲಕ್ಷ್ಮಣ್ ದ್ವಿಶತಕ ಮತ್ತು ರಾಹುಲ್ ದ್ರಾವಿಡ್ (180) ಅವರ ನೆರವಿನಲ್ಲಿ ಚೇತರಿಸಿಕೊಂಡು 178 ಓವರ್‌ಗಳಲ್ಲಿ 657 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ 68.3 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟಾಗಿತ್ತು. ಇದರೊಂದಿಗೆ ಭಾರತ 171 ರನ್‌ಗಳ ಗೆಲುವು ದಾಖಲಿಸಿತ್ತು.
2008: ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಜಯ
ಚೆನ್ನೈನಲ್ಲಿ 2008, ಡಿ.11ರಿಂದ 15ರ ತನಕ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಭಾರದ ವೀರೇಂದ್ರ ಸೆಹ್ವಾಗ್ 68 ಎಸೆತಗಳಲ್ಲಿ 83 ರನ್(11ಬೌ,4ಸಿ) , ಸಚಿನ್ ತೆಂಡುಲ್ಕರ್(103) ಮತ್ತು ಯುವರಾಜ್ ಸಿಂಗ್(83) ಅವರು ಮುರಿಯದ ಜೊತೆಯಾಟದಲ್ಲಿ 163 ರನ್ ದಾಖಲಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ 4ನೆ ಗರಿಷ್ಠ ಸವಾಲನ್ನು ಬೆನ್ನಟ್ಟಿ ಜಯ ಗಳಿಸಿತ್ತು.
2004: ಕೋಲ್ಕತಾದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 8ವಿಕೆಟ್ ಜಯ
2004,ನ.28ರಿಂದ ಡಿ.2ರ ತನಕ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್‌ನಲ್ಲಿ ಭಾರತ 8 ವಿಕೆಟ್ಗ
ಳ ಜಯ ಗಳಿಸಿತ್ತು. ಹರ್ಭಜನ್ ಸಿಂಗ್ ಎರಡನೆ ಇನಿಂಗ್ಸ್‌ನಲ್ಲಿ 7 ವಿಕೆಟ್ (30-3-87-7) ಉಡಾಯಿಸಿದ್ದರು.
2010: ಮೊಹಾಲಿಯಲ್ಲಿ ಆಸ್ಟ್ರೇಲಿಯ ವಿರುದ್ಧ 1 ವಿಕೆಟ್ ಜಯ
2010 ಅ.1ರಿಂದ 5ರ ತನಕ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ಭಾರತ 1 ವಿಕೆಟ್ ಅಂತರದ ರೋಚಕ ಜಯ ದಾಖಲಿಸಿತ್ತು. ಸೋಲಿನ ದವಡೆಗೆ ಸಿಲುಕಿದ್ದ ಭಾರತಕ್ಕೆ 9ನೆ ವಿಕೆಟ್‌ಗೆ ವಿವಿಎಸ್ ಲಕ್ಷ್ಮಣ್ (ಔಟಾಗದೆ 73) ಮತ್ತು ಇಶಾಂತ್ ಶರ್ಮ(31) 81 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.







