ಕಾವೇರಿ ಕಾವು: ಮಂಡ್ಯ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

ಮಂಡ್ಯ, ಸೆ.21: ತಮಿಳುನಾಡಿಗೆ 7 ದಿನಗಳ ಕಾಲ ಪ್ರತಿನಿತ್ಯ 6,000 ಕ್ಯುಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಮತ್ತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಮುನ್ನಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೆಆರ್‌ಎಸ್ ಡ್ಯಾಂನ ಬಳಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. 4 ಸಾವಿರಕ್ಕೂ ಅಧಿಕ ಪೊಲೀಸರು, ಆರು ಅರೆ ಮಿಲಿಟರಿ ತುಕಡಿಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ.
ಸುಪ್ರೀಂಕೋರ್ಟ್‌ನ ತೀರ್ಪಿನಿಂದ ಸಂಕಷ್ಟಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಮುಂದಿನ ನಡೆಯನ್ನು ಸಂಪುಟ ಸಹೋದ್ಯೋಗಿಗಳು ಹಾಗೂ ವಿಪಕ್ಷಗಳ ನಾಯಕರ ಸಲಹೆ ಪಡೆದ ಅನಂತರ ಪ್ರಕಟಿಸಲಿದ್ದು, ವಿಪಕ್ಷಗಳ ಸಭೆಗೆ ಭಾಗವಹಿಸುವುದಾಗಿ ಜೆಡಿಎಸ್ ತಿಳಿಸಿದೆ.
Next Story





