ಸಮರ್ಥನೀಯ ಅಭಿವೃದ್ಧಿಯ ಗುರಿಗೆ ಶಾಂತಿಯ ಅಡಿಗಲ್ಲು ಸ್ಥಾಪಿಸೋಣ
ಇಂದು ಅಂತಾರಾಷ್ಟ್ರೀಯ ಶಾಂತಿ ದಿನ

ಇಂದು ಸೆಪ್ಟೆಂಬರ್ 21ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾುತ್ತಿದೆ. ಎಲ್ಲೆಡೆಯೂ ಶಾಂತಿಯ ಧ್ವನಿ ತಲೆ ಎತ್ತಿ ನಿಂತಿದೆ. ಈ ದಿನದ ಆಚರಣೆಯು 1981ರಲ್ಲಿ ಪ್ರಾರಂಭವಾಯಿತಾದರೂ ವಿಶ್ವದ ಎಲ್ಲ ರಾಷ್ಟ್ರಗಳು 2001ರಲ್ಲಿ ಸರ್ವಾನುಮತದಿಂದ ಈ ದಿನವನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡಲು ಒಪ್ಪಿದರು.
ಈ ವರ್ಷದ ಶಾಂತಿ ದಿನದ ಘೋಷಣೆ ಸಮರ್ಥನೀಯ ಅಭಿವೃದ್ಧಿಯ ಗುರಿಗೆ ಶಾಂತಿಯ ಅಡಿಗಲ್ಲು ಸ್ಥಾಪಿಸೋಣ ಎಂಬುದಾಗಿದೆ.
ವಿಶ್ವಸಂಸ್ಥೆಯ ಕಾರ್ಯದರ್ಶಿಗಳಾದ ಬಾನ್ ಕಿ ಮೂನ್ ನಾವು ಸಮಾನತೆ, ಮಾನವ ಘನತೆ ಸಾಧಿಸಲು ಒಟ್ಟಾಗಿ ಕೆಲಸ ಮಾಡಲು ಸಿದ್ಧರಾಗೋಣ, ಅದರ ಜೊತೆಗೆ ಭೂಮಿಯನ್ನು ಹಸಿರಾಗುವಂತೆ ಕಾರ್ಯ ನಿರ್ವಹಿಸಲು ಬದ್ಧರಾಗಬೇಕು ಎಂದು ಕರೆ ನೀಡಿದ್ದಾರೆ.
ಅದರೊಂದಿಗೆ ಆಧುನಿಕ ಸಮಸ್ಯೆಗಳಾದ ಹಸಿವು, ಸಂಪತ್ತು, ಮೂಲಭೂತ ಅಗತ್ಯಗಳು, ನೀರಿನ ರಕ್ಷಣೆ, ಪರಿಸರ ಸಂರಕ್ಷಣೆ, ಇವುಗಳನ್ನು ಗಮನದಲ್ಲಿಟ್ಟುಕೊಂಡು ಶಾಂತಿಯುತವಾದ ಮಾರ್ಗದಿಂದ ಸಮಸ್ಯೆಗಳನ್ನು ನಿವಾರಿಸೋಣ ಎಂದು ಹೇಳಿದ್ದಾರೆ.
ಶಾಂತಿ: ಇತ್ತೀಚೆಗೆ ಈ ಪದ ತುಂಬಾ ಬಹುಮುಖ್ಯವಾಗಿದೆ. ಕಾರಣ ಜಗತ್ತಿನಾದ್ಯಂತ ಹರಡಿರುವ ಭಯೋತ್ಪಾದನೆ ವಿರುದ್ದ ಸೆಣಸಾಡಲು ಇರು ಏಕೈಕ ಅಸ್ತ್ರವೆಂದರೆ ಇದು ಒಂದೇ.
ದೂರದ ಸಿರಿಯಾದಿಂದ ನಮ್ಮ ಕಾಶ್ಮೀರದವರೆಗೂ ಭಯೋತ್ಪಾದಕ ಹಿಂಸೆಗಳಿಂದ ಅದೆಷ್ಟೋ ಜೀವ ಬಲಿಯಾದರೆ ಇನ್ನುಳಿದವರು ಅಭಧ್ರತೆಯ ಭಾವದಿಂದ ನಲುಗಿದ್ದಾರೆ. ಎಲ್ಲ ಧರ್ಮಗ್ರಂಥಗಳ ಮುಖ್ಯ ಸಾರವೇ ಶಾಂತಿ. ಆದರೆ ಅವೇ ಧರ್ಮಗ್ರಂಥಗಳ ಹೆಸರಿಟ್ಟುಕೊಂಡು ಆಳುವ ಪಕ್ಷಗಳು ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಿವೆ.
ಅದು ಅಮೆರಿಕಆಗಿರಬಹುದು, ಪಾಕಿಸ್ತಾನ ಆಗಿರಬಹುದು ನಮ್ಮ ನೆಲ ಭಾರತವೇ ಆಗಿರಬಹುದು ಎಲ್ಲ ದೇಶದಲ್ಲೂ ಸಂವಿಧಾನದ ಪ್ರಮುಖ ಅಂಶವೇ ಶಾಂತಿ. ಶಾಂತಿಯನ್ನು ಕದಡುವ ಮನುಷ್ಯರಿಗೆ ಶಿಕ್ಷೆಯನ್ನು ವಿಧಿಸಲುಕಾನೂನು ಸಹ ಇದೆ. ಆದರೆ ಅದುಕವಡೆ ಕಾಸಿಗೂಕಿಮ್ಮತ್ತಿಲ್ಲದಂತೆ ಕಾಗದದಲ್ಲಿ ಉಳಿದುಕೊಂಡಿವೆ.
ಉದಾಹರಣೆಗೆ ಕಾಶ್ಮೀರ ವಿಚಾರದಲ್ಲಿ ನಡೆಯುವ ರಾಜಕೀಯದಾಟಗಳು, ಗೋಮಾಂಸದ ನೆಪದಲ್ಲಿ ಸಾಮರಸ್ಯ ಕದಡುವ ಹೇಳಿಕೆಗಳು, ಇನ್ನು ಇತ್ತೀಚಿನಕಾವೇರಿ ವಿವಾದ ಹೀಗೆ ಹಲವಾರು ಘಟನೆಗಳು ರಾಜಕೀಯ ಪ್ರೇರಿತ ಹೇಳಿಕೆಗಳಿಂದ ಗಲಭೆಗಳು ಉಂಟಾಗಿ ಸೂಕ್ಷ್ಮ ಮನಸ್ಸಿನ ಜೀವಿಗಳಿಗೆ ಈ ನೆಲ ನಮ್ಮದಲ್ಲಎನ್ನುವ ಭಾವನೆ ಉಂಟು ಮಾಡುತ್ತಿವೆ.
ಶತ್ರುಗಳ ಸಂಹಾರಕ್ಕೆ ಇರುವ ಏಕೈಕ ಅಸ್ತ್ರವೆೀ ಶಾಂತಿ ಎನ್ನುವ ಮಹಾತ್ಮನ ಮಾತು ಇಂದು ನಗಣ್ಯವಾಗಿವೆ. ಭಗತ್‌ಸಿಂಗ್, ಸಾವರ್ಕರ್, ಸುಭಾಶ್ಚಂದ್ರ ಭೋಸ್ ಅವರ ಹೋರಾಟದ ಲವಾಗಿ ದೇಶ ಸ್ವಾಂತ್ರತ್ಯ ಸಿಕ್ಕಿದೆಹೊರತು ಉಪವಾಸ, ಮೌನ ಸತ್ಯಾಗ್ರಹ ಇತ್ಯಾದಿಗಳಿಂದಲ್ಲ ಎನ್ನುವ ಜನರು ಇದ್ದಾರೆ. ಆದರೆ ಒಂದು ಗಮನಿಸಬೇಕಾದ ಸಂಗತಿ ಏನೆಂದರೆ ಎಲ್ಲರ ಹೋರಾಟದ ಅಂತಿಮ ಗುರಿಯೇ ಶಾಂತಿ ಬಯಸುವುದು.
ಇರುವುದೆಲ್ಲವ ಬಿಟ್ಟು ಇರದುದರ ಕಡೆ ಜೀವನ ಎಂಬ ಕವಿವಾಣಿಯಂತೆ ನಮಗೆ ಈ ಕ್ಷಣದ ಬದಲಾಗಿ ಕಾಣದ ಪ್ರಪಂಚವನ್ನು ನಿರ್ಮಿಸಿಕೊಳ್ಳಲು ಹೆಣಗಾಡುತ್ತಿದ್ದೇವೆ. ಅದು ಬಂದೂಕಿನ ಮೊರೆತ ಆಗಿರಬಹುದು ಇಲ್ಲಾ ಅದಕ್ಕಿಂತಲೂ ಹರಿತವಾದ ಮಾತು ಆಗಿರಬಹುದು. ಇಲ್ಲಿ ಬೇಕಾಗಿದ್ದು ನೆಮ್ಮದಿಯಲ್ಲ. ಬದಲಿಗೆ ಸರ್ವಾಧಿಕಾರ ಹಂಬಲ.
ಜಗತ್ತಿನ ತುಂಬಾ ನಮ್ಮದೇ ಸಾಮ್ರಾಜ್ಯ ಕಟ್ಟುತ್ತೇವೆ ಎನ್ನುವ ಉಗ್ರವಾದಿಗಳಿಗೂ, ಹಿಂದುತ್ವ ಹೆಸರಿನಲ್ಲಿ ಭಾರತದ ವೈವಿಧ್ಯತೆಯನ್ನು ನಾಶ ಮಾಡುತ್ತಿರುವ ಸಂಘ ಪರಿವಾರದವರಿಗೂ, ಇಲ್ಲದವರ ಮೇಲೆ ಸವಾರಿ ಮಾಡುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೂ, ಇರುವ ತನಕ ಕೊಳ್ಳೆ ಹೊಡೆಯುವ ರಾಜಕಾರಣಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಅವರೆಲ್ಲರ ಕಟ್ಟ ಕಡೆಯ ನಿಲ್ದಾಣವೇ ಅರಾಜಕತೆ ಸೃಷ್ಟಿಸಿ ಕಾಲ ಬುಡದಲ್ಲಿ ಶಾಂತಿಯನ್ನು ಹೊಸಕಿ ಹಾಕುವುದು.
ನಮ್ಮ ಮನಸ್ಥಿತಿ ಹೇಗಿದೆಯೆಂದರೆ ಶಾಂತಿಯ ಮಂತ್ರ ಪಠಿಸಿದ ಮಹಾತ್ಮಾ ಗಾಂಧಿಯನ್ನು ಅವಹೇಳನ ಮಾಡುವಷ್ಟು. ಇಲ್ಲಿ ಶಾಂತಿ ಎಂದರೆ ಗಾಂಧಿಜೀಯ ಪ್ರೇಯಸಿ ಎನ್ನುವ ಹೇಳಿಕೆ ನೀಡುವಷ್ಟು ನಾವು ನಮ್ಮ ಆತ್ಮಸಾಕ್ಷಿಯನ್ನು ಮಾರಿಕೊಂಡಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ಆತ ನೆಮ್ಮದಿಯಿಂದ ವಕೀಲಿ ವೃತ್ತಿ ಮಾಡಿಕೊಂಡು ಇರಬಹುದಿತ್ತು. ಆದರೆ ಆತಭಾರತ ಮಣ್ಣಿನ ಮಗ. ತಾಯ್ನಿಡುತುಂಬಾ ಸೆಳೆಯಿತು. ಅದಲ್ಲದೇ ಗಾಂಧಿೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಕರಿಯರು ಅನುಭವಿಸುತ್ತಿರುವ ನೋವುಗಳಿಗೂಸ್ಪಂದಿಸಿದವರು. ಅಂತಹ ಮಹಾತ್ಮನನ್ನು ಕಿಚಾಯಿಸುವ ಜೋಕ್ಸುಗಳು ನಮ್ಮ ಮನಸ್ಥಿತಿ ಹೇಗಿದೆ ಎಂಬುದನ್ನು ತೋರಿಸಿಕೊಡುತ್ತದೆ.
ಶಾಂತಿ ಬಯಸುವುದು ಎಲ್ಲ ದೇಶಗಳ ಆದ್ಯ ಕರ್ತವ್ಯ. ಅದಕ್ಕಾಗಿಯೇ ಚುನಾವಣೆಯಲ್ಲಿ ತಮಗಷ್ಟ ಬಂದವರನ್ನು ಆಯ್ಕೆ ಮಾಡುತ್ತಾರೆ. ನಾವು, ನಮ್ಮ ಮಕ್ಕಳು, ಅವರ ಮಕ್ಕಳು ಹೀಗೆ ನಮ್ಮ ಮುಂದಿನ ಸಂತತಿ ನೆಮ್ಮದಿಯಿಂದ ಬದುಕುತ್ತದೆ ಎನ್ನುವ ಆಶಾಭಾವನೆ ಹೊಂದಿರುತ್ತಾರೆ. ಆದರೆ ಅಧಿಕಾರದ ಅಮಲು ನೆತ್ತಿಗೇರಿದ ನಂತರ ತಮ್ಮ ಸ್ಥಾನ ಉಳಿಸಿಕೊಳ್ಳಲು ವಿಷದಬೀಜ ಬಿತ್ತುತ್ತಾರೆ. ಇದರಿಂದ ಮತ್ತೆಸಮಾಜದಲ್ಲಿ ಅಶಾಂತಿ ತಲೆ ಎತ್ತುತ್ತದೆ.
ಆಧುನಿಕ ಅಸ್ತ್ರಗಳ ವಿರುದ್ಧ ಬರೀ ಮೌನ ಮತ್ತು ಉಪವಾಸದಿಂದ ಬ್ರಿಟಿಷರ ಎದೆಯನ್ನು ನಡುಗಿಸುವಂತೆ ಮಾಡಿದ ಶಾಂತಿದೂತನ ಪ್ರೇರಣೆಯಂತೆ ಅಣ್ಣಾ ಹಝಾರೆ ಉಪವಾಸ ಸತ್ಯಾಗ್ರಹದಿಂದ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟಿದ್ದು ನಮಗೆ ಗೊತ್ತಿರುವ ಸಂಗತಿ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಮಲಾಲ ಉಗ್ರರ ಗುಂಡಿಗೆಹೆದರದೇ ಶಿಕ್ಷಣ ಪಸರಿಸುವ ಕೆಲಸ ನಡೆಸುತ್ತಿರುವುದು ಹೆಮ್ಮೆಯ ವಿಷಯ.ಇಂದು ಜಗತ್ತಿನಲ್ಲಿ ನಡೆಯುತ್ತಿರುವ ಅಮಾನುಷ ಕ್ರೌರ್ಯ ಶಕ್ತಿಗಳ ವಿುದ್ಧ ಹೋರಾಡಬೇಕಿದೆ. ಶಾಂತಿ ಎಲ್ಲರಲ್ಲಿ ಮನೆ ಮಾಡಬೇಕಿದೆ. ಅಂದಾಗ ಜೀವನ ಸಮೃದ್ಧ ಮತ್ತು ಸಂತೃಪ್ತಿಯಿಂದ ಕೂಡಿರುತ್ತದೆ.







