ನೆಟ್ಟಣ: ಅಪರಿಚಿತ ಮೃತದೇಹ ಪತ್ತೆ

ಕಡಬ, ಸೆ.21: ಕಡಬ ಠಾಣಾ ವ್ಯಾಪ್ತಿಯ ನೆಟ್ಟಣ ರೈಲ್ವೆ ಸ್ಟೇಷನ್ ಸಮೀಪ ಅಪರಿಚಿತ ಶವವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಬೆಳಗ್ಗೆ ಕಂಡು ಬಂದಿದೆ.
ಸುಮಾರು 50 ವರ್ಷ ಪ್ರಾಯದ ವ್ಯಕ್ತಿಯ ಶವವು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದಾಗಿ ಸ್ಥಳೀಯರು ಕಡಬ ಠಾಣೆಗೆ ದೂರು ನೀಡಿದ್ದರು. ಯಾವುದೋ ಊರಿನಿಂದ ರೈಲಿನಲ್ಲಿ ಇಲ್ಲಿ ಆಗಮಿಸಿ ನೇಣು ಬಿಗಿದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





