ಪಾಕ್ ಪ್ರಧಾನಿಯನ್ನು ಟೀಕಿಸಿದ ಸಲೀಮ್ ಖಾನ್

ಮುಂಬೈ,ಸೆಪ್ಟಂಬರ್ 21: ಬಾಲಿವುಡ್ ಚಿತ್ರಕಥೆಕಾರ ಸಲೀಮ್ ಖಾನ್, ಜಮ್ಮುಕಾಶ್ಮೀರದ ಉರಿಯಲ್ಲಿ ಸೇನೆಯ ಶಿಬಿರವೊಂದಕ್ಕೆ ಭಯೋತ್ಪಾದಕರು ದಾಳಿ ನಡೆಸಿದ ಎರಡು ದಿವಸಗಳ ಬಳಿಕ,ಟ್ವೀಟ್ ಮಾಡಿ ಪಾಕ್ ಪ್ರಧಾನಿ ನವಾರ್ ಶರೀಫ್‌ರನ್ನು ತೀಕ್ಷಣ ಶಬ್ದಗಳನ್ನು ಪ್ರಯೋಗಿಸಿ ಟೀಕಿಸಿದ್ದಾರೆಂದು ವರಿದಯಾಗಿದೆ. "ಕ್ಷಮಿಸಿ ಜನಾಬ್ ಶರೀಫ್, ಯಾರು ನಿಮಗೆ ಈ ಹೆಸರು ಇಟ್ಟರೋ ಒಂದು ವೇಳೆ ನಿಮ್ಮ ಚಾರಿತ್ರ್ಯ ತಿಳಿದಿದ್ದರೆ ನಿಮಗೆ ಬೆ-ನವಾರ್ ಶರೀಫ್ ಎಂದು ಹೆಸರಿಡುತ್ತಿದ್ದರು" ಎಂದು ಸಲೀಮ್ ಖಾನ್ ಟ್ವಿಟರ್ ನಲ್ಲಿ ಬರೆದಿದ್ದಾರೆ.
"ದೊಡ್ಡವೊಂದು ಪ್ರಮಾದ ಆಗಿದೆ. ನೀವೆಹೇಳಿದ್ದೀರಿ. ನಿಮ್ಮಮಾತನ್ನು ಯಾರು ಕೇಳುವುದಿಲ್ಲ. ಅದು ನಿಮ್ಮ ಸೇನೆಯಾಗಿದ್ದರೂ,ಸಂಸತ್ತಾದರೂ ಅಥವಾ ನಿಮ್ಮ ಜನರಾದರೂ ಕೂಡಾ. ನಿಮ್ಮ ಗೌರವಾನ್ವಿತ ಕುಟುಂಬವೂ ನಿಮ್ಮ ಮಾತು ಕೇಳುವುದಿಲ್ಲ. ವಿಡಂಬನೆಯೆಂದರೆ ನೀವು ಜಗತ್ತಿಡೀ ಸುತ್ತಾಡಿ ಭಾರತದ ವಿರುದ್ಧ ದೂರು ಹೇಳುತ್ತಿದ್ದೀರಿ. ಹಾಗಿದ್ದರೆ ಯಾರಾದರೂ ನಿಮ್ಮ ಮಾತನ್ನು ಕೇಳುತ್ತಾರೆಯೇ?" ಎಂದು ಸಲೀಮ್ ಖಾನ್ ಪ್ರಶ್ನಿಸಿದ್ದಾರೆಎಂದು ವರದಿಯಾಗಿದೆ.





