ನನ್ನ ತಂದೆ ಇಲ್ಲದ್ದೇ ಒಳ್ಳೆಯದಾಯಿತು, ಇದ್ದಿದ್ದರೆ ಈಗ ಜನರ ಮಾತು ಅವರಿಗೆ ಸಂಕಟ ತರುತ್ತಿತ್ತು: ಶಾರುಖ್

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ದಿನನಿತ್ಯದ ವಿವರಗಳು ಮತ್ತು ಭಾವನೆಗಳನ್ನು ಸಾಮಾಜಿಕ ತಾಣಗಳಲ್ಲಿ ಆಗಾಗ್ಗೆ ಹಂಚುತ್ತಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ದಿವಂಗತ ತಂದೆ ಮೀರ್ ತಾಜ್ ಮೊಹಮ್ಮದ್ ಅವರ ಜೀವನಮಂತ್ರವನ್ನು ಟ್ವೀಟ್ ಮಾಡಿದ್ದಾರೆ.
ನಾನು ನನ್ನ ಸ್ವತಂತ್ರ ಸೇನಾನಿ ತಂದೆಯ ಸಲಹೆಯನ್ನು ಪಾಲಿಸುತ್ತೇನೆ. ನೀನು ಹೆಚ್ಚು ಮೌನಿಯಾದಷ್ಟೂ, ಹೆಚ್ಚು ಕೇಳಬಹುದುಎನ್ನುವುದು ಅವರ ಮಾತು. ಅವರು ಈಗ ಬದುಕಿಲ್ಲದೆ ಇದ್ದದ್ದೇ ಒಳ್ಳೆಯದಾಯಿತು. ಕೆಲವು ಮಂದಿ ಹೇಳಿದ್ದನ್ನು ಕೇಳಿ ಅವರಿಗೆ ಬೇಸರವಾಗುತ್ತಿತ್ತು ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
50 ವರ್ಷ ವಯಸ್ಸಿನ ನಟ ತಾವು ಯಾವ ವಿಷಯದ ಬಗ್ಗೆ ಹೀಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ ಎನ್ನುವುದನ್ನು ಹೇಳಿಲ್ಲ. ಆದರೆ ಅವರು ಹಾಕಿರುವ ಟ್ವೀಟ್‌ನಿಂದ ಅವರ ಮನಸ್ಸಿಗೆ ಬಹಳ ಬೇಸರವಾಗಿರುವುದು ಖಚಿತವಾಗಿದೆ. ವೃತ್ತಿಪರವಾಗಿ ಶಾರುಖ್ ಈಗ ತಮ್ಮ ಮುಂಬರುವ ಸಿನಿಮಾ ದ ರಿಂಗ್‌ಶೂಟಿಂಗ್‌ನಲ್ಲಿ ಆಮ್‌ಸ್ಟರ್ಡಾಮ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಇಮ್ತಿಯಾಜ್ ಅಲಿ ನಿರ್ದೇಶಿಸುತ್ತಿದ್ದು, ಅನುಷ್ಕಾ ಶರ್ಮಾ ಗುಜರಾತಿ ಯುವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಈ ಸಿನಿಮಾದಲ್ಲಿ ಪಂಜಾಬಿ ಪ್ರವಾಸಿ ಮಾರ್ಗದರ್ಶಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
http://www.hindustantimes.com/







