ಜಗತ್ತಿನಲ್ಲಿ ಶಾಂತಿ ನೆಲೆಸಿರುವುದು ಈ ಹತ್ತು ದೇಶಗಳಲ್ಲಿ ಮಾತ್ರ !

ನ್ಯೂಯಾರ್ಕ್,ಸೆಪ್ಟಂಬರ್ 21: ವಿಶ್ವಸಂಸ್ಥೆಯ ಕರೆಯತೆ 1981ರಿಂದ ಸೆಪ್ಟಂಬರ್ 21ರಂದು “ಅಂತಾರಾಷ್ಟ್ರೀಯ ಶಾಂತಿ ದಿನ” ಆಚರಿಸಲಾಗುತ್ತಿದೆ. ಪ್ರತಿಯೊಂದು ದಿನವೂ ಸಂಪೂರ್ಣ ಶಾಂತಿ ತುಂಬಿರಬೇಕೆಂದು ಮತ್ತು ವಿಶ್ವದಾದ್ಯಂತ ಜನರು ಐಕ್ಯದಿಂದ ಬದುಕುವ ಕಾಲ ಬರಬೇಕೆಂದು ಅಂದು ವಿಶ್ವಸಂಸ್ಥೆಯಲ್ಲಿ ಸೇರಿದ್ದವರು ನಿರ್ಧರಿಸಿದ್ದರು. ಆದರೆ ಈಗ ಜಗತ್ತಿನ 200ದೇಶಗಳಲ್ಲಿ ಕೇವಲ 10ದೇಶಗಳು ಮಾತ್ರವೇ ಶಾಂತಿ ಸಮಾಧಾನಗಳಿಂದ ಇವೆ ಎನ್ನಲು ಸಾಧ್ಯವೆಂದು 2016ರ ಗ್ಲೋಬಲ್ ಪೀಸ್ ಇಂಡಕ್ಸ್ ಸೂಚಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ದೇಶದೊಳಗೆ ಮತ್ತು ಅಂತಾರಾಷ್ಟ್ರೀಯವಾಗಿ ಯುದ್ಧ ಅಥವಾ ಘರ್ಷಣೆಗಳಿಲ್ಲದ ರಾಷ್ಟ್ರಗಳು ಈ ಹತ್ತುರಾಷ್ಟ್ರಗಳು. ಚಿಲಿ, ಕೋಸ್ಟಿಕ್, ಜಪಾನ್, ಕತರ್ ,ಬೊಡ್ಸಾವಾನ, ಮಾರಿಶಸ್, ಪನಾಮ, ಸಿಟ್ಝರ್‌ಲೆಂಡ್ ,ಉರುಗ್ವೆ, ವಿಯಟ್ನಾಂ ಎಂಬಿವುಗಳು ಪೀಸ್ ಇಂಡಕ್ಸ್‌ನಲ್ಲಿವೆ. ಇವುಗಳಲ್ಲಿ ಕೆಲವು ರಾಷ್ಟ್ರಗಳಿಗೆ ಕಠಿಣ ಯುದ್ಧನಿರತವಾದ ಇತಿಹಾಸವಿದೆ. ಜಗತ್ತಿನ ಇತರ ಭಾಗಗಳಿಗೆ ಹೋಲಿಸಿದರೆ ಪಶ್ಚಿಮ ಏಷ್ಯದಲ್ಲಿ ಹೆಚ್ಚು ಸಂಘರ್ಷವಿದೆ. ಸಿರಿಯ, ಲಿಬಿಯ, ಇರಾಕ್, ಯಮನ್ ಮುಂತಾದ ರಾಷ್ಟ್ರಗಳಲ್ಲಿ ಸಂಘರ್ಷದ ದಿನಗಳು ಹೆಚ್ಚಳವಾಗುತ್ತಲೇ ಇವೆ ಎಂದು ಸೂಚಿ ತಿಳಿಸಿದೆ.
ಹಲವು ಸಂಘರ್ಷಗಳು ಆರಂಭಿಸುವಾಗ ತಡೆಯಲು ಸಾಧ್ಯವಾಗದಿರುವುದು ನಂತರ ಅದು ನಿಯಂತ್ರಣಾತೀತವಾಗಿ ಬೆಳವಣಿಗೆ ಕಾಣಲು ಕಾರಣವಾಗಿವೆ. ಇದರಲ್ಲಿ ಶೆ.75ರಷ್ಟು ಸಿರಿಯ, ಇರಾಕ್, ಅಫ್ಘಾನಿಸ್ತಾನ ಮುಂತಾದ ರಾಷ್ಟ್ರಗಳಲ್ಲಿನಡೆಯುತ್ತಿವೆ. ಅಮೆರಿಕ, ಇರಾಕ್ ಮತ್ತು ಅಫ್ಘಾನ್‌ನಲ್ಲಿ ಆರಂಭಿಸಿದ ಯುದ್ಧಗಳಿಗೆ ದಶಕಗಳೇ ಕಳೆದರೂ ಈಗಲೂ ಮುಂದುವರಿಯುತ್ತಿದೆ. ಶಾಂತಿಯ ಪರವಿದ್ದ ಕೆಲವು ದೇಶಗಳು ಅಶಾಂತಿಯೆಡೆಗೆ ಸಾಗುತ್ತಿರುವ ಅವಸ್ಥೆ ಕಂಡು ಬರುತ್ತಿದೆ.
ವಿಶ್ವಸಂಸ್ಥೆಯ 71ನೆ ಸಾಮಾನ್ಯ ಸಭೆ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಈಸಂದರ್ಭದಲ್ಲಿಯೇ ಈ ಬಾರಿಯ ಶಾಂತಿಯದಿನ ಆಗಮಿಸಿದೆ. ಸಿರಿಯ ಸಹಿತ ಹಲವು ದೇಶಗಳಲ್ಲಿ ಶಾಂತಿ ಮರುಸ್ಥಾಪನೆಗಾಗಿ ಪ್ರಯೋಜನಕರವಾದ ಚರ್ಚೆಗಳೂ ಮತ್ತು ತೀರ್ಮಾನಗಳಿಗೆ ವಿಶ್ವಸಂಸ್ಥೆ ವೇದಿಕೆಯಾಗಲಿದೆಯೇ ಎಂದು ಈ ಸಂದರ್ಭದಲ್ಲಿ ಜಗತ್ತುಕಾದು ನೋಡುತ್ತಿದೆ ಎಂದು ವರದಿ ತಿಳಿಸಿದೆ.







