ಕೋಡಿ: ಬ್ಯಾರೀಸ್ ಪದವಿ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಭೆ

ಕುಂದಾಪುರ, ಸೆ.21: ಕೋಡಿಯ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಮಾತನಾಡಿ, ವಿದ್ಯಾರ್ಥಿ ಹೆತ್ತವರ ಜವಾಬ್ದಾರಿಗಳನ್ನು ತಿಳಿಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್ ಪ್ರಾಸ್ತಾವಿಕವಾಗಿ ನುಡಿದರು. 2016-17ನೆ ಸಾಲಿನ ರಕ್ಷಕ-ಶಿಕ್ಷಕ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಅಲಿ, ವಾಣಿಜ್ಯ ಉಪನ್ಯಾಸಕಿ ಮಾಲತಿ ಕಾರ್ಯದರ್ಶಿಯಾಗಿ, ಶುಕ್ರ ಮೊಗವೀರ ಜಂಟಿ ಕಾರ್ಯದರ್ಶಿಯಾಗಿ, ಸದಸ್ಯರಾಗಿ ಅಮೀನಾ, ಫಯಾಝ್ ಅಹ್ಮದ್, ಶಂಕರ್ ಬಂಗೇರ, ವನಜಾ ಆಯ್ಕೆಯಾದರು.
ಗಣಕಶಾಸ್ತ್ರ ಉಪನ್ಯಾಸಕಿ ನೂತನ್ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ಮಾಲತಿ ವಂದಿಸಿದರು. ಕನ್ನಡ ಉಪನ್ಯಾಸಕ ಸಂದೀಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Next Story





