ಖಾತೆ ಮುಚ್ಚಿದ ಬಳಕೆದಾರರ ಮಾಹಿತಿ: ವಾಟ್ಸಾಪ್ ಹೇಳಿದ್ದೇನು?

ಹೊಸದಿಲ್ಲಿ,ಸೆ.21: ಬಳಕೆದಾರನ ಖಾತೆಯನ್ನು ತೆಗೆದುಹಾಕಿದ ನಂತರ ಆ ವ್ಯಕ್ತಿಯ ಕುರಿತು ಮಾಹಿತಿಗಳನ್ನು ತನ್ನ ಸರ್ವರ್‌ನಲ್ಲಿ ಉಳಿಸಿಕೊಳ್ಳಲಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣ ವೇದಿಕೆ ವಾಟ್ಸಾಪ್ ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತು.
ಮುಖ್ಯ ನ್ಯಾಯಾಧೀಶೆ ಜಿ.ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಅವರ ಪೀಠವು ಈ ಬಗ್ಗೆ ವಾಟ್ಸಾಪ್‌ನ್ನು ಪ್ರಶ್ನಿಸಿತ್ತು.
ವಾಟ್ಸಾಪ್‌ನ ನೂತನ ಗೋಪ್ಯತೆ ನೀತಿಯನ್ನು ಪ್ರಶ್ನಿಸಿರುವ ಅರ್ಜಿದಾರರಾದ ಕರ್ಮಣ್ಯಾ ಸಿಂಗ್ ಮತ್ತು ಶ್ರೇಯಾ ಸೇಥಿ ಅವರು ಅದರ ಹೇಳಿಕೆಯನ್ನು ವಿರೋಧಿಸಿ, ಕಂಪನಿಯ ಅಫಿದಾವತ್ತಿನಂತೆ ಬಳಕೆದಾರರ ಮಾಹಿತಿಗಳು ಸುದೀರ್ಘ ಕಾಲ ಅದರ ಬಳಿಯಿರುತ್ತವೆ ಎಂದು ಹೇಳಿದರು. ಉಭಯ ಪಕ್ಷಗಳ ವಾದವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯವು ಸೆ.23ರಂದು ಆದೇಶವನ್ನು ಹೊರಡಿಸುವುದಾಗಿ ತಿಳಿಸಿತು.
Next Story





