ಸತತ ಪರಿಶ್ರಮದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ: ಶಾಸಕ ಮಧು ಬಂಗಾರಪ್ಪ
ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮ

ಸೊರಬ, ಸೆ. 21: ಸಾಧಕರಾಗಲು ಬುದ್ಧಿವಂತಿಕೆ ಮಾತ್ರ ಸಾಲದು ಬದಲಿಗೆ ಕಲಿಕೆಯಲ್ಲಿ ಹಿಂದುಳಿದವರು ತಮ್ಮ ಸ್ವಂತ ವಿವೇಚನೆ ಹಾಗೂ ಸತತ ಪರಿಶ್ರಮದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದು ಶಾಸಕ ಮಧು ಬಂಗಾರಪ್ಪ ಅಭಿಪ್ರಾಯಿಸಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ಕನ್ನಡ ಸಂಘ, ರೆಡ್ ಕ್ರಾಸ್ ಯುವ ಘಟಕ, ಹಾಗೂ ರೋವರ್ಸ್-ರೇಂಜರ್ಸ್ ಹಾಗೂ ಎನ್ನೆಸ್ಸೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಾಧನೆ ಮಾಡಲು ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ, ಸಿಕ್ಕ ಅವಕಾಶಗಳನ್ನು ಕೈಚೆಲ್ಲದೆ ಸ್ಪಷ್ಟ ಗುರಿಯೊಂದಿಗೆ ಮುನ್ನಡೆದಾಗ ನಾವು ಅಂದುಕೊಂಡ ಗುರಿಯನ್ನು ಸಾಧಿಸಬಹುದಾಗಿದೆ. ಸರಕಾರ ಕೇವಲ ನಗರ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ಸೀಮಿತವಾಗದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಮುಂದಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಉತ್ತಮ ಪ್ರತಿಭೆಗಳಿದ್ದು, ಅಂತಹ ಪ್ರತಿಭೆಗಳನ್ನು ಗುರುತಿಸುವಲ್ಲಿ ಶಾಲಾ-ಕಾಲೇಜುಗಳ ಬಗ್ಗೆ ಸರಕಾರ ವಿಶೇಷ ಗಮನ ಹರಿಸಬೇಕು. ಶಾಲಾ-ಕಾಲೇಜುಗಳು, ಕಚೆೇರಿಗಳಿಗೆ ರಜೆ ನೀಡದೆ ರಜೆರಹಿತ ಜಯಂತಿಗಳನ್ನು ಆಚರಿಸುವುದರಿಂದ ಮಹಾನ್ ವ್ಯಕ್ತಿಗಳ ಸಾಧನೆ ಅರ್ಥಮಾಡಿಕೊಳ್ಳಬಹುದಾಗಿದೆ. ಇಲ್ಲವಾದರೆ ಕೇವಲ ಬೆರಳೆಣಿಕೆಯಷ್ಟು ಮಂದಿ ಕಾರ್ಯಕ್ರಮ ನಡೆಸಿದರೆ, ಅವರ ಚರಿತ್ರೆಗಳನ್ನು ಕೇವಲ ಪಠ್ಯಗಳಲ್ಲಿ ಕಾಣುವಂತಾಗುವ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ರೆಡ್‌ಕ್ರಾಸ್ ಅಧ್ಯಕ್ಷ ಧರಣೇಂದ್ರ ದಿನಕರ್ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯು ಸುಮಾರು 150 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಸಂಕಷ್ಟದಲ್ಲಿರುವವರ ರಕ್ಷಣೆಯು ಇದರ ಪ್ರಮುಖ ಉದ್ದೇಶವಾಗಿದೆ. ಯುದ್ಧ, ಪ್ರಾಕೃತಿಕ ವಿಕೋಪಗಳಂತಹ ಸಂದಭರ್ಗಳಲ್ಲಿ ರಕ್ತದ ತುರ್ತು ಆವಶ್ಯಕತೆಗಳಲ್ಲಿ ರಕ್ತದಾನ ನೀಡುವುದು ಸೇರಿದಂತೆ, ಅನೇಕ ಕ್ಷೇತ್ರಗಳಲ್ಲಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದ ಅವರು , ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ರಕ್ತದಾನದಂತಹ ಪುಣ್ಯದ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲ ಮುಹಮ್ಮದ್ ಅಲಿ ವಹಿಸಿದ್ದರು. ಈ ಸಂದಭರ್ದಲ್ಲಿ ಕೊಡಕಣಿ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೈ.ಜಿ.ಪುಟ್ಟಸ್ವಾಮಿ, ಸಿಡಿಸಿ ಸದಸ್ಯರಾದ ಕೃಷ್ಣಮೂರ್ತಿ, ಮಂಜುನಾಥ್, ಬಸವರಾಜಪ್ಪ ಕೊಡಕಣಿ, ಸುಧೀರ್ ಪೈ, ಎನ್ನೆಸ್ಸೆಸ್ ಘಟಕದ ಸಂಚಾಲಕರಾದ ಎಂ.ಎಚ್. ರಾಜಪ್ಪ, ಎಚ್. ಸೀಮಾ ಕೌಸರ್, ಕ್ರೀಡಾ ಸಂಚಾಲಕ ಡಾ. ಶ್ಯಾಮ್ ಸುಂದರ್, ಬೋಧಕ ಹಾಗೂ ಬೋಧಕೇತರ ವರ್ಗ ಹಾಗೂ ವಿ
್ಯಾರ್ಥಿಗಳು ಉಪಸ್ಥಿತರಿದ್ದರು.







