ಬ್ಯಾರಿ ಭಾಷಾ ಸಪ್ತಾಹ ವಿವಿಧ ಸ್ಪರ್ಧೆಗಳಿಗೆ ಆಹ್ವಾನ
ಮಂಗಳೂರು, ಸೆ.21: ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಸೆ.27ರಿಂದ ‘ಬ್ಯಾರಿ ಭಾಷಾ ಸಪ್ತಾಹ’ ಕಾರ್ಯಕ್ರಮ ಆಯೋಜಿಸಿದೆ. ಈ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಬ್ಯಾರಿ ಹಾಡುಗಳ ಸ್ಪರ್ಧೆ: ಬ್ಯಾರಿ ಹಾಡುಗಳನ್ನು ವಾಟ್ಸ್ ಆ್ಯಪ್ ಮೂಲಕ ಮೊ.ಸಂ.: 9972097927, 9686138554, 9986999076ಗೆ ಹಾಡುಗಾರರ ಮತ್ತು ಸಾಹಿತಿಯ ಹೆಸರು, ಪೂರ್ಣವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರದೊಂದಿಗೆ ಹಾಡುಗಳನ್ನು ಸೆ.25ರೊಳಗೆ ಕಳುಹಿಸಬೇಕು.
ಪ್ರಬಂಧಸ್ಪರ್ಧೆ: ‘ಬ್ಯಾರಿ ಬಾಸೆರೊ ಬೆಲೆಚೆಲ್ ಎಙನೆ?’ (ಬ್ಯಾರಿ ಬಾಷೆಯ ಅಭಿವೃದ್ಧಿ ಹೇಗೆ?) ಎಂಬ ವಿಷಯದ ಬಗ್ಗೆ ವಿದ್ಯಾರ್ಥಿ ವಿಭಾಗ ಮತ್ತು ಸಾರ್ವಜನಿಕ ವಿಭಾಗಕ್ಕೆ ಬ್ಯಾರಿ ಭಾಷೆಯಲ್ಲಿ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಬಂಧವು ಎ4 ಶೀಟ್‌ನಲ್ಲಿ ಕಂಪ್ಯೂಟರ್ ಪ್ರಿಂಟ್ ಮಾಡಿಸಿ ಕನಿಷ್ಠ 3 ಪುಟಗಳನ್ನು ಹೊಂದಿರಬೇಕು. ಆಸಕ್ತರು ಸೆ.28ರೊಳಗೆ ಪ್ರಬಂಧ ಬರೆದು ಸಂಪೂರ್ಣ ವಿಳಾಸದೊಂದಿಗೆ ಅಕಾಡಮಿಯ ವಿಳಾಸಕ್ಕೆ ಕಳುಹಿಸಿಕೊಡಬೇಕು. ಗಾದೆ, ಚುಟುಕು ಸ್ಪರ್ಧೆ: ಬ್ಯಾರಿ ಗಾದೆ ಮತ್ತು ಬ್ಯಾರಿ ಚುಟುಕು ಸ್ಪರ್ಧೆಯನ್ನು ಸೆ.30ರಂದು ಅಪರಾಹ್ನ 2:30ಕ್ಕೆ ಮಂಗಳೂರಿನ ಅತ್ತಾವರದ ಪ್ರಿಸಿಡಿಯಮ್ ಕಾಂಪ್ಲೆಕ್ಸ್‌ನಲ್ಲಿರುವ ಅಕಾಡಮಿಯ ಕಚೇರಿಯಲ್ಲಿ ಏರ್ಪಡಿಸಿದೆ. ಸ್ಪರ್ಧಾಳುಗಳು ತಿರುಳು ಸಮೇತ ಬ್ಯಾರಿ ಗಾದೆ ಹೇಳಬೇಕು. ಚುಟುಕುಗಳನ್ನು ವಾಚಿಸಬೇಕು.
ಮಹಿಳೆಯರಿಗೆ ಓದುವ ಸ್ಪರ್ಧೆ: ಮಹಿಳೆಯರಿಗೆ ಬ್ಯಾರಿ ಭಾಷೆ ಓದುವ ಸ್ಪರ್ಧೆಯನ್ನು ಅ.2ರಂದು ಅಪರಾಹ್ನ 2:30ಕ್ಕೆ ಅಕಾಡಮಿಯ ಕಚೇರಿಯಲ್ಲಿ ಏರ್ಪಡಿಸಿದೆ. ಎಲ್ಲ ಸ್ಪರ್ಧೆಗಳ ವಿಜೇತರಿಗೆ ಸೂಕ್ತ ಬಹುಮಾನ ನೀಡಲಾ ಗುವುದು. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು/ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಪ್ರಿಸಿಡಿಯಮ್‌ಕಮರ್ಷಿಯಲ್ ಕಾಂಪ್ಲೆಕ್ಸ್, ಅತ್ತಾವರ, ನಂದಿಗುಡ್ಡೆ ರಸ್ತೆ, ಮಂಗಳೂರು 575001, ದೂ.ಸಂ.: 0824-2412297, 4260038ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಸೆ.24: ತುಳು ಅಕಾಡಮಿ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಸಮಾರಂಭ ಮಂಗಳೂರು, ಸೆ.21: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2015ರ ಸಾಲಿನ ‘ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭವು ಸೆ.24ರಂದು ಅಪರಾಹ್ನ 3:30ಕ್ಕೆ ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ತುಳುಭವನದ ಸಿರಿಚಾವಡಿಯಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾರಂಭದಲ್ಲಿ ಡಾ.ಇಂದಿರಾ ಹೆಗ್ಡೆ (ಸಾಹಿತ್ಯ ಕ್ಷೇತ್ರ), ಕೋಟಿ ಪರವ (ಜಾನಪದ ಕ್ಷೇತ್ರ), ಬೇತ ಕುಂಞ ಕುಲಾಲ್ (ಯಕ್ಷಗಾನ ಕ್ಷೇತ್ರ)ರಿಗೆ 2015ನೆ ಸಾಲಿನ ಕರ್ನಾಟಕ ತುಳು ಸಾತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುಸ್ತಕ ಬಹುಮಾನವನ್ನು ಚೆನ್ನಪ್ಪ ಅಳಿಕೆ (ಕವನ ವಿಭಾಗ), ವಸಂತಿ ಶೆಟ್ಟಿ ಬ್ರಹ್ಮಾವರ (ಕಥಾ ವಿಭಾಗ), ಶಿಮಂತೂರು ಚಂದ್ರಹಾಸ ಸುವರ್ಣ (ನಾಟಕ ವಿಭಾಗ) ಪಡೆಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





