ರಾಷ್ಟ್ರಮಟ್ಟದ ಕಾರು ರ್ಯಾಲಿ
ಅರೂರು ಅರ್ಜುನ್, ಸತೀಶ್‌ರಿಗೆ ಪ್ರಶಸ್ತಿ,
ಮಂಗಳೂರು, ಸೆ.21: ಎಂ.ಆರ್.ಎಫ್. ಇತ್ತೀಚೆಗೆ ದಿಲ್ಲಿಯ ಗುರ್ಗಾಂವ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಾರು ರ್ಯಾಲಿಯಲ್ಲಿ ಮಂಗಳೂರಿನ ಅರವಿಂದ್ ಮೋಟಾರ್ಸ್ ಪ್ರೈ. ಲಿ.ನ ನಿರ್ದೇಶಕ ಅರೂರು ಅರ್ಜುನ್ ರಾವ್ ಮತ್ತು ಅವರ ಸಹಚಾಲಕ ಸತೀಶ್ ರಾಜಗೋಪಾಲ್ ಪ್ರಥಮ ಸ್ಥಾನ ಗಳಿಸಿದ್ದಾರೆ.
55 ಕಿ.ಮೀ. ಅತ್ಯಂತ ದುರ್ಗಮ ಮತ್ತು ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಯನ್ನು ಅರ್ಜುನ್ 47.10 ನಿಮಿಷದಲ್ಲಿ ಕ್ರಮಿಸಿ ಈ ಪ್ರಶಸ್ತಿ ಜಯಿಸಿದ್ದಾರೆ. ಇವರು ಚಲಾಯಿಸಿದ ಪೋಕ್ಸ್‌ವೇಗನ್ ಪೋಲೊ ಕಾರನ್ನು ಮಂಗಳೂರಿನ ಮಾರುತಿ ಸುಝುಕಿ ಕಾರುಗಳ ಅಧಿಕೃತ ಮಾರಾಟಗಾರ ಸಂಸ್ಥೆ ಮಾಂಡವಿ ಮೋಟಾರ್ರ್ಸ್ ಪ್ರೈ. ಲಿ. ಪ್ರಾಯೋಜಿಸಿದೆ. ರ್ಯಾಲಿಯಲ್ಲಿ 38 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಕರ್ಣ ಕಡೂರು ಮತ್ತು ನಿಖಿಲ್ ಪೈ ದ್ವಿತೀಯ, ಮಹೇಂದ್ರ ಟೀಮ್‌ನ ಗೌರವ್ ಗಿಲ್ ಮತ್ತು ಮೂಸಾ ಶರೀಫ್ ತೃತೀಯ ಸ್ಥಾನ ಗಳಿಸಿದ್ದಾರೆ.
ಇದರ ದ್ವಿತೀಯ ಹಂತ ನವೆಂಬರ್ 26, 27ರಂದು ಬೆಂಗಳೂರಿನಲ್ಲಿ ಹಾಗೂ ಅಂತಿಮ ಸುತ್ತು ಡಿಸೆಂಬರ್ 3ರಿಂದ 5ರವರೆಗೆ ಚಿಕ್ಕಮಗಳೂರಿನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.





