ಈ ಪ್ರಶ್ನೆಗಳಿಗೆ ಉತ್ತರಿಸಿ ನಿಮ್ಮ ಹೃದಯದ ಆರೋಗ್ಯ ಸ್ಥಿತಿ ತಿಳಿದುಕೊಳ್ಳಿ
ಹೃದಯರೋಗ ಬಹಳ ಮಾರಕ ಮತ್ತು ಅದರ ಪರಿಣಾಮಗಳೇನು ಎನ್ನುವುದು ನಾವೆಲ್ಲಾ ಓದಿರುತ್ತೇವೆ. ಆದರೆ ನಮ್ಮದೇ ಹೃದಯದ ಬಗ್ಗೆ ನಾವೆಷ್ಟು ಜಾಣರು? ನಮ್ಮ ಅಲಕ್ಷ್ಯದ ಕಾರಣದಿಂದಲೇ ನಮ್ಮಲ್ಲಿ ಬಹಳಷ್ಟು ಮಂದಿ ಹೃದಯ ಸಮಸ್ಯೆಗಳನ್ನು ಕಾಣುತ್ತೇವೆ. ಹೃದಯಕ್ಕೆ ಆದ ಹಾನಿಯನ್ನು ಬದಲಿಸುವುದು ಬಹುತೇಕ ಅಸಾಧ್ಯವೇ ಆಗಿರುತ್ತದೆ. ಹೀಗಾಗಿ ನೀವು ಹೃದಯದ ಬಗ್ಗೆ ಜಾಣರಾಗಿರಬೇಕೆಂದರೆ ಸ್ವತಃ ಪರೀಕ್ಷಿಸಿಕೊಳ್ಳಿ:
ನಿಮ್ಮ ಕೊಲೆಸ್ಟರಾಲ್ ಮಟ್ಟ ಎಷ್ಟು ಎನ್ನುವುದು ನಿಮಗೆ ಗೊತ್ತೆ?
10 ಮಂದಿಯಲ್ಲಿ ಒಬ್ಬರು ಮಾತ್ರ ತಮ್ಮ ಕೊಲೆಸ್ಟರಾಲ್ ಮಟ್ಟದ ಬಗ್ಗೆ ತಿಳಿದುಕೊಂಡಿರುತ್ತಾರೆ. ದೇಹದ ಕೋಶಗಳು ಉತ್ತಮವಾಗಿ ಕೆಲಸ ಮಾಡುವಲ್ಲಿ ಕೊಲೆಸ್ಟರಾಲ್ ಮಹತ್ವದ ಪಾತ್ರವಹಿಸುತ್ತದೆ. ಆದರೆ ಕೊಲೆಸ್ಟರಾಲ್ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಹೃದಯ ರೋಗಕ್ಕೆ ಕಾರಣವಾಗಬಹುದು.
ರಕ್ತದ ಒತ್ತಡದ ಬಗ್ಗೆ ನಿಮಗೆ ಗೊತ್ತೆ?
ಶೇ. 50ಕ್ಕಿಂತಲೂ ಕಡಿಮೆ ಮಂದಿ ತಮ್ಮ ರಕ್ತದ ಒತ್ತಡವನ್ನು ತಿಳಿದುಕೊಂಡಿದ್ದಾರೆ. ಅಧಿಕ ರಕ್ತದೊತ್ತಡ ಹೃದಯದ ಸಮಸ್ಯೆಯನ್ನು ತರುತ್ತದೆ. ರಕ್ತದೊತ್ತಡವನ್ನು ಗಮನಿಸಿಕೊಂಡು ಅದು 120ರಿಂದ 80ರ ಒಳಗೆ ಇರುವುದನ್ನು ಖಚಿತಪಡಿಸಿ.
ನೀವು ಸೂಕ್ತ ತೂಕವನ್ನು ಹೊಂದಿದ್ದೀರಾ?
ಬಹಳಷ್ಟು ಮಂದಿಗೆ ತಮ್ಮ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಗೊತ್ತಿಲ್ಲ. ಅಧಿಕ ಬಿಎಂಐ ಅಥವಾ ಅಧಿಕ ತೂಕ ಇದ್ದರೆ ಹೃದಯ ರೋಗದ ಅಪಾಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಅದು ಟೈಪ್2 ಮಧುಮೇಹಕ್ಕೆ ಕಾರಣವಾಗಬಹುದು.
ಧೂಮಪಾನ ಮತ್ತು ಮದ್ಯಸೇವನೆಯಿಂದ ದೂರವಿದ್ದೀರಾ?
ಬಹಳಷ್ಟು ಮಂದಿಗೆ ಧೂಮಪಾನ ಜೀವಕ್ಕೆ ಹಾನಿ ಎಂದು ಗೊತ್ತಿದೆ. ಆದರೆ ಧೂಮಪಾನ ಹೃದಯ ರೋಗದ ಅಪಾಯ ತರುತ್ತದೆ ಎನ್ನುವುದು ಗೊತ್ತೆ? ಧೂಮಪಾನ ನಿಲ್ಲಿಸುವಾಗ, ನೀವು ಧೂಮಪಾನ ನಿಲ್ಲಿಸಿದರೆ , ನಿಮ್ಮ ಹೃದಯದ ಆಯಸ್ಸು ಹತ್ತು ವರ್ಷ ಹೆಚ್ಚಿಸಿದಂತೆ .
ಇದರಲ್ಲಿ ಎರಡು ಪ್ರಶ್ನೆಗಳಿಗಿಂತ ಹೆಚ್ಚು ಪ್ರಶ್ನೆಗೆ ನೀವು ಇಲ್ಲ ಎಂದು ಉತ್ತರಿಸಿದ್ದರೆ ನಿಮ್ಮ ಹೃದಯ ಅಪಾಯದಲ್ಲಿದೆ ಎಂದುಕೊಳ್ಳಬೇಕು.
http://timesofindia.indiatimes.com/