Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಯುಎಇ ಉದ್ಯೋಗಿಗಳೇ ಎಚ್ಚರಿಕೆ!

ಯುಎಇ ಉದ್ಯೋಗಿಗಳೇ ಎಚ್ಚರಿಕೆ!

ಭಾರತೀಯನಿಗೆ ಬಾಡಿಗೆ ಹೆಸರಲ್ಲಿ 23000 ದಿರ್ಹಮ್ ವಂಚನೆ

ವಾರ್ತಾಭಾರತಿವಾರ್ತಾಭಾರತಿ22 Sept 2016 12:53 PM IST
share
ಯುಎಇ ಉದ್ಯೋಗಿಗಳೇ ಎಚ್ಚರಿಕೆ!

ರಾಜೇಶ್ ಕುಮಾರ್ ಗುಪ್ತಾ ಅಲ್ ಮುಶ್ರಿಫ್‌ನಲ್ಲಿ ಸ್ಟುಡಿಯೋ ಫ್ಲಾಟ್ ಅನ್ನು ವಾರ್ಷಿಕ 25,000 ದಿರ್ಹಮ್‌ಗೆ ಪಡೆದುಕೊಂಡಾಗ ಉತ್ತಮ ವ್ಯವಹಾರ ಕುದುರಿಸಿದೆ ಎಂದುಕೊಂಡಿದ್ದರು. ಸೆಪ್ಟೆಂಬರ್ 13ರಂದು ಅವರು ಮುಶ್ರಿಫ್ ಮಾಲ್‌ನ ಈ ಹೊಸ ಫ್ಲಾಟ್‌ಗೆ ಒಂದೇ ಬಾರಿ ಒಟ್ಟು ಮೊತ್ತವನ್ನು ಪಾವತಿಸಿ ನಿವಾಸ ಬದಲಿಸಿಕೊಂಡರು. ಆದರೆ ಒಂದೇ ದಿನದಲ್ಲಿ ಅವರು ಮನೆಯಿಂದ ಹೊರಗೆ ಹೋಗಬೇಕಾದ ಸನ್ನಿವೇಶ ಎದುರಾಯಿತು.

ಶೇಖ್ ಮೊಹಮ್ಮದ್ ಸೊರೂರ್ ಮೊಹಮ್ಮದ್ ಸೈಫ್ ಅಲ್ ಶರ್ಕಿ ಎಂದು ಹೇಳಿಕೊಂಡ ನಕಲಿ ವ್ಯಕ್ತಿಯೊಬ್ಬ ಎಮಿರಾಟಿಯ ಮಾಲೀಕನೆಂದು ರಾಜಸ್ಥಾನದ ರಾಜೇಶ್ ಕುಮಾರ್‌ರನ್ನು ಮೋಸ ಮಾಡಿದ್ದ. ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಶೇಖ್ ಮೊಹಮ್ಮದ್ ಅಲ್ ಶರ್ಕಿ ಫ್ಯೂಜೈರಾದ ದೊಡ್ಡ ಶ್ರೀಮಂತ ಎಂದು ತಿಳಿಸಿದರು. ಆದರೆ ಎಮಿರೇಟ್ಸ್ ಐಡಿ ಮತ್ತು ಬಾಡಿಗೆ ಒಪ್ಪಂದದಲ್ಲಿರುವ ಅಲ್ ಶರ್ಕಿಯ ಸಹಿ ಎರಡೂ ಭಿನ್ನವಾಗಿತ್ತು. ಇದರಿಂದಲೇ ರಾಜೇಶ್ ಮೋಸ ಹೋಗಿರುವುದು ಖಚಿತವಾಯಿತು.

ಗುಪ್ತಾ ರಾಜಧಾನಿಯಲ್ಲಿ ಕಳೆದ 11 ವರ್ಷಗಳಿಂದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಬಹುತೇಕ ಇತರ ನಿವಾಸಿಗಳಂತೆ ಗುಪ್ತಾ ಕೂಡ ಬಾಡಿಗೆ ನಿಯಮಗಳನ್ನು ತಿಳಿಸುವ ಅಬುಧಾಬಿ ಪಾಲಿಕೆಯ ತಾವ್ತೀಕ್ ಯೋಜನೆಯ ಬಗ್ಗೆ ಅರಿತಿರಲಿಲ್ಲ. ತನಗೆ ಆಗಿರುವ ವಂಚನೆ ಇತರರಿಗೆ ಪಾಠವಾಗಲಿ ಎನ್ನುವುದು ಅವರ ಅಭಿಪ್ರಾಯ. ಮುಸಾಫಾದಲ್ಲಿ ಗುಪ್ತಾ 11 ವರ್ಷಗಳಿಂದ ತಮ್ಮ ಕುಟುಂಬದ ಜೊತೆಗೆ ನೆಲೆಸಿದ್ದಾರೆ. ಪ್ರಸ್ತುತ ಉದ್ಯೋಗ ಮಾರುಕಟ್ಟೆ ಬಗ್ಗೆ ತಿಳಿಯದೇ ಜೈಪುರದಿಂದ ಕುಟುಂಬ ಸಮೇತ ಬಂದಿದ್ದರು. ಹೀಗಾಗಿ ಒಂದು ಕೊಠಡಿಯ ಅಪಾರ್ಟ್‌ಮೆಂಟ್ ಹುಡುಕುತ್ತಿದ್ದರು. ಡುಬಿಜಿಲ್ ಡಾಟ್ ಕಾಮ್ ಪರೀಕ್ಷಿಸಿದಾಗ ಅವರಿಗೆ ಸೂಕ್ತವೆನಿಸುವ ಮನೆ ಸಿಕ್ಕಿತ್ತು. ಸೆಪ್ಟೆಂಬರ್ 3ರಂದು ಸ್ಟುಡಿಯೋ ಫ್ಲಾಟ್ ಒಂದರ ನಾಲ್ಕು ಚಿತ್ರಗಳಿರುವ ಜಾಹೀರಾತು ನೋಡಿ ಕಾಸಿಮ್ ಎನ್ನುವ ಮಧ್ಯವರ್ತಿಯನ್ನು ಸಂಪರ್ಕಿಸಿದೆ. ಆತ ನನಗೆ 25000 ದಿರ್ಹಮ್ ಎಂದು ಹೇಳಿದ. ಆದರೆ ನನಗೆ 2000 ದಿರ್ಹಮ್ ಕಡಿಮೆ ಮಾಡಿ ನೀಡುವುದಾಗಿಯೂ ಹೇಳಿದ. ಅದೇ ದಿನ ನಾನು ಫ್ಲಾಟ್ ಪರೀಕ್ಷಿಸಿ ನೆರೆಹೊರೆಯವರತ್ತಲೂ ವಿಚಾರಿಸಿದೆ. ನೆರೆಮನೆಯ ವ್ಯಕ್ತಿ ಮತ್ತೊಬ್ಬ ಏಜೆಂಟನಿಂದ ಮನೆ ಪಡೆದಿದ್ದಾಗಿ ಹೇಳಿದರೂ ಕಾಸಿಂ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದ. ಹೀಗಾಗಿ ಗುಪ್ತಾ ಒಂದೇ ಬಾರಿ ಹಣ ಪಾವತಿಸಿ ಮನೆ ಪಡೆಯಲು ಒಪ್ಪಿದರು. ನಂತರ ಮಾಲಕ ಅಲ್ ಶಕ್ರಿಯನ್ನು ಮಜ್ಯಾದ್ ಮಾಲ್‌ನಲ್ಲಿ ಭೇಟಿ ಮಾಡಲು ಕರೆದೊಯ್ಯುವುದಾಗಿ ಹೇಳಿದರೂ ಆತ ಬಾರದೆ, ನಾನೇ ಸ್ವತಃ ಅಲ್ ಐನ್ ರಸ್ತೆಯಲ್ಲಿರುವ ಮಾಲಕರ ಬಳಿ ಹೋಗಿ ಹಣ ಪಾವತಿಸಬೇಕು ಎಂದು ಹೇಳಿದ. ಮಾಲಕನ ವಿಳಾಸ ತಿಳಿದ ಮೇಲೆ ಆತನ ಮಾತಿನಲ್ಲಿ ನಂಬಿಕೆ ಬಂದು ಮರುದಿನ ಅಲ್ಲಿಗೆ ಹೋಗಲು ನಿರ್ಧರಿಸಿದೆ.

ಸೆಪ್ಟಂಬರ್ 9ರಂದು ಮಾಲಕ ಏರ್‌ಪೋರ್ಟ್ ರಸ್ತೆಯಲ್ಲಿ ಕೇರ್‌ಫೋರ್ ಪಾರ್ಕಿಂಗ್ ಸ್ಥಳದಲ್ಲಿ ಸಿಕ್ಕಿ ಸಂಕ್ಷಿಪ್ತವಾಗಿ ಮಾತನಾಡಿ ಮನೆಯ ಕೀಲಿ ಕೈ ಮತ್ತು ಬಾಡಿಗೆ ಒಪ್ಪಂದ ಪತ್ರ, ಪವರ್ ಆಫ್ ಅಟಾರ್ನಿ, ಪಾಸ್‌ಪೋರ್ಟ್ ಕಾಪಿ ಮತ್ತು ಪಾಲಿಕೆ ವ್ಯವಹಾರದ ಕಾಗದ ಪತ್ರಗಳನ್ನು ಕೊಟ್ಟ. ನಾನು ಪೂರ್ಣ ಮೊತ್ತವನ್ನು ಪಾವತಿಸಿದೆ. ಆತ ರಶೀದಿ ಕೊಟ್ಟು ಹೊರಟು ಹೋದ. ಟೈಪಿಂಗ್ ಸೆಂಟರ್‌ನ ಸಿಬ್ಬಂದಿ ಬಳಿ ಪರಿಶೀಲಿಸಿದಾಗ ಪವರ್ ಆಫ್ ಅಟಾರ್ನಿ ಶೇಖ್ ಮೊಹಮ್ಮದ್ ಸೊರೂರ್ ಮೊಹಮ್ಮದ್ ಸೈಫ್ ಅಲ್ ಶರ್ಕಿ ಅವರದ್ದೇ ಎಂದು ಖಚಿತಪಡಿಸಿದರು. ಮುತಾ ಸೈಫ್ ಕಾಮಿ ಸಯೀದ್ ಅಲ್ ಕಾಬಿಯ ಪಾಸ್‌ಪೋರ್ಟ್ ಮತ್ತು ಎಮಿರೇಟ್ಸ್ ಐಡಿ ಕೂಡ ಕೊಟ್ಟಿದ್ದರು. ಅದು ಏಕೆ ಎಂದು ಸ್ವತಃ ರಾಜೇಶ್‌ಗೆ ತಿಳಿದಿರಲಿಲ್ಲ. ಸೆಪ್ಟಂಬರ್ 13ರಂದು ರಾಜೇಶ್ ಮನೆ ನಂಬ್ರ 77ಕ್ಕೆ ನಿವಾಸ ಬದಲಿಸಿಕೊಂಡು ಟಿವಿ ಕನೆಕ್ಷನ್ ಕೂಡ ಮಾಡಿಸಿಕೊಂಡರು. ಆದರೆ ಮರುದಿನ ಅವರಿಗೆ ಆಘಾತ ಕಾದಿತ್ತು. ಬೆಳಗ್ಗೆ ವ್ಯಕ್ತಿಯೊಬ್ಬ ಬಂದು ಆ ಮನೆಯ ಮೇಲ್ವಿಚಾರಕ ಎಂದು ಹೇಳಿ ಅಕ್ರಮವಾಗಿ ನೆಲೆಸಿರುವುದಕ್ಕೆ ನನ್ನನ್ನು ಹೊರಗೆ ಕಳುಹಿಸುವ ಬೆದರಿಕೆ ಹಾಕಿದ. ನಾನು ಕಾಗದ ಪತ್ರಗಳನ್ನು ತೋರಿಸಿದರೆ, ಅವುಗಳು ನಕಲಿ ಎಂದು ಹೇಳಿ ಪೊಲೀಸರಿಗೆ ಕರೆ ಮಾಡಿದ. ಅವರು ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ದರು ಎನ್ನುತ್ತಾರೆ ರಾಜೇಶ್. ತಾವು ಪಡೆದ ಬಾಡಿಗೆ ಮನೆಯ ಮಾಲೀಕ ಪ್ರಭಾವೀ ವ್ಯಕ್ತಿ ಎಂದು ಪೊಲೀಸರಿಂದ ರಾಜೇಶರಿಗೆ ತಿಳಿದು ಬಂತು. ಸೆಟಲ್‌ಮೆಂಟ್ ಆಗುವವರೆಗೆ ಅದೇ ಮನೆಯಲ್ಲಿರಲು ರಾಜೇಶರಿಗೆ ಒಪ್ಪಿಗೆ ದೊರೆಯಿತು. ಸೆಪ್ಟಂಬರ್ 15ರಂದು ರಾಜೇಶ್ ವಂಚಕರ ವಿರುದ್ಧ ಮತ್ತೊಂದು ಮೊಕದ್ದಮೆ ಹೂಡಿದರು. ನಕಲಿ ಮಾಲೀಕ ಮತ್ತು ಏಜೆಂಟರ ಫೋನ್‌ಗಳಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಸುರಕ್ಷತೆಯ ದೃಷ್ಟಿಯಿಂದ ರಾಜೇಶ್ ಮನೆಯ ನಿಜವಾದ ಮಾಲಕನ ಜೊತೆಗೆ ಚೌಕಾಸಿ ಮಾಡಿ ಮಾಸಿಕ ಬಾಡಿಗೆಯಾಗಿ 3500 ದಿರ್ಹಮ್‌ಗೆ ಅದೇ ಮನೆಯಲ್ಲಿ ನೆಲೆಸಿದ್ದಾರೆ. ಈ ಮನೆಯ ನಿಜವಾದ ಮಾಲಕ ಹುಸೈನ್ ಅಲಿ ಫೈಸಲ್ ಅಲ್ ಯಜೆದಿ. ಆತ ಮನೆಯನ್ನು ಮೊಹಮ್ಮದ್ ಅಬ್ದುಲ್ ವಹಾಬ್ ರಿಯಲ್ ಎಸ್ಟೇಟ್ ಕಂಪೆನಿಗೆ ಲೀಸ್‌ಗೆ ಕೊಟ್ಟಿದ್ದರು. ಈ ಮನೆಯನ್ನು ಬಾಂಗ್ಲಾದೇಶದ ಮೊಹಮ್ಮದ್ ಅಬ್ದುಲ್ ವಹಾಬ್ ಅಬ್ದುಲ್ ಶುಕುರ್ ಮತ್ತು ಸಯೀದ್ ಅಲಿ ಇಸ್ಲಾಂ ಅಬ್ದುಲ್ ಹಲೀಂ ಜೊತೆಯಾಗಿ ನಿಭಾಯಿಸುತ್ತಿದ್ದಾರೆ. ರಾಜೇಶ್ ಡುಬಿಜಿಲ್ ಡಾಟ್ ಕಾಮ್‌ಗೆ ಕರೆ ಮಾಡಿ ಪ್ರಯತ್ನಿಸಿದರೂ ಏಜೆಂಟರ ವಿವರ ಸಿಕ್ಕಿಲ್ಲ. ಪೊಲೀಸರಿಗೆ ಮಾತ್ರ ವಿವರ ನೀಡುವುದಾಗಿ ವೆಬ್‌ತಾಣ ಉತ್ತರಿಸಿದೆ. ಪೊಲೀಸರು ಸಿಸಿಟಿವಿ ಪರೀಕ್ಷಿಸಿ ನಕಲಿ ಮಾಲಕರನ್ನು ಬಂಧಿಸುವ ಭರವಸೆ ರಾಜೇಶರಿಗೆ ಇದೆ. ವ್ಯಕ್ತಿ ಶೇಖ್‌ನಂತೆಯೇ ಇದ್ದು, ಪಾಸ್‌ಪೋರ್ಟ್‌ನಲ್ಲಿದ್ದ ಫೋಟೋವನ್ನು ಹೋಲುತ್ತಿದ್ದ ಎಂದು ರಾಜೇಶ್ ಹೇಳಿದ್ದಾರೆ. ಆದರೆ ಮನೆಯ ಮೇಲ್ವಿಚಾರಕ ಅಬು ತಾಹಿರ್ ಪ್ರಕಾರ ಇದು ಸ್ಪಷ್ಟವಾದ ವಂಚನೆ ಪ್ರಕರಣ. ಸ್ಟುಡಿಯೋ ಫ್ಲಾಟ್‌ನ್ನು ಅಲ್ ಮುಶ್ರಿಫ್‌ನಲ್ಲಿ 23,000 ದಿರ್ಹಮ್‌ಗೆ ಹೇಗೆ ಪಡೆಯಲು ಸಾಧ್ಯ? ಶೇಖ್ ಈ ವ್ಯವಹಾರವನ್ನು ಪಾರ್ಕಿಂಗ್ ಸ್ಥಳದಲ್ಲಿ ಏಕೆ ಮಾಡುತ್ತಾರೆ? ಇದೆಲ್ಲ ವಂಚನೆಯಾಗಿದ್ದರೂ ತಪ್ಪು ಯಾರದು? ಎಂದು ತಾಹಿರ್ ಪ್ರಶ್ನಿಸುತ್ತಾರೆ.

ಕೃಪೆ :khaleejtimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X