ಬಡಾಜೆ: ಮನೆಯಿಂದ ನಗ-ನಗದು ಕಳವು
.gif)
ಮಂಜೇಶ್ವರ, ಸೆ.22: ಇಲ್ಲಿಗೆ ಸಮೀಪದ ಬಡಾಜೆ ಚೌಕಿ ಬಿ.ಎಸ್.ಇಸ್ಮಾಯೀಲ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಕಳವುಗೈದಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. 2 ದಿನಗಳ ಹಿಂದೆ ಮನೆಗೆ ಬೀಗ ಜಡಿದು ಮನೆ ಮಂದಿ ಪೊಸೋಟ್‌ನ ಸಂಬಂಧಿಕರ ಮನೆಗೆ ತೆರಳಿದ್ದರು. ಗುರುವಾರ ಬೆಳಗ್ಗೆ ವಾಪಸ್ ಮನೆಗೆ ತಲುಪಿದಾಗ ಮನೆಯ ಎದುರು ಕೋಣೆಯ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು 21 ಪವನ್ ಚಿನ್ನಾಭರಣ ಹಾಗೂ 4,500 ರೂ. ಕಳವುಗೈದಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಮಂಜೇಶ್ವರ ಎಸ್ಸೈ ಪ್ರಮೋದ್ ನೇತೃತ್ವದ ಪೊಲೀಸ್ ತಂಡ ಆಗಮಿಸಿ ವಿಚಾರಣೆ ಆರಂಭಿಸಿದೆ. ಬೆರಳಚ್ಚು ತಜ್ಞರ ತಂಡ ಆಗಮಿಸಿ ಇನ್ನಷ್ಟು ಮಾಹಿತಿ ಸಂಗ್ರಹಿಸಿದೆ.
Next Story





