Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಮ್ಮೂರ್ನಾಗೆ ಎಂತೆಂತವ್ರು ಇದ್ದಾರೆ...

ನಮ್ಮೂರ್ನಾಗೆ ಎಂತೆಂತವ್ರು ಇದ್ದಾರೆ ನೋಡ್ರೀ...

ಕಲ್ಲಡ್ಕದ ಯಾಸಿರ್; ಎ ಟು ಝೆಡ್ ಬಾಟ್ಲಿ ಕಲೆಕ್ಟರ್!

-ರಶೀದ್ ವಿಟ್ಲ.-ರಶೀದ್ ವಿಟ್ಲ.22 Sept 2016 1:25 PM IST
share
ನಮ್ಮೂರ್ನಾಗೆ ಎಂತೆಂತವ್ರು ಇದ್ದಾರೆ ನೋಡ್ರೀ...

ಈಗಿನ ಜನರೇಶನ್ ಗೆ ಸೋಡಾ ಅಥವಾ ಸಾಫ್ಟ್ ಡ್ರಿಂಕ್ಸ್ ಬಾಟ್ಲಿ ಅಂದಾಕ್ಷಣ ನೆನಪಾಗೋದು ಪೆಪ್ಸಿ, ಸೆವೆನಪ್, ಕೊಕಾಕೋಲಾ, ತಮ್ಸಪ್, ಮಿರಿಂಡಾ... ಮೊದಲಾದವು. ಆದರೆ ಎಷ್ಟು ಜನರಿಗೆ ನಮ್ಮ ಲೋಕಲ್ ಪ್ರೊಡಕ್ಟ್ ಬಗ್ಗೆ ಗೊತ್ತಿದೆ. ಉಹುಂ ನೆನಪೇ ಆಗೋಲ್ಲ. ಕೆಲವೊಂದು ಹಳ್ಳಿ ಮದುವೆಗಳಲ್ಲಿ, ಗ್ರಾಮೀಣ ಪ್ರದೇಶದ ಅಂಗಡಿಗಳಲ್ಲಿ ಈಗಲೂ ನಮ್ಮೂರ ತಯಾರಿಕೆಯ ಜ್ಯೂಸ್/ಸಾಫ್ಟ್ ಡ್ರಿಂಕ್ಸ್ ಬಾಟ್ಲಿಗಳು ಉಪಯೋಗಿಸಲ್ಪಡುತ್ತವೆ. ಆದರೆ ಬಹುತೇಕ ಮಂದಿ ಉಪಯೋಗಿಸುವುದು ಅಂತರಾಷ್ಟ್ರ ಬ್ರಾಂಡ್ ಗಳನ್ನೇ. ವಿಷಯ ಅದಲ್ಲ. ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ಯಾಸಿರ್ ಇದೇ ಬಾಟ್ಲಿಗಳನ್ನು ಹುಡುಕಿಕೊಂಡು ಹೋಗಿ ವೈಶಿಷ್ಟ್ಯತೆ ಸಾಧಿಸಿದ್ದಾರೆ. ಅದೇನಪ್ಪ ಅಂತಹದ್ದು ಅಂತ ಹುಬ್ಬೇರಿಸಬೇಡಿ. ಹೇಳ್ತೀನಿ ಕೇಳಿ.

ಮಹಮ್ಮದ್ ಯಾಸಿರ್ ಅಂತಿಂತವರಲ್ಲ. ಅಪೂರ್ವ ಸಾಧಕ. ಕಲ್ಲಡ್ಕದ ಸ್ಪುರದ್ರೂಪಿ ಬೀಡಿ ಉದ್ಯಮಿ. ನೋಟು-ನಾಣ್ಯಗಳ, ಹಳೆಯ ಪಳೆಯುಳಿಕೆಗಳ ಸಂಗ್ರಹ ಯಾರೂ ಮಾಡ್ತಾರೆ. ಆದರೆ ಅದರಲ್ಲಿ ವಿಶಿಷ್ಟತೆ ತೋರಿಸುವವರು ಈ ಯಾಸಿರ್. ಕಲ್ಲಡ್ಕದಲ್ಲಿ ತನ್ನ ಐತಿಹಾಸಿಕ ಸಂಗ್ರಹಗಳ ಆಲಯವನ್ನೇ ತೆರೆದಿದ್ದಾರೆ. 14 ವರ್ಷಗಳ ಅಪೂರ್ವ ಸಂಗ್ರಹದಲ್ಲಿ ಯಾಸಿರ್ ನಮ್ಮನ್ನು ಹಳೆಯ ಲೋಕಕ್ಕೆ ಕೊಂಡೊಯ್ಯುವ ವಿಶಿಷ್ಟ ಸಾಧಕ. ತಾನು ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭ ಶಾಲೆಯಲ್ಲಿ ಏರ್ಪಡಿಸಿದ್ದ ವಸ್ತು ಸಂಗ್ರಹಾಲಯವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಶಿಕ್ಷಕರು ನೀಡಿದ್ದರು. ಅದರಿಂದ ಪ್ರೇರಿತರಾದ ಯಾಸಿರ್ ಇಂದು ಪ್ರಸಿದ್ಧ ಸಂಗ್ರಹಕಾರರಾಗಿ ಮೂಡಿ ಬಂದಿದ್ದಾರೆ.

ಯಾಸಿರ್ ಈಗ ಹೊಸತಾದ ಒಂದು ಕಲ್ಪನೆಗೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ. ಅದುವೇ ಸಾಫ್ಟ್ ಡ್ರಿಂಕ್ಸ್ ಬಾಟ್ಲಿ ಸಂಗ್ರಹ. ಆಂಗ್ಲ ಭಾಷೆಯ "ಎ" ಅಕ್ಷರದಿಂದ ಹಿಡಿದು "ಝೆಡ್" ತನಕದ ಅಕ್ಷರದಿಂದ ಆರಂಭವಾಗುವ ಹೆಸರಿನ ಕಂಪೆನಿಯ ಎಲ್ಲಾ ಬಾಟ್ಲಿಗಳನ್ನು ಸಂಗ್ರಹಿಸಿದ್ದಾರೆ.ಇದಕ್ಕವರಿಗೆ ಆರು ತಿಂಗಳ ಸಮಯವಕಾಶ ತಗಲಿದೆ. ಬಹುತೇಕ ಎಲ್ಲಾ ಅಕ್ಷರಗಳ ಬಾಟ್ಲಿಗಳು ಸಿಕ್ಕಿದ್ದರೂ ಡಬ್ಲ್ಯೂ, ಎಕ್ಸ್, ವೈ, ಝೆಡ್ ಗಾಗಿ ಊರೂರು, ಹಳ್ಳಿ ಗಲ್ಲಿ ಅಲೆದಾಡಿದ್ದಾರೆ. ವೈ ಅಕ್ಷರದಿಂದ ಪ್ರಾರಂಭವಾಗುವ ಬಾಟ್ಲಿಯಂತೂ ಎಲ್ಲೂ ಸಿಕ್ಕದಾದಾಗ ನಿರಾಶೆಗೊಂಡಿದ್ದ ಯಾಸಿರ್ ಅದನ್ನು ಕೂಡಾ ಕಷ್ಟಪಟ್ಟು ಭಟ್ಕಳದ ಶಿರಾಳಿಯಿಂದ ಹುಡುಕಿ ತಂದಿದ್ದಾರೆ. ಈಗ ಎಲ್ಲಾ ಬಾಟ್ಲಿಗಳು ಸಿಕ್ಕಿರುವ ಖುಷಿ ಯಾಸಿರ್ ರಲ್ಲಿ ಮನೆ ಮಾಡಿದೆ.

A-Ajwa, B-Brinjol, C-Citron, D-Dew, E-Energy, F-Ferns, G-Good day, H-Harsha, I-Indus, J-Joy, K-Kinley, L-Lime, M-Mint, N-Nector, O-Our Choice, P-Pepsi, Q-Quality, R-Rang, S-Sixer, T-Thumps Up, U-Ullas, V-Vilas, W-Weps, X-Xtra Cool, Y-Yuv Raj, Z-Zee Cool. ಬಹುತೇಕ ಎಲ್ಲಾ ಕಂಪೆನಿಗಳು ಈಗಲೂ ಚಾಲ್ತಿಯಲ್ಲಿವೆ. ಬಿ ಅಕ್ಷರದಿಂದ ಆರಂಭವಾಗುವ ಬ್ರಿಂಜಾಲ್ ಮತ್ತು ಎಂ ನಿಂದ ಆರಂಭವಾಗುವ ಮಿಂಟ್ ಕಂಪೆನಿ ಮಾತ್ರ ಈಗ ಇಲ್ಲ. ಇದರಲ್ಲಿರುವ ಡಿವ್, ಪೆಪ್ಸಿ, ತಮ್ಸಪ್ ಬಿಟ್ರೆ ಉಳಿದ ಉತ್ಪಾದನೆಯ ಹೆಸರುಗಳು ಯಾರಿಗೆಲ್ಲಾ ಗೊತ್ತಿದೆಯೋ ಗೊತ್ತಿಲ್ಲ. ಆದ್ರೆ ಕಲ್ಲಡ್ಕದ ಯಾಸಿರ್ ಇವನ್ನೆಲ್ಲಾ ಹುಡುಕಿ ಒಂದು ಕಡೆ ಶೇಖರಿಸಿಟ್ಟಿದ್ದಾರೆ. ಯಾಸಿರ್ ರ ಈ ಪ್ರಯತ್ನ ಪ್ರಶಂಸನೀಯ.

share
-ರಶೀದ್ ವಿಟ್ಲ.
-ರಶೀದ್ ವಿಟ್ಲ.
Next Story
X