ಈ ಪ್ರವಾಸಿಯ ಫೇಸ್‌ಬುಕ್ ಪೋಸ್ಟ್ ಓದಿದರೆ ನಿಮಗೆ ಖುಷಿ ಖಚಿತ
ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ವಿಷಯವಿದು

ಅತಿಥಿ ದೇವೋಭವ ಎನ್ನುವುದು ಸಂಸ್ಕೃತ ವಾಕ್ಯ. ಅಂದರೆ ಅತಿಥಿಗಳನ್ನು ದೇವರಂತೆ ಕಾಣಬೇಕು ಎನ್ನುವುದು. ಭಾರತದ ಜನರು ತಮ್ಮ ಮನೆಗೆ ಬಂದ ಅತಿಥಿಗಳನ್ನು ಬಹಳ ಗೌರವದಿಂದ ಕಾಣುತ್ತಾರೆ ಮತ್ತು ಇದು ಭಾರತೀಯರ ಆತಿಥ್ಯದ ಸಂಸ್ಕೃತಿಯ ಹಿರಿಮೆ. ಭಾರತೀಯ ಆತಿಥ್ಯವೇ ಇಲ್ಲಿನ ಪ್ರವಾಸೋದ್ಯಮಕ್ಕೆ ಪ್ರೇರಕ ಶಕ್ತಿಯಾಗಿರುವ ನಿರ್ಣಾಯಕ ಅಂಶ.
ಆದರೆ ಅಟೋದವರು ಪ್ರವಾಸಿಗರಿಂದ ಅಧಿಕ ಹಣ ಕೇಳುವುದು, ವಿದೇಶಿಯರ ಭದ್ರತೆಯ ವಿಷಯ ಮೊದಲಾದುವು ಇಂತಹ ಉತ್ತಮ ಅತಿಥೇಯ ಎನ್ನುವ ಗೌರವಕ್ಕೆ ಇತ್ತೀಚೆಗೆ ಕುಂದುಂಟು ಮಾಡಿರುವುದು ನಿಜ. ಆದರೆ ಭಾರತಕ್ಕೆ ಭೇಟಿ ನೀಡಿದ ಯಾರೇ ಆದರೂ ಇಲ್ಲಿನ ಜನರ ಸ್ವಾಗತ, ಹಿತಕರ ವಸತಿ ಮತ್ತು ಸ್ನೇಹಮಯ ಜನರು ಹಾಗೂ ಭಾರತೀಯ ಪರಂಪರೆ-ಸಂಸ್ಕೃತಿಯ ಬಗ್ಗೆ ಮೆಚ್ಚಿಕೊಳ್ಳುತ್ತಾರೆ. ಭಾರತಕ್ಕೆ ಅತಿಥಿಯಾಗಿ ಅವರು ಹೊಟೇಲ್ ಅಥವ ಮನೆಯೊಂದರಲ್ಲಿ ರಾತ್ರಿ ತಂಗಿದ್ದರೂ ಪ್ರವಾಸಿಗರು ಇಂತಹ ಹಲವು ಘಟನೆಯನ್ನು ದೇಶದ ಬಗ್ಗೆ ವಿವರಿಸಿದ್ದಾರೆ. ಅಪರಿಚಿತರು ನೆರವಿನ ಹಸ್ತ ನೀಡಿದ್ದು, ನೋಡಿಕೊಂಡದ್ದು ಮತ್ತು ಸ್ನೇಹಮಯವಾಗಿ ಗಮನಿಸಿದ ತಮ್ಮ ಪ್ರವಾಸದ ನೆನಪಿನ ಕ್ಷಣಗಳನ್ನು ಹಂಚುತ್ತಾರೆ. ಭಾರತೀಯ ಜನರನ್ನು ಮಾತನಾಡಿಸುವುದು ಪ್ರವಾಸಿಗರಿಗೆ ಬಹಳ ಸುಲಭವಾಗಿರುವ ಕಾರಣ ಹೊರ ದೇಶಕ್ಕೆ ಬಂದ ಅನುಭವವೂ ವಿದೇಶಿಯರಿಗೆ ಆಗುವುದಿಲ್ಲ. ಈ ವ್ಯಕ್ತಿಯೂ ಹಾಗೇ ಪ್ರವಾಸಕ್ಕೆಂದು ಭಾರತಕ್ಕೆ ಬಂದು ಇಲ್ಲಿನ ಜನರ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದಾನೆ.
ಕೃಪೆ: www.news18.com





