ದಾದಿಯರ ಸಂಬಳ20,000 ರೂಪಾಯಿಗೆ ಕೇಂದ್ರ ಸರಕಾರದ ಶಿಫಾರಸು

ಹೊಸದಿಲ್ಲಿ, ಸೆ.22: ಖಾಸಗಿ ಆಸ್ಪತ್ರೆಯ ದಾದಿಯರಿಗೆ ವೇತನವನ್ನು 20,000ರೂಪಾಯಿಯಾಗಿ ಹೆಚ್ಚಿಸಬೇಕೆಂದು ರಾಜ್ಯಸರಕಾರಗಳಿಗೆ ಕೇಂದ್ರಸರಕಾರ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಇನ್ನೂರಕ್ಕೂ ಅಧಿಕ ಹಾಸಿಗೆ ಇರುವ ಆಸ್ಪತ್ರೆಯ ನರ್ಸ್‌ಗಳಿಗೆ ಸರಕಾರಿ ನರ್ಸ್‌ಗಳಿಗೆ ಸಮಾನವಾದ ಸಂಬಳ ನೀಡಬೇಕು. ಖಾಸಗಿ ದಾದಿಯರ ಸಂಬಳ ಹೆಚ್ಚಳಗೊಳಿಸುವುದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಕೇಂದ್ರಸರಕಾರ ರಾಜ್ಯಸರಕಾರಗಳ ಆರೋಗ್ಯ ಖಾತೆಯ ಕಾರ್ಯದರ್ಶಿಗಳಿಗೆ ಸೂಚನೆಯನ್ನು ನೀಡಿದೆ.
ಇದು ಜಾರಿಗೊಳಿಸಲು ಅನುಸರಿಸಿದ ಕ್ರಮಗಳನ್ನು ಮುಂದಿನ ತಿಂಗಳು ಇಪ್ಪತ್ತನೆ ತಾರೀಕಿನೊಳಗೆ ತಿಳಿಸಬೇಕೆಂದು ಕೇಂದ್ರಸರಕಾರ ಸೂಚಿಸಿದೆ.
ಶಿಫಾರಸುಗಳು ಇಂತಿವೆ:
1) 50ಕ್ಕಿಂತ ಕಡಿಮೆ ಹಾಸಿಗೆ ಇರುವ ಆಸ್ಪತ್ರೆಯ ದಾದಿಯರಿಗೆ ಕನಿಷ್ಠ 20,000ರೂಪಾಯಿ ಸಂಬಳ ನೀಡಬೇಕು.
2)ನೂರಕ್ಕಿಂತ ಹೆಚ್ಚು ಹಾಸಿಗೆಯ ಆಸ್ಪತ್ರೆಗಳ ನರ್ಸ್‌ಗಳಿಗೆ ಸರಕಾರಿಆಸ್ಪತ್ರೆಯ ನರ್ಸ್‌ಗಳಿಗೆ ನೀಡುವುದಕ್ಕಿಂತ ಶೇ.10ರಷ್ಟು ಕಡಿಮೆ ಸಂಬಳವನ್ನು ನೀಡಬೇಕು.
3)50ರಿಂದ 100ರವರೆಗಿನ ಹಾಸಿಗೆಯನ್ನು ಹೊಂದಿರುವ ಆಸ್ಪತ್ರೆಗಳ ನರ್ಸ್‌ಗಳಿಗೆ ಸರಕಾರಿ ನರ್ಸ್‌ಗಿಂತ ಶೇ.25ರಷ್ಟು ಕಡಿಮೆ ಸಂಬಳವನ್ನು ನೀಡಬೇಕು.
4)ಖಾಸಗಿ ನರ್ಸ್‌ಗಳಿಗಿರುವ ರಜೆ ಸೌಲಭ್ಯ, ಕೆಲಸದ ಸಮಯ, ಪ್ರಯಾಣ, ವಾಸಸೌಕರ್ಯ ಎಂಬಿವುಗಳನ್ನು ಸರಕಾರಿ ನರ್ಸ್‌ಗಳಿಗೆ ಸಮಾನವಾಗಿರಬೇಕೆಂದು ಕೇಂದ್ರಸರಕಾರದ ಶಿಫಾರಸು ತಿಳಿಸಿದೆ ಎಂದು ವರದಿಯಾಗಿದೆ.







