ಉಪ್ಪಿನಂಗಡಿ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್
ಪದಾಧಿಕಾರಿಗಳ ಆಯ್ಕೆ

ಉಪ್ಪಿನಂಗಡಿ, ಸೆ.21: ಉಪ್ಪಿನಂಗಡಿ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್‌ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಹಾಜಿಕೊಳ್ಳೇಜಾಲ್ 12ನೆ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಪ್ರಧಾನಕಾಯದರ್ಶಿಯಾಗಿ ಎಚ್. ಯೂಸುಫ್‌ಹಾಜಿ, ಕೋಶಾಧಿಕಾರಿಯಾಗಿ ಹಸೈನಾರ್ ಹಾಜಿ ಬಂಡಾಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಶ್ರಫ್ ಹಾಜಿ ಪೆದಮಲೆ, ಅಬೂಬಕರ್ ಕೋಲ್ಪೆ, ಜೊತೆ ಕಾರ್ಯದರ್ಶಿಯಾಗಿ ಹಮೀದ್ ಕರಾವಳಿ, ರಝಾಕ್ ಆತೂರು, ಸಂಘಟನಾ ಕಾರ್ಯದರ್ಶಿಯಾಗಿ ಲತೀಫ್ ಕೆ.ಎಚ್. ಪತ್ರಿಕಾ ಕಾರ್ಯದರ್ಶಿಯಾಗಿ ಸಿದ್ದಿಕ್ ನೀರಾಜೆ ಹಾಗೂ ಕಾರ್ಯಕಾರಿ ಸಮಿತಿಗೆ ಮುಹಮ್ಮದ್ ಹಾಜಿ ಬೆದ್ರೋಡಿ, ಉಮರ್ ಕೊಕ್ಕಡ, ಉಮರ್ ಮಲ್ಲಿಗೆ ಮಜಲು, ಅಶ್ರಫ್ ಬೋಳದಬೈಲು, ಶುಕೂರ್ ಅರಸಿನಮಕ್ಕಿ, ಅಬ್ದುರ್ರಹ್ಮಾನ್ ಅಡೆಕ್ಕಲ್, ಹಮೀದ್ ಕುಂಡಾಜೆ, ಅಬ್ದುರ್ರಹ್ಮಾನ್ ಆತೂರು ಕುದ್ಲೂರು, ರಫೀಕ್ ಗಂಡಿಬಾಗಿಲು, ಅಬ್ದುರ್ರಹ್ಮಾನ್ ಮಾಪಲ, ಅಬ್ದುರ್ರಹ್ಮಾನ್ ದಾರಿಮಿ, ಮುಸ್ತಫಾ ಹಾಜಿ ಉಪ್ಪಿನಂಗಡಿ, ಮುಹಮ್ಮದ್ ಹಾಜಿ ಕಡವಿನಬಾಗಿಲು, ಸಿದ್ದೀಕ್ ಕೆಂಪಿ, ಮುಹಮ್ಮದ್ ಕೂಟೇಲು ಮತ್ತು ಉಪ್ಪಿನಂಗಡಿ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್‌ಗೆ ಸೇರಿದ ಎಲ್ಲ ಮಸೀದಿ, ಮದ್ರಸಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಗಂಡಿಬಾಗಿಲು ಮಸೀದಿಯ ಖತೀಬ್ ಅನಸ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಖತೀಬ್ ರಫೀಕ್ ಬಾಖವಿ, ಮದ್ರಸ ಮ್ಯಾನೇಜ್‌ಮೆಂಟ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಕೊಡಾಜೆ ಉಪಸ್ಥಿತರಿದ್ದರು.





