ಪ್ರಥಮ ಟೆಸ್ಟ್: ಕಿವೀಸ್ ವಿರುದ್ಧ ಭಾರತ 291/9
ವಿಜಯ್, ಪೂಜಾರ ಅರ್ಧಶತಕ

ಕಾನ್ಪುರ, ಸೆ.22: ಆರಂಭಿಕ ಆಟಗಾರ ಮುರಳಿ ವಿಜಯ್(65) ಹಾಗೂ ಚೇತೇಶ್ವರ ಪೂಜಾರ(62) ಅರ್ಧಶತಕದ ಹೊರತಾಗಿಯೂ ಕಿವೀಸ್‌ನ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್(3-57) ಹಾಗೂ ಸ್ಯಾಂಟ್ನರ್(3-77) ದಾಳಿಗೆ ಸಿಲುಕಿದ ಭಾರತ ತಂಡ ಗುರುವಾರ ಇಲ್ಲಿ ಆರಂಭವಾದ ಐತಿಹಾಸಿಕ 500ನೆ ಟೆಸ್ಟ್ ಪಂದ್ಯದಲ್ಲಿ ಸಾಧಾರಣ ಮೊತ್ತ ದಾಖಲಿಸಿದೆ.
ಗ್ರೀನ್‌ಪಾರ್ಕ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದೆ. ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್(32) ಹಾಗೂ ವಿಜಯ್(65) 42 ರನ್ ಜೊತೆಯಾಟ ನಡೆಸಿ ಸಾಧಾರಣ ಆರಂಭ ನೀಡಿದರು. ಕನ್ನಡಿಗ ರಾಹುಲ್ 32 ರನ್ ಗಳಿಸಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.
ಚೇತೇಶ್ವರ ಪೂಜಾರ ಹಾಗೂ ವಿಜಯ್ 2ನೆ ವಿಕೆಟ್‌ಗೆ 105 ರನ್ ಗಳಿಸಿ ತಂಡವನ್ನು ಆಧರಿಸಿದರು. ರೋಹಿತ್ ಶರ್ಮ(35) ಹಾಗೂ ಆರ್.ಅಶ್ವಿನ್(40) 6ನೆ ವಿಕೆಟ್‌ಗೆ 52 ರನ್ ಸೇರಿಸಿ ತಂಡದ ಸ್ಕೋರ್‌ನ್ನು 261ಕ್ಕೆ ತಲುಪಿಸಿದರು.
Next Story





