ಡ್ರೀಮ್ ಕಿಚನ್ ಆ್ಯಂಡ್ ಇಂಟಿರೀಯರ್ಸ್‌ನ ಸ್ಥಳಾಂತರಿತ ಮಳಿಗೆ ಉದ್ಘಾಟನೆ
ಗಿಲ್ಮ ಎಕ್ಸ್ಲೂಸಿವ್ ಶೋರೂಂ

ಮಂಗಳೂರು, ಸೆ.22: ನಗರದ ವೆಲೆನ್ಸಿಯ ಮತ್ತು ಕಂಕನಾಡಿಯ ಮ್ಯಾಕ್‌ಮಾಲ್‌ನಲ್ಲಿ ಕಾರ್ಯಚರಿಸುತ್ತಿದ್ದ ಗಿಲ್ಮ ಕಂಪೆನಿಯ ಎಕ್ಸ್ಲೂಸಿವ್ ಶೋರೂಂ ಆದ ಡ್ರೀಮ್ ಕಿಚನ್ ಆ್ಯಂಡ್ ಇಂಟಿರೀಯರ್ಸ್‌ನ ಸ್ಥಳಾಂತರಿತ ಮಳಿಗೆಯನ್ನು ನಗರದ ಬೆಂದೂರ್‌ವೆಲ್‌ನ ಎಸ್ಸೆಲ್ ವಿಲ್‌ಕಾನ್ ವಾಣಿಜ್ಯ ಸಂಕೀರ್ಣದ ನೆಲ ಅಂತಸ್ತಿನಲ್ಲಿ ತುಳುನಾಡು ಚಿಟ್ಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸಂದೇಶ್ ಶೆಟ್ಟಿ ಕೊಲ್ಕೆ ಉದ್ಘಾಟಿಸಿದರು.
ನೂತನ ಮಳಿಗೆಯ ಆಶೀರ್ವಚನವನ್ನು ಬಿಕರ್ನಕಟ್ಟೆಯ ಬಾಲ ಯೇಸು ಮಂದಿರದ ಫ್ರಾಯರಿಯ ಸುಪೀರಿಯರ್ ರೆ.ಫಾ.ಜ್ಯೊ.ತಾವ್ರೊ ನೆರವೇರಿಸಿದರು.
ಸಮಾರಂಭದಲ್ಲಿ ಮಾತನಾಡಿದ ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೆಜರ್ ನವೀನ್, 15 ವರ್ಷಗಳ ಹಿಂದೆ ಆರಂಭವಾದ ಸ್ಟವ್‌ಕ್ರಾಫ್ಟ್ ಸಂಸ್ಥೆಯ ಗಿಲ್ಮ ಶೋರೂಮ್ ಕರ್ನಾಟಕದಲ್ಲಿ 34 ಶೋರೂಂಗಳನ್ನು ಒಳಗೊಂಡಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ಹಲವೆಡೆ ಕಂಪೆನಿಯ ಶೋರೂಂಗಳಿವೆ. ಬೆಂಗಳೂರು ನಗರದಲ್ಲಿಯೆ 25 ಶೋರೂಂ ಇದೆ. ಈಗ 50 ಕೋಟಿ ರೂ. ವ್ಯವಹಾರವನ್ನು ನಡೆಸುತ್ತಿರುವ ಕಂಪೆನಿ ಇನ್ನು ಎರಡು ವರ್ಷದಲ್ಲಿ 100 ಶೋರೂಂ ಮತ್ತು 100 ಕೋಟಿ ರೂ. ವ್ಯವಹಾರದ ಗುರಿಯನ್ನಿರಿಸಿದೆ. ಗಿಲ್ಮದ ಉತ್ಪನ್ನಗಳು ಕರ್ನಾಟಕದಲ್ಲಿ ಹೆಚ್ಚಿನ ಮಾರಾಟವಾಗುತ್ತಿರುವ ಉತ್ಪನ್ನವಾಗಿದೆ. ಉತ್ತಮ ಗುಣಮಟ್ಟ ಮತ್ತು ಉತ್ತಮ ಸೇವೆಯನ್ನು ಕಂಪೆನಿಯಿಂದ ನೀಡಲಾಗುತ್ತಿದೆ . 4 ರಾಜ್ಯಗಳಲ್ಲಿ ಮಳಿಗೆಗಳಿದ್ದು ಭಾರತದಲ್ಲಿ 75 ಮಳಿಗೆಯನ್ನು ಹೊಂದಿದೆ ಎಂದು ಹೇಳಿದರು.
ನೂತನ ಮಳಿಗೆಯ ಉದ್ಘಾಟನಾ ಕೊಡುಗೆಯಾಗಿ ಮಳಿಗೆಯಲ್ಲಿ ಹಾಬ್ ಮತ್ತು ಚಿಮ್ನಿಗಳ ಮೇಲೆ ಆಕರ್ಷಕ ವಿಶೇಷ ರಿಯಾಯಿತಿ ಇದೆ ಎಂದು ಸಂಸ್ಥೆಯ ಮಾಲಕ ವಿನ್ಸೆಂಟ್ ಡಿಕೋಸ್ತ ತಿಳಿಸಿದರು.
ಕಾರ್ಯಕ್ರಮದಲ್ಲಿ ಗಿಲ್ಮ ಕಂಪೆನಿಯ ಕರ್ನಾಟಕ ಬ್ಯುಸಿನೆಸ್ ಹೆಡ್ ಮಯನ್ ವಶಿಷ್ಠ, ನ್ಯಾಷನಲ್ ಸರ್ವಿಸ್ ಹೆಡ್ ಜೋಸೆಫ್ ಥಾಮಸ್, ಕರ್ನಾಟಕ ಸರ್ವಿಸ್ ಹೆಡ್ ಪ್ರೇಮ್ ನಾಯಕ್, ಕರ್ನಾಟಕ ಮಾರ್ಕೆಟಿಂಗ್ ಹೆಡ್ ಸಂಕೇತ್ ಉಪಸ್ಥಿತರಿದ್ದರು.
ಮಳಿಗೆಯಲ್ಲಿ ವಿವಿಧ ರೇಂಜ್‌ಗಳ ಗಿಲ್ಮ ಉತ್ಪನ್ನಗಳಾದ ಚಿಮಿನಿ, ಇಟಾಲಿಯನ್ ಹಾಬ್ಸ್, ಗ್ಯಾಸ್‌ಸ್ಟವ್, ಆಫೀಸ್ ಚೇರ್‌ಗಳು ಲಭ್ಯವಿವೆ. ಸಂಸ್ಥೆಯು ಗಿಲ್ಮ ಕಂಪನಿಯ ಎಕ್ಸ್ಲೂಸಿವ್ ಶೋರೂಮ್ ಆಗಿದ್ದಲ್ಲದೆ ಗ್ರಾಹಕರಿಗೆ ಮೊಡ್ಯುಲರ್ ಕಿಚನ್ಸ್, ಇಂಟೀರಿಯರ್ ಡೆಕೋರೆಶನ್, ವಾರ್ಡ್‌ರೋಬ್ಸ್, ಟಿ.ವಿ ಯುನಿಟ್ಸ್, ಪಿಒಪಿ, ಗ್ರಾನೈಟ್, ಟೈಲ್ಸ್ ಅಳವಡಿಕೆ ಇತ್ಯಾದಿಗಳನ್ನು ಕೂಡ ಮಾಡಿಕೊಡುತ್ತದೆ. ಹೆಚ್ಚಿನ ವಿವರಗಳಿಗೆ ಡ್ರೀಮ್ ಕಿಚನ್ ಆ್ಯಂಡ್ ಇಂಟಿರೀಯರ್ಸ್ (ಗಿಲ್ಮ), ಎಸ್ಸೆಲ್ ವಿಲ್‌ಕಾನ್, ರಾಧಾ ಮೆಡಿಕಲ್ಸ್ ಕೆಳಗಡೆ, ಬೆಂದೂರ್‌ವೆಲ್ ಸರ್ಕಲ್, ಮಂಗಳೂರು , ಫೋನ್ : 9008032347 / 9620854000, Email : uhomeneeds@gmail.com, Website : www.dreamkitchenandinteriors.comನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.







