ಗಸ್ತುನಿರತ ಪೊಲೀಸರ ಮೇಲೆ ಹಲ್ಲೆ: ಇಬ್ಬರ ಬಂಧನ

ಕಾಸರಗೋಡು, ಸೆ.22: ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಾರಕಟ್ಟೆಯ ಇಸಾಕ್ ಅಹ್ಮದ್ (19) ಮತ್ತು ಪಾರಕಟ್ಟೆಯ ಮುಹಮ್ಮದ್ ರಮೀಝ್(19) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಘಟನೆ ನಡೆದಿತ್ತು. ಹಳೆಚೂರಿ ಎಂಬಲ್ಲಿ ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಮಹೇಶ್ ಎಂಬವರ ಮೇಲೆ ಹತ್ತು ಮಂದಿಯ ತಂಡವು ಹಲ್ಲೆ ನಡೆಸಿತ್ತು. ರಸ್ತೆ ಬದಿ ಸಂಶಯಾಸ್ಪದವಾಗಿ ನಿಲುಗಡೆಗೊಳಿಸಲಾಗಿದ್ದ ಬೈಕ್‌ನ ನಂಬರ್‌ನ್ನು ಬರೆಯಲೆತ್ನಿಸಿದಾಗ ತಂಡವೊಂದು ಹಲ್ಲೆ ನಡೆಸಿತ್ತು.
ಪ್ರಕರಣದಲ್ಲಿ ಎಂಟು ಮಂದಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story





