ಗಾಂಜಾ ಬೆಳೆ: ಆರೋಪಿ ಬಂಧನ

ಸೊರಬ, ಸೆ.22: ಮನೆಯ ಹಿತ್ತಲಲ್ಲಿ ಬೆಳೆದಿದ್ದ ಹಸಿ ಗಾಂಜಾ ಸಮೇತ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಪುಟ್ಟನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಪುಟ್ಟನಹಳ್ಳಿ ಗ್ರಾಮದ ಹಿರಿಯಣ್ಯಪ್ಪಬಿನ್ ವೀರೇಶ್ ಬಂಧಿತ ಆರೋಪಿ. ಈತ ತನ್ನ ಮನೆಯ ಹಿಂಭಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೊರಬ ಅಬಕಾರಿ ಇಲಾಖೆಯ ಅಧಿಕಾರಿಗಳು ಸುಮಾರು 2 ಲಕ್ಷ ರೂ. ವೌಲ್ಯದ ಹಸಿ ಗಾಂಜಾ ಗಿಡಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಬಕಾರಿ ನಿರೀಕ್ಷಕ ಎನ್. ಸತೀಶ್ ನೇತೃತ್ವದಲ್ಲಿ ಸಿಬ್ಬಂದಿಯಾದ ರಾಮಪ್ಪ, ಯಲ್ಲಪ್ಪ, ತೋಪಣ್ಣ, ಬಸವರಾಜ್, ಗಂಗಾಧರಪ್ಪ, ಚಾಲಕ ಕಾಂತಪ್ಪದಾಳಿಯಲ್ಲಿ ಪಾಲ್ಗೊಂಡಿದ್ದರು.
Next Story





