ಅಕ್ರಮ ಕಳ್ಳಭಟ್ಟಿ ಸಾರಾಯಿ: ಸೊತ್ತು ವಶ

ಶಿಕಾರಿಪುರ, ಸೆ.22: ಖಚಿತ ಮಾಹಿತಿ ಮೇರೆಗೆ ತಾಲೂಕಿನ ಚಿಕ್ಕಮಾಗಡಿ ತಾಂಡಾಕ್ಕೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಜಿಲ್ಲಾ ಅಬಕಾರಿ ನಿರೀಕ್ಷಕ ಹನುಮಂತಪ್ಪ ಇಲಾಖೆ ಸಿಬ್ಬಂದಿ ಯೊಂದಿಗೆೆ ಖಚಿತ ಮಾಹಿತಿ ಮೇರೆಗೆ ತಾಲೂಕಿನ ಚಿಕ್ಕಮಾಗಡಿ ತಾಂಡಾದಲ್ಲಿನ ಅಕ್ರಮ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಮಾಡುತ್ತಿದ್ದ ವಿವಿಧ ಮನೆಗಳ ಮೇಲೆ ದಾಳಿ ನಡೆಸಿ ಗ್ರಾಮದ ಲೋಕೇಶನಾಯ್ಕ, ಗಿರಿಯ ನಾಯ್ಕ, ಪುಟ್ಟನಾಯ್ಕ, ರತ್ನನಾಯ್ಕ ಎಂಬವರ ಮನೆಯಿಂದ 210 ಲೀ.ಬೆಲ್ಲದ ಕೊಳೆ, 40 ಲೀ.ಕಳ್ಳಭಟ್ಟಿ ಸಾರಾಯಿ, ಅಲ್ಯೂಮಿನಿಯಂ ಹಂಡೆ, ಪಾತ್ರೆ, ಪ್ಲಾಸ್ಟಿಕ್ ಬ್ಯಾರಲ್, ಕೊಡ ಸಹಿತ ಸಾರಾಯಿ ತಯಾರಿಕೆಗೆ ಬಳಸುವ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಗಿರೀಶ್, ಸುಜಾತಾ, ಶಿಲ್ಪಾ, ಉಪನಿರೀಕ್ಷಕ ವೇಣುಗೋಪಾಲ, ಶ್ರೀಕಾಂತ, ಮಂಜುನಾಥ, ಸವಿತಾ, ಸುಷ್ಮಾ, ಹಾಲಾನಾಯ್ಕ ಭಾಗವಹಿಸಿದ್ದರು.
Next Story





