ಜೈಲಿನಿಂದ ಮೊಬೈಲ್ ಕರೆ: ಓರ್ವನ ಬಂಧನ
ಮಂಗಳೂರು, ಸೆ. 22: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸಂದರ್ಭದಲ್ಲಿ ಮೊಬೈಲ್ ಫೋನ್‌ನಲ್ಲಿ ಕರೆ ಮಾಡಿದ್ದ ಬಂಟ್ವಾಳದ ಚೇತನ್ ಯಾನೆ ಚೇತು (28) ನನ್ನು ಬರ್ಕೆ ಪೊಲೀಸರು ಇಂದು ಬಂಧಿಸಿದ್ದಾರೆ.
ಆರೋಪಿ ಚೇತನ್ ವಾಮಂಜೂರಿನ ಮೂಡುಶೆಡ್ಡೆಯಲ್ಲಿ ನಡೆದ ಭರತ್‌ರಾಜ್ ಯಾನೆ ಪ್ರಭು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಕಳೆದ ಡಿಸೆಂಬರ್‌ನಲ್ಲಿ ಪೊಲೀಸರು ಜೈಲಿಗೆ ದಾಳಿ ನಡೆಸಿದಾಗ ಕೆಲವು ಮೊಬೈಲ್ ಗಳು ಪತ್ತೆಯಾಗಿದ್ದು, ಅದರಲ್ಲಿ ಚೇತನ್ ಮೊಬೈಲ್ ಕೂಡ ಪೊಲೀಸರಿಗೆ ಸಿಕ್ಕಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಂದು ಆತನನ್ನು ಬಂಧಿಸಿದ್ದಾರೆ.
Next Story





