ಢಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕ ವಶಕ್ಕೆ
ಮಂಗಳೂರು, ಸೆ. 22: ಸೆ.20 ರಂದು ಎಕ್ಕೂರು ಸಮೀಪ ರಸ್ತೆ ದಾಟುತ್ತಿದ್ದ ಯುವಕನಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಯೆನೆಪೊಯ ಕಾಲೇಜಿನ ವಿದ್ಯಾರ್ಥಿ ಉಳ್ಳಾಲ ನಿವಾಸಿ ಮುಹಮ್ಮದ್ ಸುಹೈಲ್ (25) ಎಂಬಾತನಿಗೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯವಾಗಿತ್ತು. ುಟ್ಬಾಲ್ ಆಡಲೆಂದು ಸೆ.20ರಂದು ಸಂಜೆ ಕ್ರೀಡಾಂಗಣದತ್ತ ಸಾಗುತ್ತಿದ್ದಾಗ ತೊಕ್ಕೋಟ್ಟಿನಿಂದ ಮಂಗಳೂರಿನತ್ತ ಬರುತ್ತಿದ್ದ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿತ್ತು. ಗಾಯಗೊಂಡ ಯುವಕನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ಬಳಿಕ ಕಾರಿನೊಂದಿಗೆ ಚಾಲಕ ಪರಾರಿಯಾಗಿದ್ದ. ಆದರೆ, ಪೊಲೀಸ್ ತಪಾಸಣೆ ವೇಳೆ ಕೊಟ್ಟಾರದ ಶೋ ರೂಂ ಒಂದರಲ್ಲಿ ಕಾರು ಪತ್ತೆಯಾಗಿದ್ದು, ಘಟನೆಗೆ ಕಾರಣನಾದ ಆರೋಪಿ ದಿವ್ಯಾರಾಜ್ ಶೆಟ್ಟಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





