ಮೆಸ್ಸಿಗೆಗಾಯ, 3 ವಾರ ವಿಶ್ರಾಂತಿ

ಬಾರ್ಸಿಲೋನ, ಸೆ.22: ಲಾ ಲಿಗ ಫುಟ್ಬಾಲ್ ಪಂದ್ಯದ ವೇಳೆ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದಾಗಿ ಬಾರ್ಸಿಲೋನದ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ಮೂರು ವಾರಗಳ ಕಾಲ ಸಕ್ರಿಯ ಫುಟ್ಬಾಲ್‌ನಿಂದ ದೂರ ಉಳಿಯಲಿದ್ದಾರೆ.
ಐದು ಬಾರಿ ವಿಶ್ವದ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿರುವ ಮೆಸ್ಸಿ ಬುಧವಾರ ನೌಕ್ಯಾಂಪ್‌ನಲ್ಲಿ ನಡೆದ ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ಮೆಸ್ಸಿ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಪಂದ್ಯದ 59ನೆ ನಿಮಿಷದಲ್ಲಿ ಮೈದಾನವನ್ನು ತೊರೆದಿದ್ದರು.
ಮೆಸ್ಸಿಗೆ ಕನಿಷ್ಠ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ. ಅವರು ಅ.15 ರಂದು ನಡೆಯಲಿರುವ ಲಾ ಲಿಗ ಪಂದ್ಯದ ವೇಳೆ ತಂಡಕ್ಕೆ ವಾಪಸಾಗಲಿದ್ದಾರೆ ಎಂದು ಸ್ಪೇನ್ ಕ್ಲಬ್‌ನ ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.
Next Story





