ಗೋ ರಕ್ಷಕರು: ಭಾರತದ ನೈತಿಕ ಸಂಪ್ರದಾಯದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬೇಕಿದೆ

ಖಂಡಿವಾಗಿಯೂ ಇದು ಭಾರತದ ಪ್ರಜಾಪ್ರಭುತ್ವಕ್ಕೆ ಕೆಟ್ಟ ಬೆಳವಣಿಗೆ. ಬಿಜೆಪಿಯು ಕೇಂದ್ರದಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ ಕೆಲವು ಗುಂಪುಗಳು ತಮ್ಮನ್ನು ಅರೆಅಧಿಕೃತ ನೈತಿಕ ಪೊಲೀಸರನ್ನಾಗಿ ನಿಯೋಜಿಸಿಕೊಂಡು ಅಲ್ಪಸಂಖ್ಯಾತರ ಪರವಾಗಿರುವ ಯೋಜನೆಗಳನ್ನು ವ್ಯತಿರಿಕ್ತಗೊಳಿಸಲು ಬಹಿರಂಗ ಪರವಾನಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಇದು ಕೆಟ್ಟದ್ದು. ಯಾಕೆಂದರೆ ಇದು ನಂಬಿಕೆಯ ಕೊರತೆ, ನಾಗರಿಕ ಸದ್ಗುಣಗಳ ಮತ್ತು ರಾಜಕೀಯ ನೈತಿಕತೆಯ ಗೈರನ್ನು ಬಿಂಬಿಸುತ್ತದೆ.
ಮುಸ್ಲಿಂ ಹಬ್ಬಗಳು ಸಮೀಪಿಸುತ್ತಿದ್ದಂತೆ ಗೋಸೇವಾ ಸಂಸ್ಥೆಗಳು ಮೇವಾತ್‌ನಂಥಾ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ವ್ಯಸ್ತವಾಗುತ್ತಾರೆ, ಅಲ್ಲಿನ ಮಾರುಕಟ್ಟೆಯಲ್ಲಿ ಸುತ್ತಾಡುತ್ತಾ ಯಾವ ಅಂಗಡಿಯಲ್ಲಿ ಬೀಫ್ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡಲು ಆರಂಭಿಸುತ್ತಾರೆ.
ಖಂಡಿವಾಗಿಯೂ ಇದು ಭಾರತದ ಪ್ರಜಾಪ್ರಭುತ್ವಕ್ಕೆ ಕೆಟ್ಟ ಬೆಳವಣಿಗೆ. ಬಿಜೆಪಿಯು ಕೇಂದ್ರದಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ ಕೆಲವು ಗುಂಪುಗಳು ತಮ್ಮನ್ನು ಅರೆಅಧಿಕೃತ ನೈತಿಕ ಪೊಲೀಸರನ್ನಾಗಿ ನಿಯೋಜಿಸಿಕೊಂಡು ಅಲ್ಪಸಂಖ್ಯಾತರ ಪರವಾಗಿರುವ ಯೋಜನೆಗಳನ್ನು ವ್ಯತಿರಿಕ್ತಗೊಳಿಸಲು ಬಹಿರಂಗ ಪರವಾನಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಇದು ಕೆಟ್ಟದ್ದು. ಯಾಕೆಂದರೆ ಇದು ನಂಬಿಕೆಯ ಕೊರತೆ, ನಾಗರಿಕ ಸದ್ಗುಣಗಳ ಮತ್ತು ರಾಜಕೀಯ ನೈತಿಕತೆಯ ಗೈರನ್ನು ಬಿಂಬಿಸುತ್ತದೆ. ಕೆಲವು ಸಂಪ್ರದಾಯಗಳನ್ನು ಮೂಲಭೂತವಾಗಿ ಇಸ್ಲಾಮಿಕ್ ಎಂದು ವಿಭಾಗಿಸಲಾಗಿ ಅವುಗಳು ಕ್ರೂರ ಎಂದು ತಿಳಿಸಲಾಗುತ್ತದೆ.
ಈ ರೀತಿಯ ಪಹರೆಯು ಸಂಕೀರ್ಣ ಸಂಸ್ಕೃತಿಯನ್ನು ಸಮಕಾಲೀನ ಮತ್ತು ಐತಿಹಾಸಿಕವಾಗಿ ಅರ್ಥೈಸುವುದರಲ್ಲಿ ಸಂಪೂರ್ಣವಾದ ಕೊರತೆಯಿರುವುದನ್ನು ಇದು ಸೂಚಿಸುತ್ತದೆ. ಉದಾಹರಣೆಗೆ, ಮೇವಾತ್ ಅನ್ನೇ ತೆಗೆದುಕೊಳ್ಳಿ. 13ನೆ ಶತಮಾನದಿಂದ 20ನೆ ಶತಮಾನದ ವರೆಗಿನ ಸಮುದಾಯದ ಮೇಲೆ ಬೆಳಕು ಚೆಲ್ಲುವ ನನ್ನ ಎರಡು ಪುಸ್ತಕಗಳ ಬಗ್ಗೆ ಬರೆಯುತ್ತಿದ್ದ ಸಮಯದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಇಲ್ಲಿದ್ದ ಕಾರಣ ಮೇವಾತ್‌ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಸಮುದಾಯಗಳ ಒಳಗೆ ರಾಜನೀತಿಯು ಉಂಟುಮಾಡುವ ಭಯ ಮತ್ತು ಚಿಂತೆಯ ಬಗ್ಗೆ ಬಹಳ ಕಡಿಮೆ ಜಾಗೃತಿ ಮೂಡಿಸಲಾಗಿದೆ. 1980ರಿಂದಲೂ ಮೇವಾತ್ ನಿವಾಸಿಗಳನ್ನು ಗೋಹತ್ಯೆಯ ವಿಷಯದಲ್ಲಿ ಹಿಂಸಿಸಿರುವ ಘಟನೆಗಳನ್ನು ನಾನು ನೋಡುತ್ತಾ ಬಂದಿದ್ದೇನೆ, ಈಗ 2016ರಲ್ಲಿ ಅದು ಕೊನೆಯ ಹಂತಕ್ಕೆ ಬಂದಂತಿದೆಯಷ್ಟೇ. ನಿಜವಾಗಿ 1980ರಲ್ಲಿ ಹಲವು ಮೇವಾತ್ ಪಂಚಾಯತ್‌ಗಳು ಗೋಹತ್ಯೆಯನ್ನು ನಿಷೇಧಿಸಿರುವುದು ನನಗೆ ತಿಳಿದಿದೆ. ವಿಭಜನೆಯ ನೆನಪುಗಳು
ಇತರೆಡೆಗಳಲ್ಲಿ ನಾನು ಬರೆದಿರುವಂತೆ, ವಿಭಜನೆಯ ಸಮಯದಲ್ಲಿ ನಡೆದ ನರಮೇಧವನ್ನು ಕಂಡಿರುವ ಮೇವಾತ್ ನಿವಾಸಿಗಳಲ್ಲಿ ಈಗಿನ ಗೋಪಹರೆಯು ಮೇವಾತ್ 1920ರಲ್ಲಿ ಮತ್ತು ನಂತರ ಪುನಃ 1940ರಲ್ಲಿ ಕಂಡ ಧ್ರುವೀಕರಣಗೊಂಡ ರಾಜಕೀಯದ ಪ್ರತಿಧ್ವನಿಯನ್ನು ಮತ್ತೆ ಮೂಡಿಸಿದೆ, ಆಮೂಲಕ ಈ ಭಾಗದ ರೈತಾಪಿ ಜನರ ಕೋಮುಸಾಮರಸ್ಯದ ಮೇಲೆ ಪರಿಣಾಮ ಬೀರಿದೆ. 1947ರಲ್ಲಿ ಇಲ್ಲಿನ ಬಹುತೇಕ ಅಂತರ್‌ಧರ್ಮೀಯ ಸೌಹಾರ್ದ ನಾಶವಾಗಿತ್ತು. ಮೇವಾತ್‌ನ ಬಹುತೇಕ ಜನರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಭಾಗವಾಗಿದ್ದ ಪ್ರಜಾ ಮಂಡಲಗಳನ್ನು ಮತ್ತು ಪರಿಷತ್‌ಗಳನ್ನು ಬೆಂಬಲಿಸಿದ್ದರೂ 1947ರ ಆ ಘಳಿಗೆ ಬಹಳಷ್ಟು ಮೇವಾತಿಗಳಿಗೆ ಸ್ವಾತಂತ್ರ್ಯವನ್ನು ನೀಡಿರಲಿಲ್ಲ. ಬದಲಾಗಿ ಸಾಮಾನ್ಯ ಮೇವಾತಿಗಳಿಗೆ ಆ ಘಳಿಗೆಯಲ್ಲಿ ಹತ್ಯೆ, ಅತ್ತಿಂದಿತ್ತ ಓಡಾಟ ಮತ್ತು ತಮ್ಮ ಮಹಿಳೆಯರನ್ನು ಇತರರು ಅಪಹರಿಸುವುದನ್ನು ನೋಡಿಕೊಳ್ಳುವುದೇ ಆಗಿತ್ತು. ಅವರು ಈ ಅವಧಿಯನ್ನು ಹುಲ್ಲರ್ ಎಂದು ಕರೆದಿದ್ದರು, ಪ್ಯಾಲೆಸ್ತೀನಿಗಳು ತಮ್ಮ ದೇಶದ ವಿಭಜನೆಯನ್ನು ಅಲ್-ನಕ್ಬಾ ಎಂದು ಕರೆದಂತೆ.
ಗೋಸೇವಕರು ಏನನ್ನು ತಿಳಿದಿಲ್ಲವೆಂದರೆ, ಮೇವಾತಿಗಳು ಬೃಜ್‌ನ ಭಾಗವಾಗಿರುವ ಕಾರಣ ಗೋರಕ್ಷಣೆಯ ಬಹಳ ಆಳವಾದ ಮತ್ತು ವಿಸ್ತಾರವಾದ ಸಂಸ್ಕೃತಿಯ ಭಾಗವಾಗಿದ್ದಾರೆ. ಗೋರಕ್ಷಕರು ಒಂದು ಬಾರಿ ಮೇವಾತ್‌ನ ಗ್ರಾಮಗಳಲ್ಲಿ ಸಂಚರಿಸಿ ಇಲ್ಲಿನ ಜನರ ಜೊತೆ ಮಾತನಾಡಿದರೆ ಅವರು ಗೋವರ್ಧನ ಪೂಜೆಯನ್ನು ಆಚರಿಸುವುದು, ಗೋವರ್ಧನ್ ಪರಿಕ್ರಮ ಎಂಬ ಯಾತ್ರೆಯಲ್ಲಿ ಭಾಗವಹಿಸುವ ಮತ್ತು ಗೋವರ್ಧನ ಪರ್ವತಕ್ಕೆ ಪ್ರದಕ್ಷಿಣೆ ಹಾಕುವ ಬಗ್ಗೆ ತಿಳಿಸಲು ಸಾಕಷ್ಟು ಜನರು ಸಿಗುತ್ತಾರೆ. ನಾನು ನನ್ನ ಕೆಲಸ ಮುಂದುವರಿಸುತ್ತಿದ್ದಂತೆಯೇ ಮೇವಾತ್‌ನ ಕಭರತ್‌ಪುರ ಜಿಲ್ಲೆಯ ಕಮನ್ ಎಂಬ ಪ್ರದೇಶದಿಂದ ಸಾಕಷ್ಟು ಜನರು ಗೋವರ್ಧನ-ಗಿರಿರಾಜ್ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆಗೆ ಯಾತ್ರೆ ತೆರಳಿದ್ದರು.
ಯದುವಂಶಿ ಮೇವಾತಿಗಳು ತಾವು ಶ್ರೀಕೃಷ್ಣನ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಕೃಷ್ಣ ಓರ್ವ ಅವತಾರ ಪುರುಷನಾಗಿದ್ದು ಅಥವಾ ದೈವಾಂಶ ಸಂಭೂತನಾಗಿದ್ದು ಗೋಪಿಕೆಯರನ್ನು ಮೋಡಿ ಮಾಡುತ್ತಾನೆ ಎಂದು ಮೇವಾತ್‌ನ ಮೌಖಿಕ ಸಂಪ್ರದಾಯದಲ್ಲಿ ಹೇಳಲಾಗಿದೆ. ರಾಮನಂತೆ ಕೃಷ್ಣನೂ ಕೂಡಾ ದುಷ್ಟರ ನಿಗ್ರಹಕ್ಕಾಗಿ ಜನ್ಮವೆತ್ತವನು. ಮೇವಾತಿಗಳು ತಮ್ಮ ಜೀವನಾಧಾರಕ್ಕಾಗಿ ಉಳುಮೆ ಮತ್ತು ದನಗಾಹಿಯನ್ನು ಮಾಡುತ್ತಾರೆ. ಉತ್ತರ ಭಾರತದ ಗೋಸಾಕಣೆಯ ಮೂಲಕ ಜೀವನ ನಡೆಸುವ ಕುಟುಂಬಗಳ ಮಹಿಳೆಯರಲ್ಲಿ ಮೇವಾತ್‌ನ ಮಹಿಳೆಯರು ಅತ್ಯಂತ ಸುಂದರವಾದ ಸ್ಥಳೀಯವಾಗಿ ಬಟೇವ್ರಾಸ್ ಎಂದು ಕರೆಯಲ್ಪಡುವ ಸೆಗಣಿಯ ರೊಟ್ಟಿಗಳನ್ನು ಮಾಡುತ್ತಾರೆ. ಅಲ್ವಾರ್ನಾ, ಇತರನಾ ಮತ್ತು ದೌತಾನಾದಂಥಾ ಕೆಲವೊಂದು ಅರಣ್ಯ ಪ್ರದೇಶಗಳು ಒಂದೊಮ್ಮೆ ಇದೇ ಕಾರಣಕ್ಕೆ ಪ್ರಸಿದ್ಧಿಯಾಗಿತ್ತು-ಈ ಪ್ರದೇಶದಲ್ಲಿ ವಿಭಜನೆಯ ಸಮಯದಲ್ಲಿ ಮೇವಾತಿಗಳು ತಾವು ತೊರೆದು ಹೋಗುವಂತಹ ಸಾವಿರಾರು ಪಶುಗಳನ್ನು ಹರಾಜು ಹಾಕಿದ್ದರು.
ಆದರೆ ಸಮಕಾಲೀನ ಚರ್ಚೆಯು ಆಧುನಿಕ ಯೂರೋಪ್‌ನ ಧರ್ಮದ ಬಗೆಗಿನ ಕಲ್ಪನೆಯ ಶತಮಾನದಷ್ಟು ಹಳೆಯದಾದ ದೃಷ್ಟಿಕೋನದತ್ತ ಕನ್ನಡಿ ಹಿಡಿಯುತ್ತದೆ. ಈ ಕಲ್ಪನೆಯು ಹಿಂದೂ-ಮುಸ್ಲಿಂ ಅಥವಾ ಮುಸ್ಲಿಂ-ಹಿಂದೂ ಎಂಬ ವ್ಯಕ್ತಿತ್ವ ಅಥವಾ ಸಮುದಾಯವಿರುವ ಸಾಧ್ಯತೆಗೆ ಅವಕಾಶ ನೀಡುವುದಿಲ್ಲ. ಅದನ್ನು ಅವರವರ ನಂಬಿಕೆ ಮತ್ತು ಅಭ್ಯಾಸಗಳಿಂದಷ್ಟೇ ಪ್ರತ್ಯೇಕಗೊಳಿಸಬಹುದಷ್ಟೇ ಮತ್ತು ಆ ಮೂಲಕ ಸಂಕೀರ್ಣ ಗುರುತು, ಸಂಸ್ಥೆಗಳು ಮತ್ತು ಅಭ್ಯಾಸಗಳನ್ನು ಹೊಂದಬಹುದು. ಪ್ರಜಾಪ್ರಭುತ್ವದ ಕಲ್ಪನೆ
ಇನ್ನು ಪ್ರಜಾಪ್ರಭುತ್ವದ ಕಲ್ಪನೆಯತ್ತ ವಾಪಸ್ ಬಂದರೆ ಮೂರು ಅಂಶಗಳ ಮೇಲೆ ಬೆಳಕು ಚೆಲ್ಲಬೇಕಾಗುತ್ತದೆ. ಮೇವಾತಿಗಳು ಗೋರಕ್ಷಣೆಯ ಸಂಸ್ಕೃತಿಯ ಭಾಗವಾಗಿರಲಿಲ್ಲ ಎಂದಾಗಿದ್ದರೂ ಕೇವಲ ಸಂಶಯದ ಮೇಲೆ ಓರ್ವ ನಾಗರಿಕನ ಮೇಲೆ ಹಲ್ಲೆ ಮಾಡುವುದು ನ್ಯಾಯಸಮ್ಮತವಾದುದಲ್ಲ. ಎರಡನೆಯದಾಗಿ ಎಲ್ಲರ ಹಿತದೃಷ್ಟಿಯನ್ನು ಗಮನಿಸುವುದಾದರೆ ಆಧುನಿಕ ಪ್ರಜಾಪ್ರಭುತ್ವದ ವಾದವನ್ನು ಒಂದು ಧ್ವನಿ ಎಂದು ಪರಿಗಣಿಸಬಹುದು. ಮಶಿಯಾವೆಲ್ಲಿ ಕೂಡಾ, ‘‘ನಾಯಕರು ಮತ್ತು ನಾಗರಿಕರು ಸಮಾನವಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ತೊರೆದು ಎಲ್ಲರ ಹಿತದೃಷ್ಟಿಯನ್ನು ಹೊಂದಲು ಸಜ್ಜಾಗಿದ್ದರೆ ಮಾತ್ರ ಸ್ವಾತಂತ್ರ್ಯವನ್ನು ರಕ್ಷಿಸಬಹುದು’’ ಎಂದು ವಾದಿಸಿದ್ದಾರೆ. ನಾಗರಿಕರು ಭಯದಿಂದ ಹೊರಬಂದು ಸಾರ್ವಜನಿಕ ಜೀವನದಲ್ಲಿ ಸಂಪೂರ್ಣವಾಗಿ ತೊಡಗಲು ನಂಬಿಕೆಯೆಂಬುದು ಒಂದು ಪ್ರಮುಖ ಅಂಶವಾಗುತ್ತದೆ.
ಮೂರನೆಯದಾಗಿ, ಭಾರತದ ಪ್ರಜಾಪ್ರಭುತ್ವ ವಾದದ ಸಂಪ್ರದಾಯವು ಕನಿಷ್ಠಪಕ್ಷ ಅಶೋಕನ ಕಾಲದವರೆಗೆ ಹಿಂದೆ ಸಾಗುತ್ತದೆ, ಆತ ಆ ಕಾಲದಲ್ಲಿ ದ್ವೇಷಭಾಷಣದ ವಿರುದ್ಧ ಬೋಧನೆ ಮಾಡಿರುವುದು ಆತನ ಕಾಲದ ಶಾಸನಗಳಿಂದ ತಿಳಿಯುತ್ತದೆ. ನನ್ನ ಸಹೋದ್ಯೋಗಿ ರಾಜೀವ್ ಭಾರ್ಗವ ಅವರು ಅಶೋಕನ ಶಾಸನಗಳನ್ನು ಅಧ್ಯಯನ ಮಾಡಿದ್ದು ‘‘ಅವುಗಳು ಆಧುನಿಕ ಯೂರೋಪಿಯನ್ ಕಲ್ಪನೆಯು ಅಭಿವೃದ್ಧಿಪಡಿಸಿದ ಸಹಿಷ್ಣುತೆಯ ಕಲ್ಪನೆಯನ್ನಲ್ಲದೆ ಉನ್ನತ ರಾಜಕೀಯ ನೈತಿಕತೆಯನ್ನು ವ್ಯಕ್ತಪಡಿಸುತ್ತವೆ’’ ಎಂದವರು ಹೇಳುತ್ತಾರೆ. ಹನ್ನೆರಡನೆ ಶಾಸನವು ಇತರ ಪಂಗಡಗಳಿಗೆ ಅಥವಾ ಜಾತಿಗಳಿಗೆ ಅವಮಾನ ಮಾಡುವಂತಹ ಅಥವಾ ತನ್ನದೇ ಪಂಗಡವನ್ನು ಪ್ರಶಂಸಿಸುವ ಮಾತುಗಳನ್ನು ವಿರೋಧಿಸುತ್ತದೆ. ಸಂಯಮ ಮತ್ತು ಭವಶುದ್ಧಿಯ ಮೇಲೆ ಒತ್ತು ನೀಡಲಾಗಿದೆ. ಕೊನೆಯದಾಗಿ, ಗೋರಕ್ಷಕ ಸಂಸ್ಥೆಗಳೇ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಗೆ ಮುಖ್ಯವಾಗಿದ್ದಾರೆಯೇ ಎಂಬ ಪ್ರಶ್ನೆ ಪ್ರಜಾಪ್ರಭುತ್ವಕ್ಕೆ ಬೇಕಾಗಿದೆ.
ಕೃಪೆ: thewire.in







