ಅಚ್ಚರಿಯ ಬೆಲೆಯಲ್ಲಿ ಮತ್ತೆ ಮಾರುಕಟ್ಟೆಗೆ ನೋಕಿಯಾ ಮೊಬೈಲ್ !

ನವದೆಹಲಿ, ಸೆ.23: ಬಹಳ ದೊಡ್ಡ ಬ್ರೇಕ್ ನಂತರ ಮೈಕ್ರೋಸಾಫ್ಟ್ ಕಂಪೆನಿ ನೋಕಿಯಾ ಬ್ರ್ಯಾಂಡಿನ ಸ್ಮಾರ್ಟ್ ಫೋನಿನೊಂದಿಗೆ ಮತ್ತೆ ಮಾರುಕಟ್ಟೆ ಪ್ರವೇಶಿಸಲಿದೆ. ಈ ಹೊಸ ಸ್ಮಾರ್ಟ್ ಫೋನಿನ ಹೆಸರು ನೋಕಿಯಾ 216 ಆಗಿದೆ. ಅಷ್ಟೊಂದಾಗಿ ತಂತ್ರಜ್ಞಾನ ಸ್ನೇಹಿಯಲ್ಲದವರು ಆದರೆ ಇಂಟರ್ನೆಟ್ ಹಾಗೂಅಗತ್ಯ ಆ್ಯಪ್ ಉಪಯೋಗಿಸುವವರನ್ನು ಗಮನದಲ್ಲಿರಿಸಿಕೊಂಡು ಈ ಫೋನನ್ನು ತಯಾರಿಸಲಾಗಿದೆ. ಈ ಫೋನಿನ ಬೆಲೆ ಕೇವಲ ರೂ.2,495 ಆಗಿದ್ದು, ಭಾರತದಲ್ಲಿ ಇದು ಅಕ್ಟೋಬರ್ 24ರಂದು ಲಭ್ಯವಾಗಲಿದೆ.
ನೋಕಿಯಾ 216 ಫೋನಿನ ಕೆಲ ಫೀಚರ್ಸ್ ಇಂತಿವೆ. ಈ ಫೋನಿನಲ್ಲಿ 2.4 ಇಂಚಿನ ಕ್ಯೂ ವಿ ಜಿ ಎ ಡಿಸ್‌ಪ್ಲೇ ಇದ್ದು, ಅದರ ರಿಸೊಲ್ಯೂಶನ್ 240x320 ಪಿಕ್ಸೆಲ್ ಆಗಿದೆ. ಈ ಫೋನಿನಲ್ಲಿ 32 ಜಿಬಿ ತನಕದ ಮೆಮರಿ ಕಾರ್ಡ್ ಉಪಯೋಗಿಸಬಹುದಾಗಿದೆ ಹಾಗೂ ಈ ಫೋನಿನಲ್ಲಿ 0.3 ಮೆಗಾ ಪಿಕ್ಸೆಲ್ ವಿಜಿಎ ಕ್ಯಾಮರಾ ಇದೆ.
ಈ ಫೋನ್ ಮೂಲಕ ಅಂತರ್ಜಾಲ ಸಂಪರ್ಕ ಸಾಧಿಸಬಹುದಾಗಿದೆಯಲ್ಲದೆ ಫೋನಿನಲ್ಲಿ 2,000 ಕಾಂಟ್ಯಾಕ್ಟ್ಸ್ ಹೆಸರುಗಳನ್ನು ಸೇವ್ ಮಾಡಬಹುದಾಗಿದೆ. ಈ ಹ್ಯಾಂಡ್ ಸೆಟ್ ನಲ್ಲಿ 1,020 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದೆ. ಈ ಬ್ಯಾಟರಿ 18 ಗಂಟೆಯ ಟಾಕ್ ಟೈಮ್ ನೀಡುತ್ತದೆ ಎಂದು ಹೇಳಲಾಗಿದೆ.
ಈ ಫೋನಿನಲ್ಲಿ ಎಫ್‌ಎಂ ರೇಡಿಯೋ, ವೀಡಿಯೋ ಪ್ಲೇಯರ್ ಮುಂತಾದ ಫೀಚರ್‌ಗಳೂ ಇದ್ದು, ಈ ಫೋನ್ ಕಪ್ಪು, ಬೂದು ಹಾಗೂ ನೀಲಿ ಬಣ್ಣಗಳಲ್ಲಿ ಲಭ್ಯವಾಗಲಿದೆ.





