ಇಡೀ ಸಮುದಾಯದ ವಿರುದ್ಧ ವದಂತಿ ಹರಡುವ ಮಾಧ್ಯಮಗಳಿಂದಲೇ ವಿನಾಶ : ಪೋಪ್

ವ್ಯಾಟಿಕನ್, ಸೆ.23: ‘‘ಗಾಸಿಪ್ ಅಥವಾ ವದಂತಿಗಳ ಆಧಾರದಲ್ಲಿ ಕಾರ್ಯನಿರ್ವಹಿಸುವಂತಹ ಪತ್ರಿಕೋದ್ಯಮ ಕೂಡ ಒಂದು ವಿಧದ ‘ಉಗ್ರವಾದ’ಕ್ಕೆಸಮವಾಗಿದ್ದು, ವಲಸಿಗರ ಬಗ್ಗೆ ಅನಗತ್ಯ ಭೀತಿ ಸೃಷ್ಟಿಸುವ ಮಾಧ್ಯಮಗಳು ವಿನಾಶಕಾರಿಯಾಗಿ ವರ್ತಿಸುತ್ತಿವೆ’’ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
ಇಟಲಿಯ ನ್ಯಾಷನಲ್ ಜರ್ನಲಿಸ್ಟ್ಸ್ ಗಿಲ್ಡ್ಇದರ ನಾಯಕರನ್ನು ಉದ್ದೇಶಿಸಿ ಗುರುವಾರದಂದು ಮಾತನಾಡಿದ ಪೋಪ್, ‘‘ದಿದ 24 ಗಂಟೆಗಳ ಸಮಯದಲ್ಲೂಸುದ್ದಿ ನೀಡುವ ಇಂದಿನ ಕಾಲದಲ್ಲಿ ಪತ್ರಕರ್ತರು ಸತ್ಯದ ಅನ್ವೇಷಣೆಯಲ್ಲಿ ಸ್ವಲ್ಪ ಹೆಚ್ಚು ದೂರವೇ ಕ್ರಮಿಸಬೇಕಾಗುತ್ತದೆ’’ ಎಂದು ಹೇಳಿದರು.
ವದಂತಿಗಳನ್ನು ಹರಡುವುದು ‘ಉಗ್ರವಾದದ’ ಉದಾಹರಣೆ.ಒಬ್ಬ ವ್ಯಕ್ತಿಯನ್ನು ನಿಮ್ಮ ನಾಲಗೆಯಿಂದಲೇ ಕೊಲ್ಲಬಹುದು.’’ ಎಂದು ಹೇಳಿದ ಪೋಪ್ ‘‘ಈ ಮಾತು ಪತ್ರಕರ್ತರಿಗೆ ಹೆಚ್ಚು ಅನ್ವಯವಾಗುತ್ತದೆ. ಅವರ ದನಿಗಳು ಪ್ರತಿಯೊಬ್ಬರನ್ನು ತಲುಪುತ್ತದೆ ಹಾಗೂ ಅದೊಂದು ಶಕ್ತಶಾಲಿ ಅಸ್ತ್ರ’’ಎಂದವರು ಹೇಳಿದರು.
ಜನರ ವಿರುದ್ಧ ವಿನಾಶದ ಅಸ್ತ್ರವಾಗಿ ಪತ್ರಿಕೋದ್ಯಮವನ್ನು ಬಳಸಬಾರದು ಎಂದುಫ್ರಾನ್ಸಿಸ್ ಒತ್ತಿ ಹೇಳಿದ್ದಾರೆ. ‘‘ಯುದ್ಧ ಅಥವಾ ಹಸಿವಿನಿಂದ ಜನರಿಗೆ ವಲಸೆ ಹೋಗುವುದು ಬಿಟ್ಟು ಬೇರೆ ದಾರಿಯಿಲ್ಲವಾದಾಗ ಮಾಧ್ಯಮ ಭೀತಿಯ ವಾತಾವರಣ ೃಷ್ಟಿಸುವ ಯತ್ನ ಮಾಡಬಾರದು’’ಎಂದು ಅವರು ತಿಳಿಸಿದರು.
ಇಟಲಿಯಲ್ಲಿರುವ ಹೆಚ್ಚಿನ ದೈನಿಕಗಳು ರಾಜಕೀಕರಣಗೊಂಡಿದ್ದು ತಮ್ಮ ರಾಜಕೀಯ ಧೋರಣೆಗಳಿಗಿಂತ ಭಿನ್ನ ಧೋರಣೆ ಹೊಂದಿರುವವರನ್ನು ತೆಗಳುವುದು ಸಾಮಾನ್ಯವಾಗಿ ಬಿಟ್ಟಿದೆಯಲ್ಲದೆ ಕೆಲವೊಮ್ಮೆ ರಾಜಕೀಯ ವೈರಿಗಳ ಖಾಸಗಿ ಬದುಕಿನ ಸುತ್ತವೂ ಅನಗತ್ಯ ವದಂತಿಗಳನ್ನು ಸೃಷ್ಟಿಸುತ್ತಿವೆಯೆಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.





