ಸನ್‌ಗ್ಲಾಸ್, ಕೊಡೆ ಹಿಡಿದು ವರದಿ ಮಾಡಿದ ವರದಿಗಾರ್ತಿ ವಜಾ !
.jpg)
ಚೀನಾ, ಸೆ. 23: ಕೊಡೆ ಬಳಸಿ ಮತ್ತು ಸನ್‌ಗ್ಲಾಸ್ ಹಾಕಿ ಸಂದರ್ಶನ ನಡೆಸಿದ ತನ್ನ ವರದಿಗಾರ್ತಿಯನ್ನು ಚೀನಾದ ದೃಶ್ಯಮಾಧ್ಯಮ ಶಿಯಾಮೆನ್ ಟಿವಿ ಕೆಲಸದಿಂದ ಕಿತ್ತುಹಾಕಿದೆ. ಈ ವರದಿಗಾರ್ತಿ ಕೆಲಸಕ್ಕೆ ಸೂಕ್ತವಲ್ಲದ ರೀತಿಯಲ್ಲಿ ಬಟ್ಟೆಧರಿಸಿದ್ದಳೆಂದು ಕೆಲಸದಿಂದ ತೆಗೆದದ್ದಕ್ಕೆ ಶಿಯಾಮೆನ್ ಟಿವಿ ಸ್ಪಷ್ಟೀಕರಣ ನೀಡಿದೆ ಎಂದು ವರದಿಯಾಗಿದೆ.
ಚೈನೀಸ್ ನಗರವಾದ ಶಿಯಾಮೆನ್‌ನಲ್ಲಿ ಮೆರಾಂಟಿ ಸುಳಿಗಾಳಿಯಿಂದಾದನಾಶನಷ್ಟದ ಕುರಿತು ವರದಿ ಮಾಡುವಾಗ ಕೊಡೆ ವತ್ತು ಸನ್‌ಗ್ಲಾಸ್ ಧರಿಸಿದ್ದರು. ಈಕೆ ವರದಿಮಾಡುವಾಗ ಯಾರೋ ಒಬ್ಬರು ಆ ಫೋಟೊ ತೆಗೆದು ಸೋಶಿಯಲ್ ಮೀಡಿಯದಲ್ಲಿ ಹಾಕಿದ್ದರು. ಅದು ನಂತರ ವೈರಲ್ ಆಗಿತ್ತು. ವರದಿಗಾರ್ತಿಯ ಕುರಿತು ಪ್ರತಿಕೂಲ ಕಮೆಂಟ್‌ಗಳು ಬಂದದ್ದರಿಂದ ಈಕೆಯನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಟಿವಿಚ್ಯಾನೆಲ್ ವಿವರಣೆ ನೀಡಿದೆ. ಪತ್ರಕರ್ತರ ಕುರಿತು ಸಾರ್ವಜನಿಕರಲ್ಲಿರುವ ದೃಷ್ಟಿಕೋನಕ್ಕೆ ಹಾನಿಯಾಗುವ ರೀತಿಯಲ್ಲಿ ವರ್ತಿಸಿದ್ದರಿಂದ ವರದಿಗಾರ್ತಿ ಕೆಲಸಕಳಕೊಳ್ಳಬೇಕಾಯಿತು. ಚ್ಯಾನೆಲ್ ನಿಷ್ಕರ್ಷೆ ಮಾಡುವ ನಿಯಮಗಳನ್ನುಅನುಸರಿಸಲು ನಿರಾಕರಿಸಿದ್ದಾರೆ. ಮತ್ತು ಸಂದರ್ಶನ ನಡೆಸುವಾಗ ಮಹಿಳಾ ವರದಿಗಾರ್ತಿ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಈ ವರದಿಗಾರ್ತಿಯ ವಿರುದ್ಧ ಆರೋಪವನ್ನು ಹೊರಿಸಲಾಗಿದೆ. ವಸ್ತ್ರಧಾರಣೆಯ ವಿಧಾನವನ್ನು ನೆಪವಾಗಿಟ್ಟು ವರದಿಗಾರ್ತಿಯನ್ನು ಕೆಲಸದಿಂದ ತೆಗೆದು ಹಾಕಿರುವುದು ಸರಿಯಲ್ಲ ಎಂದು ಕೆಲವರು ವಿರೋಧಿಸಿದ್ದಾರೆ ಎಂದು ವರದಿತಿಳಿಸಿದೆ.





