ಕಾಸರಗೋಡು: ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ

ಕಾಸರಗೋಡು, ಸೆ.23: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಮದ್ಯವನ್ನು ಕಾಸರಗೋಡು ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕ ಪರಾರಿಯಾಗಿದ್ದಾನೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ರಿಟ್ಝ್ ಕಾರು ಅತೀ ವೇಗದಲ್ಲಿ ನೆಲ್ಲಿಕುಂಜೆ ಒಳ ರಸ್ತೆಯಾಗಿ ತೆರಳಿದ್ದು ಸಂಶಯಗೊಂಡ ಪೊಲೀಸರು ಬೆನ್ನಟ್ಟಿದಾಗ ನೆಲ್ಲಿಕುಂಜೆ ಬಳಿ ಕಾರನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ತಪಾಸಣೆ ನಡೆಸಿದಾಗ 31 ಬಾಕ್ಸೃ್ಗಳಲ್ಲಿ ಮದ್ಯ ಪತ್ತೆಯಾಗಿದೆ.
ಮದ್ಯದ ಬಾಟಲಿಗಳ ಜೊತೆಗೆ ಪ್ಯಾಕೆಟ್‌ಗಳು ಕೂಡಾ ಕಾರಿನಲ್ಲಿದ್ದವು. ಕರ್ನಾಟಕದಿಂದ ಅಕ್ರಮವಾಗಿ ಈ ಮದ್ಯವನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪರಾರಿಯಾದ ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





