ಅಡ್ಯಾರ್ ಬದ್ರಿಯಾ ಜುಮಾ ಮಸೀದಿಯ ವಿದ್ಯಾರ್ಥಿ ಸಂಘಟನೆ ಟಿಟಿಎಸ್‌ಎಸ್‌ನ ವಾರ್ಷಿಕ ಮಹಾಸಭೆ
ಅಧ್ಯಕ್ಷರಾಗಿ ಮುಹಮ್ಮದ್ ಮನ್ಸೂರ್ ತೋಡಾರ್ ಆಯ್ಕೆ

ಮಂಗಳೂರು, ಸೆ.23: ಬದ್ರಿಯಾ ಜುಮಾ ಮಸೀದಿ ಅಡ್ಯಾರ್ ಕಣ್ಣೂರು ಇದರ ದರ್ಸ್ ವಿದ್ಯಾರ್ಥಿ ಸಂಘಟನೆ ಟಿಟಿಎಸ್‌ಎಸ್ ಇದರ ವಾರ್ಷಿಕ ಸಭೆಯು ಇತ್ತೀಚೆಗೆ ಮುದರ್ರಿಸ್ಸರಾದ ಎಸ್.ಬಿ.ಮುಹಮ್ಮದ್ ಶರೀಫ್ ಆರ್ಶಿದಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
2016-17ನೆ ಸಾಲಿನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಮನ್ಸೂರ್ ತೋಡಾರ್, ಉಪಾಧ್ಯಕ್ಷರಾಗಿ ಮುಹಮ್ಮದ್ ಮರ್‌ಝಾಕ್ ಬೀಡು, ಪ್ರ.ಕಾರ್ಯದರ್ಶಿ ಮುಹಮ್ಮದ್ ಶಫೀಕ್ ದಯಂಬು, ಕೋಶಾಧಿಕಾರಿ ತೌಸೀಪ್ ಡಿ.ಎಂ. ಬೀಡು, ಜೊತೆ ಕಾರ್ಯದರ್ಶಿ ಸಿನಾನ್ ವಳಚ್ಚಿಲ್ ಪದವು, ವರ್ಕಿಂಗ್ ಕಾರ್ಯದರ್ಶಿ ಮುಹಮ್ಮದ್ ಇರ್ಫಾನ್ ಬೀಡು, ಲೆಕ್ಕ ಪರಿಶೋಧಕ ಮುಸ್ತಫ ದಯಂಬು, ಕನ್ವೀನರ್ ಮುಹಮ್ಮದ್ ಸುಹೈಲ್ ದಯಂಬು, ತೌಸೀಫ್ ಡಿ.ಎಂ. ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





