Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದಲಿತರು, ಆದಿವಾಸಿಗಳ ಅನುದಾನವನ್ನು...

ದಲಿತರು, ಆದಿವಾಸಿಗಳ ಅನುದಾನವನ್ನು ಬಳಸದೆ ವಂಚಿಸುತ್ತಿರುವ ಸರಕಾರಗಳು...!

ನಿಖಿಲ್ ಎಂ. ಬಾಬುನಿಖಿಲ್ ಎಂ. ಬಾಬು23 Sept 2016 11:15 PM IST
share
ದಲಿತರು, ಆದಿವಾಸಿಗಳ  ಅನುದಾನವನ್ನು ಬಳಸದೆ  ವಂಚಿಸುತ್ತಿರುವ  ಸರಕಾರಗಳು...!

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗಾಗಿ 36 ವರ್ಷಗಳ ಹಿಂದೆ ಜಾರಿಗೊಳಿಸಲಾದ ಗಿರಿಜನರ ಉಪಯೋಜನೆ(ಟಿಎಸ್‌ಪಿ) ಹಾಗೂ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಯೋಜನೆಯಡಿ ಮೀಸಲಿಡಲಾದ 20.80 ಲಕ್ಷ ಕೋಟಿ ರೂ. ಪ್ರತಿವರ್ಷವೂ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲವೆಂಬುದನ್ನು ಇಂಡಿಯಾ ಸ್ಪೆಂಡ್ ಸಂಸ್ಥೆಯು ಪ್ರಕಟಿಸಿದ ವರದಿಯೊಂದು ಬಹಿರಂಗಪಡಿಸಿದೆ. ಪರಿಶಿಷ್ಟರ ಬದುಕನ್ನು ಸುಧಾರಣೆಯ ವಿಷಯದಲ್ಲಿ ನಮ್ಮ ಸರಕಾರಗಳು ಎಷ್ಟು ನಿರ್ಲಕ್ಷದಿಂದ ವರ್ತಿಸುತ್ತಿವೆಯೆಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.

 ಕಳೆದ ಮಳೆಗಾಲದಲ್ಲಿ ಹೀರಾಬಾಯಿಯ ಅತಿ ಕಿರಿಯ ಮಗು, ನಾಲ್ಕು ವರ್ಷ ವಯಸ್ಸಿನ ಶೇಷ್ ಕುಮಾರಿ ಜ್ವರದಿಂದ ಕುಸಿದುಬಿದ್ದಾಗ, ಹೊರಗೆ ಭಾರೀ ಮಳೆ ಬೀಳುತ್ತಿತ್ತು. ಈ ಪುಟ್ಟ ಮಗುವಿನ ಜ್ವರ ಉಲ್ಬಣಿಸಿದಾಗ ಇಡೀ ಕುಟುಂಬ ಅಸಹಾಯಕವಾಗಿ ವೀಕ್ಷಿಸುತ್ತಿತ್ತು.

 ಹೀರಾಬಾಯಿ ವಾಸವಾಗಿರುವ ಗ್ರಾಮವಾದ ಪಾಚ್‌ಕೋಲ್ ನೈಋತ್ಯ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿದೆ. ಈ ಗ್ರಾಮದ ಅತಿ ಸಮೀಪದ ಆರೋಗ್ಯ ಕೇಂದ್ರವು 25 ಕಿ.ಮೀ. ದೂರದಲ್ಲಿದೆ. ಪ್ರತಿ ಮುಂಗಾರಿನಲ್ಲಿಯೂ ಭಾಗ್‌ಬೆಲ್ ನದಿಯು ಉಕ್ಕಿ ಹರಿಯುವುದರಿಂದ ಆರೋಗ್ಯ ಕೇಂದ್ರದೊಂದಿಗೆ ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ನೆರೆನೀರಿನಲ್ಲಿ ಮುಳುಗುತ್ತದೆ. ಒಂದು ವೇಳೆ ಗ್ರಾಮಸ್ಥರು ಅನಾರೋಗ್ಯ ಪೀಡಿತರಾಗಿದ್ದಲ್ಲಿ, ಯಾವುದೇ ವೈದ್ಯಕೀಯ ನೆರವು ದೊರೆಯುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ.

‘‘ಇರುಳಿನಲ್ಲಿ ಸುಮಾರು ಎರಡು ಗಂಟೆಯ ವೇಳೆಗೆ ಜ್ವರ ವಿಪರೀತವಾಗಿ ಏರಿತು ಹಾಗೂ ನನ್ನ ಮಗಳಿಗೆ ನನ್ನನ್ನೇ ಗುರುತಿಸಲು ಸಾಧ್ಯವಾಗಲಿಲ್ಲ’’ ಎಂದು ತೀರಾ ಕೃಶಕಾಯದ ಹೀರಾಬಾಯಿ ಹೇಳುತ್ತಾರೆ. ಬೆಳಗಾಗುವ ಹೊತ್ತಿಗೆ ಆಕೆಯ ಮಗು ಇಹಲೋಕವನ್ನು ತ್ಯಜಿಸಿತು.

 ಹೀರಾಬಾಯಿ ಹಾಗೂ ಆಕೆಯ ಬದುಕುಳಿದಿರುವ ಮೂವರು ಮಕ್ಕಳು, ಅಳಿವಿನಂಚಿನಲ್ಲಿರುವ ಬುಡಕಟ್ಟು ಗುಂಪೆಂದು ವರ್ಗೀಕರಿಸಲ್ಪಟ್ಟ ಭಾರಿಯಾ ಸಮುದಾಯಕ್ಕೆ ಸೇರಿದವರು. ಆಕೆಯ ಜೀವನದಲ್ಲಿ ಎದುರಾದ ಈ ದುರಂತವು ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳಲ್ಲಿ ಶೇ.44ರಷ್ಟು ಆರೋಗ್ಯ ಮೂಲಸೌಕರ್ಯಗಳ ಕೊರತೆಯಿರುವುದರ ಪರಿಣಾಮವಾಗಿದೆ. ಕಳೆದ ವರ್ಷ ರಾಜ್ಯ ಸರಕಾರವು 4 ಸಾವಿರ ಕೋಟಿ ರೂ. ಅನುದಾನ ನೀಡಿರುವ ಹೊರತಾಗಿಯೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ.

ಇಂಡಿಯಾ ಸ್ಪೆಂಡ್ ಸಂಸ್ಥೆಯು, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಪಡೆದ ವಿವರಗಳು, ಮಧ್ಯಾಹ್ನದೂಟ, ವಿದ್ಯಾರ್ಥಿವೇತನ ಹಾಗೂ ಬೆಳೆವಿಮೆಯಂತಹ ಯೋಜನೆಗಳ ಮೂಲಕ ಕಳೆದ 35 ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಬದುಕಿನ ಸುಧಾರಣೆಗಾಗಿ ಮೀಸಲಿಡಲಾದ 2.8 ಲಕ್ಷ ರೂ. ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿಲ್ಲವೆಂಬ ಅಂಶವನ್ನು ಬಯಲಿಗೆಳೆದಿದೆ. ಇಂಡಿಯಾ ಸ್ಪೆಂಡ್ ಸಂಸ್ಥೆಯು ಈ ಬಗ್ಗೆ ನಡೆಸಿದ ಎರಡನೆ ಹಂತದ ತನಿಖೆಯು ಯಾಕೆ ಈ ನಿಧಿಗಳ ಬಳಕೆಯಾಗಿಲ್ಲವೆಂಬುದನ್ನು ಅನಾವರಣಗೊಳಿಸಿದೆ.

ಯೋಜನಾ ಆಯೋಗದ ನೂತನ ‘ಅವತಾರ’ವಾದ ನೀತಿ ಆಯೋಗವು ಇಂಡಿಯಾಸ್ಪೆಂಡ್ ಲೆಕ್ಕಹಾಕಿ ಅಂಕಿಅಂಶಗಳನ್ನು ದೃಢೀಕರಿಸಿದೆ. ಆದಾಗ್ಯೂ, ಅಸಮರ್ಪಕ ನಿಧಿ ಬಳಕೆಯಾಗಿದೆಯೆಂಬ ಇಂಡಿಯಾಸ್ಪೆಂಡ್‌ನ ಆರೋಪದಿಂದ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯಾದ ಅಮಿತಾಭ್ ಕಾಂತ್ ದೂರ ಸರಿದಿದ್ದಾರೆ. ‘‘ನಾವು ಕೇವಲ ಈ ನಿಧಿಗಳ ಕಣ್ಗಾವಲು ಏಜೆನ್ಸಿಯಾಗಿದ್ದೇವೆ. ರಾಜ್ಯಗಳು ಹಾಗೂ ಸಚಿವಾಲಯಗಳು ಹೆಚ್ಚು ಮೊತ್ತವನ್ನು ವ್ಯಯಿಸಬೇಕಾಗಿದೆ. ಆದರೆ ನಾವು ಕಣ್ಗಾವಲಿಗೆ ವ್ಯವಸ್ಥೆಯೊಂದನ್ನು ರೂಪಿಸಲಿದ್ದೇವೆ ಹಾಗೂ ಹಾಲಿ ಸರಕಾರವು ಈ ವಿಷಯವಾಗಿ ಕಾರ್ಯಪ್ರವೃತ್ತವಾಗಿದೆ’’ ಎಂದು ಅವರು ಇಂಡಿಯಾಸ್ಪೆಂಡ್‌ಗೆ ತಿಳಿಸಿದ್ದಾರೆ.

ಯೋಜನಾ ಮಾರ್ಗದರ್ಶಿಸೂತ್ರಗಳ ಮರುಉಲ್ಲಂಘನೆ

  ಹೀಗೆ ವ್ಯಯಿಸಲಾಗದೆ, ಅವಧಿ ಮೀರಿದ ಹಾಗೂ ಕೇಂದ್ರಕ್ಕೆ ಹಿಂದಿರುಗಿಸಲ್ಪಟ್ಟ ಹಣದ ಮೊತ್ತವು ಭಾರತದ ಕೃಷಿ ಬಜೆಟ್‌ಗಿಂತ ಎಂಟು ಪಟ್ಟು ಹೆಚ್ಚಿದೆ. ಸರ್ಬಿಯ, ಜೋರ್ಡಾನ್ ಅಥವಾ ನೇಪಾಳ ದೇಶಗಳ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಕ್ಕಿಂತಲೂ ಅಧಿಕವಾಗಿದೆ. ಒಂದು ವೇಳೆ ಈ 2.8 ಲಕ್ಷ ಕೋಟಿ ರೂ.ಗಳನ್ನು ಭಾರತದ 25 ಕೋಟಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ವಿತರಿಸಿದಲ್ಲಿ, ಪ್ರತಿಯೊಬ್ಬರಿಗೂ ತಲಾ 11,289 ರೂ. ದೊರೆಯಲಿದೆ.

ಈ ವ್ಯಯಿಸದ 2.8 ಲಕ್ಷ ಕೋಟಿ ರೂ. ಎರಡು ನಿಧಿಗಳಿಗೆ ಸೇರಿದ್ದಾಗಿದೆ. 1974-75ರ ವಿತ್ತವರ್ಷದಲ್ಲಿ ಆರಂಭವಾದ ಬುಡಕಟ್ಟು ಉಪಯೋಜನೆ (ಟಿಎಸ್‌ಪಿ) ಹಾಗೂ 1979-80ರಲ್ಲಿ ಆರಂಭಗೊಡ ಪರಿಶಿಷ್ಟ ಜಾತಿ ಬುಡಕಟ್ಟು ಯೋಜನೆ (ಎಸ್‌ಸಿಎಸ್‌ಪಿ). ಪರಿಶಿಷ್ಟರಿಗಾಗಿ ವಾರ್ಷಿಕ ಬಜೆಟ್‌ನಲ್ಲಿ ಬಿಡುಗಡೆ ಯಾಗುವ ಅನುದಾನದ ಹಂಚಿಕೆಗಾಗಿ ಇವುಗಳ ರಚನೆಯಾಗಿದೆ.

ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕನಿಷ್ಠ ಪಕ್ಷ ಎಸ್ಸಿ ಹಾಗೂ ಎಸ್ಟಿಗಳ ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಈ ಶೋಷಿತ ಪಂಗಡಗಳಿಗೆ ಹಣವನ್ನು ಮೀಸಲಿಡಬೇಕಾಗುತ್ತದೆ. ಭಾರತದಲ್ಲಿ ಎಸ್ಸಿ ಹಾಗೂ ಎಸ್ಟಿಗಳ ಹಾಲಿ ಜನಸಂಖ್ಯೆಯು ಕ್ರಮವಾಗಿ 16.6 ಶೇಕಡ ಹಾಗೂ 8.6 ಶೇ. ಆಗಿದೆ. ಹೀಗಾಗಿ ಕೇಂದ್ರ ಬಜೆಟ್‌ನ 16.6 ಶೇ. ಹಾಗೂ 8.6 ಶೇ. ಹಣವನ್ನು ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿಗೆ ಅನುದಾನವಾಗಿ ನೀಡಬೇಕಾಗಿದೆ. ರಾಜ್ಯಗಳಿಗೂ ಈ ನಿಯಮವು ಅನ್ವಯಿಸುತ್ತದೆ.

 2006 ಹಾಗೂ 2014ರಲ್ಲಿ ಹಿಂದಿನ ಯೋಜನಾ ಆಯೋಗವು ಜಾರಿಗೊಳಿಸಿದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಈ ನಿಧಿಗಳು, ಅವಧಿ ಮೀರಿದರೂ ರದ್ದಾಗಲಾರವು. ಆದರೆ ಈ ನಿಧಿಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ವ್ಯಯಿಸಿದ್ದೇ ಪರಿಶಿಷ್ಟರ ಅಭಿವೃದ್ಧಿ ಯೋಜನೆಗಳು ಕುಂಠಿತಗೊಳ್ಳಲು ಕಾರಣವಾಗಿವೆ. ಯಾವುದೇ ಪಕ್ಷವು ಅಧಿಕಾರದಲ್ಲಿರಲಿ, ಎಸ್ಸಿ ಹಾಗೂ ಎಸ್ಟಿಗಳು ಈ ನಿಧಿಗಳ ಪ್ರಯೋಜನ ಪಡೆದಿರುವುದು ತುಂಬಾ ಅಪರೂಪ.

ಬಹುತೇಕ ರಾಜ್ಯಗಳಿಂದ ನಿಧಿ ಬಳಕೆಯಲ್ಲಿ ನಿರ್ಲಕ್ಷ

 ಎಸ್‌ಸಿಎಸ್‌ಪಿ ನಿಧಿಗಳನ್ನು ವ್ಯಯಿಸದೆ ಉಳಿಸಿದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಪಂಜಾಬ್ ರಾಜ್ಯಗಳು ಅಗ್ರಸ್ಥಾನದಲ್ಲಿದ್ದರೆ, ಟಿಎಸ್‌ಪಿಯಲ್ಲಿ ಜಾರ್ಖಂಡ್, ಒಡಿಶಾ ಹಾಗೂ ಆಂಧ್ರ ಮುಂಚೂಣಿಯಲ್ಲಿವೆ.

 ವೆಚ್ಚ ಮಾಡದೆ ಇರುವ ಮೊತ್ತದ ಶೇಕಡವಾರು ಮೊತ್ತವು ಗಣನೀಯ ಪ್ರಮಾಣದಲ್ಲಿ ಅಧಿಕವಾಗಿದೆ. ಉದಾಹರಣೆಗೆ 2014-15ರ ಸಾಲಿನಲ್ಲಿ ತೆಲಂಗಾಣದಲ್ಲಿ ಈ ಮೊತ್ತವು ಶೇ.61 ಅಥವಾ 4,643 ಕೋಟಿ ರೂ.ಗಳಾಗಿತ್ತು. ಆದರೆ ವಾಸ್ತವವಾಗಿ ವೆಚ್ಚ ಮಾಡದೆ ಇರುವ ಮೊತ್ತವು ಇನ್ನೂ ಅಧಿಕ. ಯಾಕೆಂದರೆ ವಿವಿಧ ಸರಕಾರಗಳು ಮಾಡಿರುವ ವೆಚ್ಚಗಳ ಕುರಿತಾದ ಹಲವು ವರ್ಷಗಳ ದತ್ತಾಂಶಗಳು ಲಭ್ಯವಿರುವುದಿಲ್ಲ.

  83 ವರ್ಷ ವಯಸ್ಸಿನ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಭಾರತ ಸರಕಾರದ ಮಾಜಿ ಪ್ರಧಾನ ಕಾರ್ಯದರ್ಶಿಯಾದ ಎಸ್.ಪಿ. ಕೃಷ್ಣನ್ 1980ರಲ್ಲಿ ಆರಂಭಗೊಂಡ ಎಸ್‌ಸಿಎಸ್‌ಪಿ ಯೋಜನೆಯ ಹಿಂದಿರುವ ಶಕ್ತಿಯಾಗಿದ್ದಾರೆ. ಆಗಿನ ಪ್ರಧಾನಿ ಇಂದಿರಾಗಾಂಧಿ ಈ ಕಾರ್ಯತಂತ್ರವನ್ನು ಜಾರಿಗೊಳಿಸಲು ತನಗೆ ಪತ್ರವೊಂದನ್ನು ಬರೆಯುವ ಮೂಲಕ ಸರಕಾರಿ ಕೆಂಪುಪಟ್ಟಿಯನ್ನು ಹೇಗೆ ಕತ್ತರಿಸಿದರೆಂಬುದನ್ನು ಎಸ್.ಪಿ. ಕೃಷ್ಣನ್ ಸ್ವಾರಸ್ಯಕರವಾಗಿ ಬಣ್ಣಿಸುತ್ತಾರೆ.

ಆದರೆ ಎಸ್‌ಸಿಎಸ್‌ಪಿ ಯೋಜನೆಯ ಅನುಷ್ಠಾನದಲ್ಲಿ ಉಂಟಾಗಿರುವ ಲೋಪದ ಬಗ್ಗೆ ಮಾತನಾಡುವಾಗ ಕೃಷ್ಣನ್ ಅವರ ಮುಖ ಕಪ್ಪಿಟ್ಟುಕೊಳ್ಳುತ್ತದೆ. ‘‘ ಅತ್ಯಂತ ಹಿಂದುಳಿದ ವರ್ಗಗಳಾದ ದಲಿತರು ಹಾಗೂ ಆದಿವಾಸಿಗಳ ಬಗ್ಗೆ ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು ಯಾವಾಗಲೂ ಉದಾಸೀನತೆಯಿಂದಲೇ ವರ್ತಿಸುತ್ತಾ ಬಂದಿದ್ದಾರೆ’’ ಎಂದವರು ವಿಷಾದ ವ್ಯಕ್ತಪಡಿಸುತ್ತಾರೆ.

1980ರಲ್ಲಿ ಎಸ್‌ಸಿಎಸ್‌ಪಿ ಯೋಜನೆಯನ್ನು ಘೋಷಿಸುತ್ತಾ ಇಂದಿರಾಗಾಂಧಿ ಹೀಗೆ ಪತ್ರವೊಂದನ್ನು ಬರೆದಿದ್ದರು. ‘‘ಪರಿಶಿಷ್ಟ ಜಾತಿಗಳ ಜನರು ದೇಶದ ಒಟ್ಟು ಜನಸಂಖ್ಯೆಯ ಶೇ.15ರಷ್ಟಿದ್ದು, ದೇಶದ ಬಡಸಮೂಹದಲ್ಲಿ ಅವರ ಪ್ರಮಾಣವು ತುಂಬಾ ಜಾಸ್ತಿಯಿದೆ. ಬಹುತೇಕ ಎಸ್ಸಿಗಳು ಬಡತನರೇಖೆಗಿಂತ ಕೆಳಗಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ಆದರೆ ಈ ಯೋಜನೆ ಜಾರಿಗೊಂಡು 36 ವರ್ಷಗಳು ಕಳೆದರೂ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ.

ಬುಡಕಟ್ಟು ಗ್ರಾಮಗಳ ಶೋಚನೀಯ ಸ್ಥಿತಿ

ಮನೆ ಒಡೆತನ, ವಿದ್ಯುತ್, ಶೌಚಗೃಹ ಹಾಗೂ ವಿದ್ಯುತ್ ಸಂಪರ್ಕಗಳಂತಹ ಮೂಲಭೂತ ಸೌಕರ್ಯಗಳ ವಿಷಯಕ್ಕೆ ಬಂದಾಗ ಆದಿವಾಸಿಗಳು ಹಾಗೂ ದಲಿತರು ಅತ್ಯಂತ ನಿರ್ಲಕ್ಷಕ್ಕೊಳಗಾಗುತ್ತಾರೆ. ಶಿಶು ಮರಣ, ಶಾಲೆಯನ್ನು ತ್ಯಜಿಸುವುದು ಹಾಗೂ ಕಡುಬಡತನಕ್ಕೆ ಸಂಬಂಧಿಸಿದ ಅಂಕಿಅಂಶಗಳಲ್ಲೂ ಅವರು ಪ್ರಮುಖವಾಗಿ ಕಂಡುಬರುತ್ತಿದ್ದಾರೆ. ಇದಕ್ಕೆ ನಿದರ್ಶನವಾಗಿ, ಪರಿಶಿಷ್ಟ ಪಂಗಡಗಳಲ್ಲಿ ಶಿಶುಮರಣ ದರವು ಶೇ.35.8ರಷ್ಟಿದ್ದರೆ, ಇತರ ಎಲ್ಲಾ ಸಾಮಾಜಿಕ ಗುಂಪುಗಳಲ್ಲಿ ಅದು ಶೇ.18.4ರಷ್ಟಿದೆ. ಜುಲೈನಲ್ಲಿ ಇಂಡಿಯಾಸ್ಪೆಂಡ್ ಪ್ರಕಟಿಸಿದ ವರದಿಯೊಂದು, ಎಸ್ಸಿ ಹಾಗೂ ಎಸ್ಟಿಗಳು ಸಾಮಾಜಿಕ ಅಭಿವೃದ್ಧಿಯಲ್ಲಿ ಎಷ್ಟರಮಟ್ಟಿಗೆ ಹಿಂದುಳಿದಿದ್ದಾರೆಂಬ ಬಗ್ಗೆ ಬೆಳಕು ಚೆಲ್ಲಿದೆ.

ಬಳಕೆಯಾದ ನಿಧಿಗಳು ಏನಾಗುತ್ತವೆ?

ನಿಧಿಗಳ ಬಳಕೆಯನ್ನು ನಿರ್ಲಕ್ಷಿಸುವ ಈ 35 ವರ್ಷಗಳ ಪ್ರವೃತ್ತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಎರಡು ಸರಣಿ ವರದಿಗಳ ಎರಡನೆ ಭಾಗದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯ ಮೊದಲ ವರ್ಷದಲ್ಲಿ ಈ ನಿಧಿಯು ಗರಿಷ್ಠ ಪ್ರಮಾಣದಲ್ಲಿ ವ್ಯಯಿಸಲ್ಪಡದೆ ಇದ್ದುದರ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ ಹಣಕಾಸು ವರ್ಷದ ಕೊನೆಯಲ್ಲಿ ಖರ್ಚಾಗದೆ ಉಳಿದ ಹಣವನ್ನು, ನಿಗದಿತ ಕಾಲಾವಧಿಯಿರದ ಕೇಂದ್ರೀಯ ನಿಧಿಗೆ ವರ್ಗಾಯಿಸಬಹುದಾಗಿದ್ದು, ಅದನ್ನು ಆನಂತರ ಬಳಸಿಕೊಳ್ಳಬಹುದಾಗಿದೆ.

 ಆದರೆ ವಾಸ್ತವವಾಗಿ ಹಾಗಾಗುತ್ತಿಲ್ಲ

‘‘ಹೀಗೆ ವ್ಯಯಿಸಲಾಗದೆ ಉಳಿದ ಹಣವನ್ನು ಕಾಲಾವಧಿ ಮೀರಿದ್ದೆಂದು ಪರಿಗಣಿಸಲಾಗುವುದು ಹಾಗೂ ನಿಯಮದಂತೆ ಮುಂದಿನ ವರ್ಷಕ್ಕೆ ಒಯ್ಯಲಾಗುವುದಿಲ್ಲ’’ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ನೀತಿ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಎಸ್ಸಿಗಳು ಹಾಗೂ ಎಸ್ಟಿಗಳ ಕಲ್ಯಾಣಕ್ಕಾಗಿ ಅನುದಾನಿತ ನಿಧಿಗಳ ಕಳಪೆ ಬಳಕೆಯಾಗುತ್ತಿದೆಯೆಂದು ನೀತಿ ಆಯೋಗವು ರಾಜ್ಯಗಳ ಕುರಿತಾದ ತನ್ನ ನೂತನ ಮಾರ್ಗದರ್ಶಿ ಸೂತ್ರಗಳಲ್ಲಿ ಹೇಳಿದೆ.

2016ರ ಜನವರಿಯಲ್ಲಿ ರಾಜ್ಯದಲ್ಲಿ ವಿತ್ತೀಯ ಬಜೆಟ್ ಕೊನೆಗೊಳ್ಳಲು ಕೇವಲ ಮೂರು ತಿಂಗಳು ಬಾಕಿಯುಳಿದಿರುವಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಸಿಎಸ್‌ಪಿ ನಿಧಿಯ ಬಳಕೆಯನ್ನು 0.87 ಶೇಕಡಕ್ಕಿಂತಲೂ ಕಡಿಮೆ ಇರಿಸಿರುವ ಇಲಾಖೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಕೃಪೆ: indiaspend.com

share
ನಿಖಿಲ್ ಎಂ. ಬಾಬು
ನಿಖಿಲ್ ಎಂ. ಬಾಬು
Next Story
X