ಕೆಪಿಎಲ್: ಮೈಸೂರಿಗೆ ಸತತ ನಾಲ್ಕನೆ ಜಯ

ಹುಬ್ಬಳ್ಳಿ, ಸೆ.23: ಮೈಸೂರು ವಾರಿಯರ್ಸ್ ತಂಡ ಇಲ್ಲಿ ಇಂದು ನಡೆದ ಕೆಪಿಎಲ್‌ನ 15ನೆ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ವಿರುದ್ಧ 4 ವಿಕೆಟ್‌ಗಳ ಜಯ ದಾಖಲಿಸಿದೆ.
ಇದರೊಂದಿಗೆ ಮೈಸೂರು ವಾರಿಯರ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲೂ ಸತತ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 8 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಗೆಲುವಿಗೆ 162 ರನ್‌ಗಳ ಸವಾಲನ್ನು ಪಡೆದ ಮೈಸೂರು ವಾರಿಯರ್ಸ್ ತಂಡ ಇನ್ನೂ ಎರಡು ಎಸೆತೆಗಳು ಬಾಕಿ ಉಳಿದಿರುವಾಗಲೇ 6 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿ ಗೆಲುವಿನ ದಡ ಸೇರಿತು.
ರಾಜು ಭಟ್ಕಳ್ ಔಟಾಗದೆ 61 ರನ್, ಅನಿರುದ್ಧ ಜೋಶಿ ಔಟಾಗದೆ 56 ರನ್ ಗಳಿಸಿ ಮೈಸೂರು ವಾರಿಯರ್ಸ್ ತಂಡದ ಗೆಲುವಿಗೆ ಸಹಾಯ ಮಾಡಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಬಿಜಾಪುರ ಬುಲ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 161 ರನ್ ಗಳಿಸಿತ್ತು. ರವಿಕುಮಾರ್ ಸಮರ್ಥ 66 ರನ್, ಅಶ್ದೀರ್ಪ್ ಸಿಂಗ್ ಬ್ರಾರ್ ಔಟಾಗದೆ 27 ರನ್, ಕೆಸಿ ಅವಿನಾಶ್ 21 ರನ್, ನಾಯಕ ರಾಬಿನ್ ಉತ್ತಪ್ಪ 13ರನ್, ಅಭಿಮನ್ಯು ಮಿಥುನ್ 12 ರನ್ ಮತ್ತು ನವೀನ್ ಎಂಜಿ 10 ರನ್ ಗಳಿಸಿ ಮೈಸೂರು ವಾರಿಯರ್ಸ್‌ಗೆ ಕಠಿಣ ಸವಾಲು ನೀಡಲು ನೆರವಾಗಿದ್ದರು.
ಸಂಕ್ಷಿಪ್ತ ಸ್ಕೋರ್ ವಿವರ
ಬಿಜಾಪುರ ಬುಲ್ಸ್ 20 ಓವರ್‌ಗಳಲ್ಲಿ 161(ಸಮರ್ಥ 66, ಅರ್ಶದೀಪ್ ಬ್ರಾರ್ ಔಟಾಗದೆ 27; ಕೃಷ್ಣಪ್ಪ ಗೌತಮ್ 23ಕ್ಕೆ3).
ಮೈಸೂರು ವಾರಿಯರ್ಸ್19.4 ಓವರ್‌ಗಳಲ್ಲಿ 167/6(ರಾಜು ಭಟ್ಕಳ್ 61, ಅನಿರುದ್ಧ ಜೋಶಿ 56; ಮಿಥುನ್ 36ಕ್ಕೆ 2, ಫಾರೂಕಿ 26ಕ್ಕೆ2)





