ಐಸಿಸಿ ಏಕದಿನ ರ್ಯಾಂಕಿಂಗ್: ಕೊಹ್ಲಿಗೆ 2ನೆ ಸ್ಥಾನ
ದುಬೈ, ಸೆ.23: ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿ ಶುಕ್ರವಾರ ಇಲ್ಲಿ ಬಿಡುಗಡೆಯಾಗಿದ್ದು, ಟೀಮ್ ರ್ಯಾಂಕಿಂಗ್‌ನಲ್ಲಿ ಭಾರತ 3ನೆ ಸ್ಥಾನದಲ್ಲಿದ್ದರೆ, ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
110 ಅಂಕಗಳಿರುವ ಭಾರತ ಮೂರನೆ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯ(124) ಹಾಗೂ ನ್ಯೂಝಿಲೆಂಡ್(113) ಕ್ರಮವಾಗಿ ಮೊದಲ ಹಾಗೂ ಎರಡನೆ ಸ್ಥಾನದಲ್ಲಿವೆ.
813 ಅಂಕ ಗಳಿಸಿರುವ ಕೊಹ್ಲಿ ಎರಡನೆ ಸ್ಥಾನ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್ ಹಾಗೂ ಹಾಶೀಮ್ ಅಮ್ಲ ಕ್ರಮವಾಗಿ 1ನೆ ಹಾಗೂ 3ನೆ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕ ಹಾಗೂ ಏಷ್ಯಾ ಆಟಗಾರರ ಪ್ರಾಬಲ್ಯ ಹೊಂದಿರುವ ಬ್ಯಾಟಿಂಗ್ ಪಟ್ಟಿಯಲ್ಲಿ ಭಾರತದ ರೋಹಿತ್ ಶರ್ಮ(7ನೆ) ಹಾಗೂ ಶಿಖರ್ ಧವನ್(8ನೆ) ಸ್ಥಾನ ಪಡೆದಿದ್ದಾರೆ.
ಏಕದಿನ ಬೌಲರ್‌ಗಳ ರ್ಯಾಂಕಿಂಗ್ ಹಾಗೂ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ಒಬ್ಬ ಆಟಗಾರನೂ ಸ್ಥಾನ ಪಡೆದಿಲ್ಲ.
ಮುಂಬರುವ ದಿನಗಳಲ್ಲಿ 4ನೆ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕ ತಂಡಕ್ಕೆ 2ನೆ ಸ್ಥಾನಕ್ಕೇರುವ ಅವಕಾಶವಿದೆ. ಆಫ್ರಿಕ ತಂಡ ಸೆ.30 ರಿಂದ ಅ.12ರ ತನಕ ಸ್ವದೇಶದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಲಿದೆ.







