ರಾಫೇಲ್ ಖರೀದಿ ಒಪ್ಪಂದಕ್ಕೆ ಸಹಿ

ಹೊಸದಿಲ್ಲಿ, ಸೆ.23: ಫ್ರಾನ್ಸ್‌ನಿಂದ 36 ರಾಫೇಲ್ ಯುದ್ಧ ವಿಮಾನಗಳ ಖರೀದಿಯ ಅಂದಾಜು 7.8 ಶತಕೋಟಿ ಯುರೊಗಳ ಒಪ್ಪಂದಕ್ಕೆ ಭಾರತವು ಶುಕ್ರವಾರ ಸಹಿ ಹಾಕಿದೆ.
ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಹಾಗೂ ಅವರ ಫ್ರೆಂಚ್ ಸೋದ್ಯೋಗಿ ಜೀನ್ ವೆಸ್ ಲೆ ಡ್ರಿಯಾನ್ ದಿಲ್ಲಿಯಲ್ಲಿ ಈ ಬಹು ವಿಳಂಬಿತ ಒಪ್ಪಂದಕ್ಕೆ ಅಂಕಿತ ಹಾಕಿದರು.
ಭಾರತೀಯ ವಾಯು ದಳದಲ್ಲಿ ತಲಾ 18 ಯುದ್ಧ ವಿಮಾನಗಳನ್ನೊಳಗೊಂಡ 33 ತುಕಡಿಗಳಿವೆ. ಚೀನಾ ಮತ್ತು ಪಾಕಿಸ್ತಾನಗಳ ಸಂಯುಕ್ತ ಬೆದರಿಕೆಯನ್ನು ಎದುರಿಸಲು ಅದು 45 ಯುದ್ಧ ವಿಮಾನ ಘಟಕಗಳನ್ನು ಬಯಸುತ್ತಿದೆ.
ಫ್ರೆಂಚ್ ಸರಕಾರವು ಮುಂಗಡ ಖಾತ್ರಿಯನ್ನು ಮನ್ನಾ ಮಾಡುವುದೆಂಬ ಸೂಚನೆಗಳ ನಡುವೆಯೇ ನರೇಂದ್ರ ಮೋದಿ ಸರಕಾರವು ಒಪ್ಪಂದವನ್ನು ಅಂತಿಮಗೊಳಿಸಿತ್ತು. ಇದರಿಂದ ಭಾರತಕ್ಕೆ 13.4 ಕೋಟಿ ಯುರೊ ಉಳಿತಾಯವಾಗಲಿದೆ.
Next Story





