ನಿಗೂಢವಾಗಿ ನಾಪತ್ತೆಯಾಗಿರುವ ಹಡಗು ಉದ್ಯೋಗಿಯ ಮನೆಗೆ ಮಾಜಿ ಸಿಎಂ ಭೇಟಿ

ಕಾಸರಗೋಡು, ಸೆ.24: ನಿಗೂಢವಾಗಿ ನಾಪತ್ತೆಯಾಗಿರುವ ಹಡಗು ಉದ್ಯೋಗಿ ಉದುಮದ ನಿಖಿಲ್ ಮನೆಗೆ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಭೇಟಿ ನೀಡಿದರು.
ನಿಖಿಲ್ ನಾಪತ್ತೆ ಕುರಿತು ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ಅವರು ಈ ಸಂದರ್ಭ ಭರವಸೆ ನೀಡಿದರು. ಹಡಗು ಕಂಪೆನಿ ಅಧಿಕಾರಿಗಳ ಜೊತೆ ಉಮ್ಮನ್ ಚಾಂಡಿ ದೂರವಾಣಿ ಮೂಲಕ ಮಾತನಾಡಿದರು.
ಬ್ರೋಷ ಬ್ರೆಸಲ್ಸ್ ಎಂಬ ಹಡಗಿನಲ್ಲಿ ಉದ್ಯೋಗಿಯಾಗಿದ್ದ ನಿಖಿಲ್ ಆಗಸ್ಟ್ 11ರಿಂದ ಉದ್ಯೋಗದಲ್ಲಿದ್ದ ಸಂದರ್ಭದಲ್ಲೇ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ನಿಖಿಲ್ ನಾಪತ್ತೆಯಾಗಿ ಒಂದೂವರೆ ತಿಂಗಳಾದರೂ ಪತ್ತೆಗೆ ಕೇಂದ್ರ ಅಥವಾ ರಾಜ್ಯ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಉಮ್ಮನ್ ಚಾಂಡಿ ದೂರಿದರು.
ಐಕ್ಯರಂಗ ಸಂಚಾಲಕ ಪಿ.ಗಂಗಾಧರನ್ ನಾಯರ್, ಹಕೀಂ ಕುನ್ನಿಲ್, ಪಿ.ಕೆ.ಫೈಝಲ್ ಮೊದಲಾದವರು ಜೊತೆಗಿದ್ದರು.
Next Story





