Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಆಸ್ಕರ್ ರೇಸಿನಲ್ಲಿರುವ ' ವಿಸಾರಣೈ' ಗೂ...

ಆಸ್ಕರ್ ರೇಸಿನಲ್ಲಿರುವ ' ವಿಸಾರಣೈ' ಗೂ ಆಟೋ ಚಂದ್ರನ್ ಗೂ ಏನು ಸಂಬಂಧ ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ24 Sept 2016 3:26 PM IST
share
ಆಸ್ಕರ್ ರೇಸಿನಲ್ಲಿರುವ  ವಿಸಾರಣೈ ಗೂ ಆಟೋ ಚಂದ್ರನ್ ಗೂ ಏನು ಸಂಬಂಧ ಗೊತ್ತೇ ?

ಅಟೋ ಚಂದ್ರನ್ ಕಾಲರ್ ಟ್ಯೂನ್ “ಉಲಗಂ ಪಿರಿಂದಾದು ಎನಕಾಗ” ಹಾಡು ಎಂಜಿಆರ್ ಅವರ ಪಾಸಂ ಸಿನೆಮಾದ್ದಾಗಿದೆ. ಜಗತ್ತೇ ನನಗಾಗಿ ಹುಟ್ಟಿದೆ ಎನ್ನುವುದು ಇದರ ಅರ್ಥ.

ತಮಿಳುನಾಡಿನ ಕೊಯಮತ್ತೂರಿನ 54 ವರ್ಷದ ಅಟೋ ಚಾಲಕ ಎಂ ಚಂದ್ರ ಕುಮಾರ್ ಮನೆಯಿಂದ ಓಡಿ ಹೋಗಿ ಜೈಲು ಸೇರಿ ಹೀನಾಯವಾಗಿ ಚಿತ್ರ ಹಿಂಸೆ ಅನುಭವಿಸಿದ ನಂತರ ದೊಡ್ಡ ಲೇಖಕನಾಗಿ ಬಹಳಷ್ಟು ಕಾದಂಬರಿಗಳನ್ನು ಬರೆದಿದ್ದಾರೆ. ಅವರ 2006ರ ಪುಸ್ತಕ ಲಾಕಪ್ ಈಗ ಪ್ರಶಸ್ತಿ ವಿಜೇತ 2015ರ ಸಿನೆಮಾ ವಿಸಾರಣೈ. ಪೊಲೀಸ್ ಹಿಂಸೆ ಮತ್ತು ಮಾನವ ಹಕ್ಕು ಉಲ್ಲಂಘನೆ ಕುರಿತ ಈ ಸಿನಿಮಾ ಭಾರತದಿಂದ ಈ ವರ್ಷ ಆಸ್ಕರ್ ಪ್ರಶಸ್ತಿಗೆ ಉತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸಿದೆ. ವೆಟ್ರಿಮಾರನ್ ನಿರ್ದೇಶನದ ವಿಸಾರಣೈಗೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ಪುರಸ್ಕಾರಗಳು ಸಿಕ್ಕಿವೆ. ಭಾರತಕ್ಕೆ ಆಸ್ಕರ್ ತರುವ ಬಹಳ ಒಳ್ಳೇ ಸಿನೆಮಾ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

1983ರಲ್ಲಿ ಚಂದ್ರನ್ ಆಂಧ್ರಪ್ರದೇಶದ ಗುಂಟೂರುನಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ರಾತ್ರಿ ಪೊಲೀಸರು ಕ್ಷುಲ್ಲಕ ದರೋಡೆಯೊಂದನ್ನು ಮಾಡಿದ ತಂಡದಲ್ಲಿ ಸೇರಿದ್ದಾನೆಂದು ಬಂಧಿಸಿದ್ದರು.

ವಿಸಾರಣೈನಲ್ಲಿ ಎಷ್ಟು ನಿಜ ಪ್ರಕರಣವಿದೆ?

“ನಂತರದ 13 ದಿನಗಳು ಕ್ರೂರವಾಗಿದ್ದವು. ನಮ್ಮನ್ನು ಗಾಳಿಯೇ ಬಾರದ ಸಣ್ಣ ಕೋಣೆಯಲ್ಲಿಡಲಾಗಿತ್ತು. ಪೊಲೀಸರ ಮೇಲೆ ಕೇಸು ಬೇಗನೇ ಪರಿಹಾರವಾಗಬೇಕಾದ ಒತ್ತಡವಿತ್ತು. ಹೀಗಾಗಿ ಬಂಧಿಸಿದ ಕೈದಿಗಳನ್ನು ತಪ್ಪೊಪ್ಪಿಕೊಳ್ಳುವಂತೆ ಕ್ರೂರವಾಗಿ ಹಿಂಸಿಸಿದ್ದರು. ಸಿನೆಮಾದ ಮೊದಲ ಭಾಗದಲ್ಲಿ ನಡೆಯುವ ಮಾನವ ಹಕ್ಕು ಉಲ್ಲಂಘನೆ ಪೊಲೀಸ್ ವಶದಲ್ಲಿ ನಡೆದ ನಿಜವಾದ ಘಟನೆ. ಆಸ್ಪತ್ರೆ ಹೊರತು ಎಲ್ಲೂ ಹೋಗುವ ಅವಕಾಶವೇ ಇರಲಿಲ್ಲ” ಎನ್ನುತ್ತಾರೆ ಚಂದ್ರನ್. ಅಂತಿಮವಾಗಿ ಚಂದ್ರನ್ ಮತ್ತು ಅವರ ಸ್ನೇಹಿತ ಸೆಪ್ಟಂಬರ್ 27ರಂದು ಬಿಡುಗಡೆಯಾದರು. ಇನ್ನು ನಾಲ್ಕು ದಿನಗಳಿಗೆ ಈ ಪ್ರಕರಣ ನಡೆದು 33 ವರ್ಷಗಳಾಗುತ್ತದೆ.

ವಿಸಾರಣೈ ನಿರ್ದೇಶನ

2014ರಲ್ಲಿ ನಿರ್ದೇಶಕ ವೆಟ್ರಿಮಾರನ್ ಅವರು ಬಾಲ ಮಹೇಂದ್ರರ ಸಿನೆಮಾದಲ್ಲಿ ಕೆಲಸ ಮಾಡಿರುವ ಘನಿ ಎಂದೇ ಜನಪ್ರಿಯವಾಗಿರುವ ತಂಗವೇಲನ್ ಜೊತೆಗೆ ಮಾತುಕತೆಯಾಡುತ್ತಿದ್ದರು. ಸಮಾಜದಲ್ಲಿ ಕಲೆ ಹೇಗಿದೆ ಎಂಬ ಬಗ್ಗೆ ಅವರಲ್ಲಿ ಚರ್ಚೆಯಾಗುತ್ತಿತ್ತು. ಕಲೆ ಶೋಷಿತರ ಧ್ವನಿಯಾಗಬೇಕು. ಶಕ್ತಿವಂತರ ಅಧಿಕಾರವನ್ನು ತೋರಿಸುವ ಸಾಧನವಾಗಬಾರದು ಎಂದು ಅವರು ಚರ್ಚಿಸಿದ್ದರು. ಘನಿ ಅಭಿಪ್ರಾಯಗಳನ್ನು ಒಪ್ಪಿದ ವೆಟ್ರಿಮಾರನ್ ಅಂತಹ ಕತೆ ಇದ್ದರೆ ಮುಂದಿನ ಸಿನೆಮಾ ಮಾಡುವುದಾಗಿ ಹೇಳಿದರು. ಆಗಲೇ ತಮ್ಮ ಸ್ನೇಹಿತ ಚಂದ್ರನ್‌ರ ಪ್ರಶಸ್ತಿ ವಿಜೇತ ಕಾದಂಬರಿ ಲಾಕಪ್ ಬಗ್ಗೆ ಘನಿ ಹೇಳಿದರು. ಘನಿ ಆ ಕಾದಂಬರಿಗೆ ಸ್ಕ್ರೀನ್ ಪ್ಲೇ ಬರೆಯುವ ಉತ್ಸಾಹದಲ್ಲಿದ್ದರು. ವೆಟ್ರಿಮಾರನ್ ಸಿನೆಮಾ ಮಾಡುವುದಾದರೆ ಅವರಿಗೆ ಇನ್ನಷ್ಟು ಖುಷಿಯಾಗಲಿದೆ ಎಂದರು. ಚಂದ್ರನ್ ಕೂಡ ಇದನ್ನು ಸಂತೋಷದಿಂದಲೇ ಒಪ್ಪಿದರು. ಕಾದಂಬರಿಯ ಮೂಲಕ ಕೆಲವೇ ಮಂದಿ ಲೇಖಕನ ಬಗ್ಗೆ ತಿಳಿದಿದ್ದಾರೆ. ಆದರೆ ಸಿನೆಮಾ ಮೂಲಕ ಲಕ್ಷಾಂತರ ಮಂದಿಗೆ ತಿಳಿಯಲಿದೆ ಎಂದು ವೆಟ್ರಿಮಾರನ್ ಹೇಳಿದ್ದರು. ಆ ಮಾತು ಈಗ ನಿಜವಾಗಿದೆ ಎಂದು ನೆನಪಿಸುತ್ತಾರೆ ಚಂದ್ರನ್. “ನಾನು ಈ ಸಿನೆಮಾಗೆ ಶೇ.100 ಬೆಂಬಲ ಕೊಟ್ಟಿದ್ದೇನೆ. ಶೋಷಿತ ವರ್ಗದ ಎಲ್ಲರಿಗೂ ಇದನ್ನು ಅರ್ಪಿಸಲು ಬಯಸಿದ್ದೆ” ಎನ್ನುತ್ತಾರೆ ಅವರು. 2014 ಡಿಸೆಂಬರ್ 30ರಂದು ಸಿನೆಮಾ ಸಿದ್ಧವಾಯಿತು. ನಂತರ ನಡೆದದ್ದು ಈಗ ಇತಿಹಾಸ.

ಚಂದ್ರನ್ ಪುಸ್ತಕಗಳು

ಚಂದ್ರನ್ ಬಹುತೇಕ ಲಾಕಪ್ ಕಾದಂಬರಿಗೇ ಜನಜನಿತ. ಆದರೆ ಶಾಲೆಯನ್ನು ಹತ್ತನೇ ತರಗತಿಯಲ್ಲಿ ತೊರೆದು ಲೇಖಕರಾಗಿ, ಅಟೋ ಚಾಲಕನಾಗಿ ಅವರು ದೊಡ್ಡ ಚಿಂತಕ. ಅಮೆರಿಕದ ಬಂಡವಾಳಶಾಹಿ ಮತ್ತು ಅದು ಹೇಗೆ ಜಗತ್ತನ್ನು ಶೋಷಿಸುತ್ತಿದೆ, ಸ್ವತಂತ್ರ ಸೇನಾನಿ ಮತ್ತು ರಾಜಕೀಯ ಕಾರ್ಯಕರ್ತ ಜೀವನಾನಂದಮ್, ತಾನು ಕಂಡ ಕೆಳವರ್ಗದವರ ಮೇಲೆ ಹಲ್ಲೆ ಮೊದಲಾದುವನ್ನು ಬರೆದಿದ್ದಾರೆ. ಚಂದ್ರನ್ ಅವರ ಕಾದಂಬರಿಗಳು ಸಾಮಾಜಿಕ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಶೋಷಿತರ ಧ್ವನಿಯಾಗಿವೆ.

ವಿಸಾರಣೈ ಹೊರ ಬಂದಾಗ ಎಲ್ಲರೂ ಸಂತೋಷಪಡಲಿಲ್ಲ. ಪೊಲೀಸ್ ಪಡೆಯನ್ನು ಸಿನೆಮಾ ಕೆಟ್ಟದಾಗಿ ಚಿತ್ರಿಸಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟರು. ವಿಸಾರಣೈನಲ್ಲಿ ಚಂದ್ರನ್ ಕೆಲವೊಂದು ಸನ್ನಿವೇಶವನ್ನು ಉದ್ರೇಕಿಸಿ ಹೇಳಿದ್ದಾರೆಯೇ? ಏಕೆಂದರೆ ಪುಸ್ತಕದಲ್ಲಿ ಅದೇ ರೀತಿ ಕಾಣುವುದಿಲ್ಲ. ಲಾಕಪ್ ಡೆತ್‌ಗಳು ಈಗಲೂ ನಡೆಯುತ್ತವೆ? ನಡೆಯುವುದಿಲ್ಲವೆ? ವ್ಯವಸ್ಥೆಯಲ್ಲಿ ನಿಯಂತ್ರಣಗಳಿವೆ ಎನ್ನುವುದು ನಿಜ. ಆದರೆ ವ್ಯವಸ್ಥೆಯಲ್ಲಿರುವ ಜನರು ಯಾರು? ಅವರು ಲಾಭಕ್ಕೆ ಕೆಲಸ ಮಾಡುತ್ತಾರೆ. ಯಾರು ನಿಜವಾದ ಅಪರಾಧಿಗಳೆಂದು ಅವರು ಯೋಚಿಸುವುದಿಲ್ಲ. ಅವರು ಯಾರೋ ದಾರಿಬದಿಯ ವ್ಯಕ್ತಿಯನ್ನು ಬಂಧಿಸಿ ಆರೋಪಿಯೆಂದು ಮುಂದಿಡುತ್ತಾರೆ ಎನ್ನುತ್ತಾರೆ ಚಂದ್ರನ್. ಹಲವರು ವಿಚಾರಣೆಯ ಹಂತದಲ್ಲೇ ಸಾಯುತ್ತಾರೆ ಎನ್ನುವುದನ್ನು ಅವರು ಬೊಟ್ಟು ಮಾಡುತ್ತಾರೆ. “ಪೊಲೀಸರು ವಿಚಾರಣೆಯ ಹೆಸರಲ್ಲಿ ಹಿಂಸೆ ಕೊಡುವುದಾದಲ್ಲಿ ನ್ಯಾಯಾಲಯಗಳು ಏಕಿವೆ? ಅವರಿಗೆ ನ್ಯಾಯ ವ್ಯವಸ್ಥೆಯಲ್ಲಿ ಸ್ವತಃ ನಂಬಿಕೆ ಇದ್ದಂತಿಲ್ಲ” ಎನ್ನುತ್ತಾರೆ.

ಆಸ್ಕರ್ ನಾಮನಿರ್ದೇಶನದ ಬಗ್ಗೆ

ವಿಸಾರಣೈ ಆಸ್ಕರ್ ಆಯ್ಕೆಯಿಂದ ಚಂದ್ರನ್‌ಗೆ ಖುಷಿಯಾಗಿದೆ. ಅವರ ಪ್ರಕಾರ, “ಆದರೆ ಈ ಸಿನಿಮಾದ ಯಶಸ್ಸನ್ನು ಯಾರೂ ತಮ್ಮ ಹೆಗಲಿಗೆ ಪಡೆಯಲು ಪ್ರಯತ್ನಿಸುತ್ತಿಲ್ಲ. ನನ್ನ ಪ್ರಕಾರ ವೆಟ್ರಿಮನ್ ಇದಕ್ಕೆ ಹಕ್ಕುದಾರರು. ನಟರು ಮತ್ತು ಉಳಿದ ತಂತ್ರಜ್ಞರೂ ಸಹ. ಅವರು ಕತೆಯನ್ನು ಸಿನೆಮಾವಾಗಿಸಿದರು. ಆದರೆ ಅವರು ಇದು ನನ್ನ ಜಯ ಎನ್ನುತ್ತಾರೆ.” 13 ದಿನಗಳ ಕಾಲ ಪೊಲೀಸ್ ವಶದಲ್ಲಿ ನಡೆದ ಘಟನೆಗಳ ಚಂದ್ರನ್ ಕತೆ ಹಿಂದೆ ತಮಿಳು ಪುಸ್ತಕ ಮತ್ತು ತಮಿಳು ಓದುಗರಿಗೆ ಮಾತ್ರ ಗೊತ್ತಿತ್ತು. ಆದರೆ ಈಗ ನಾವು ಇದನ್ನು ಕಲೆಯಾಗಿ ಪರಿವರ್ತಿಸಿ ಅದರ ಯಶಸ್ಸನ್ನು ಪರಸ್ಪರರ ನಡುವೆ ಹಂಚಿಕೊಂಡಿದ್ದೇವೆ ಎನ್ನುತ್ತಾರೆ.

ಚಂದ್ರನ್ ತಮ್ಮ ಪತ್ನಿ ಸುಬ್ಬಲಕ್ಷ್ಮಿ ಮತ್ತು ಮಗಳು ಜೀವಾ ಜೊತೆಗೆ ನೆಲೆಸಿದ್ದಾರೆ. ಚಿತ್ರತಂಡ ಕರೆದೊಯ್ದರೆ ಆಸ್ಕರ್ ಸಮಾರಂಭಕ್ಕೆ ಹೋಗುವುದಾಗಿ ಚಂದ್ರನ್ ಹೇಳುತ್ತಾರೆ. ಈಗ ಚಂದ್ರನ್ ತಮ್ಮ ಮುಂದಿನ ಪುಸ್ತಕ ಬರೆಯುತ್ತಿದ್ದಾರೆ. ಅದು ಮಾನವ ಹಕ್ಕು ಉಲ್ಲಂಘನೆ ಕುರಿತ ಬರಹ. “ನಾನು ಯಾವಾಗಲೂ ಅಧಿಕಾರ ಮತ್ತು ಶಕ್ತಿಯ ವಿರುದ್ಧ ಧ್ವನಿ ಎತ್ತುವೆ” ಎನ್ನುವುದು ಚಂದ್ರನ್ ಮಾತು.

ಕೃಪೆ: thenewsminute.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X