ಪಾಕ್ ಹೆಸರೆತ್ತದೆಯೇ ಚುಚ್ಚಿದ ಭಾರತದ ವಿಶ್ವಸಂಸ್ಥೆಯ ರಾಯಭಾರಿ
ಅಕ್ಬರುದ್ದೀನ್ , ದಿ ಗ್ರೇಟ್ !

ಅಕ್ಬರುದ್ದೀನ್, ದಿ ಗ್ರೇಟ್!
ಪಾಕ್ ಹೆಸರೆತ್ತದೆಯೇ ಚುಚ್ಚಿದ ಭಾರತದ ವಿಶ್ವಸಂಸ್ಥೆಯ ರಾಯಭಾರಿ
ಉರಿ ದಾಳಿಯ ನಂತರ ಭಾರತ- ಪಾಕಿಸ್ತಾನ ಸಂಬಂಧ ಬಹಳ ಶಿಥಿಲವಾಗಿದೆ. ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣಕ್ಕೆ ಎನಾಮ್ ಗಂಭೀರ್ ಅವರು ತೀಕ್ಷ್ಣ ಉತ್ತರ ನೀಡಿರುವುದರಲ್ಲಿಯೇ ಇದು ತಿಳಿಯುತ್ತದೆ. ಪಾಕಿಸ್ತಾನ ಉನ್ನತ ವಲಯದ ಭಯೋತ್ಪಾದನೆಯ ಅತಿಥೇಯ ರಾಷ್ಟ್ರ ಎಂದು ಅವರು ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಕ್ಕಟ್ಟನ್ನು ಕುರಿತು ಪಾಕ್ ಪ್ರಧಾನಿಗೆ ಉತ್ತರ ನೀಡುವ ಅವಕಾಶವನ್ನು ಬಳಸಿಕೊಂಡ ವಿಶ್ವಸಂಸ್ಥೆಗೆ ಶಾಶ್ವತ ಯೋಜನೆಯ ಪ್ರಥಮ ಕಾರ್ಯದರ್ಶಿ ಎನಾಮ್ ಗಂಭೀರ್ ಬಲಿಷ್ಠ ಉತ್ತರ ನೀಡಿದ್ದಾರೆ. “ಇಂದು ನನ್ನ ದೇಶ ಮತ್ತು ನಮ್ಮ ನೆರೆಹೊರೆಯವರು ಎದುರಿಸುತ್ತಿರುವ ಸ್ಥಿತಿಗೆ ಪಾಕಿಸ್ತಾನ ಸುಧೀರ್ಘ ಕಾಲದಿಂದ ಭಯೋತ್ಪಾದನೆಯನ್ನು ಪೊರೆಯುತ್ತಿರುವುದೇ ಕಾರಣವಾಗಿದೆ. ಅದರ ಪರಿಣಾಮಗಳು ನಮ್ಮ ಪ್ರಾಂತವನ್ನು ಮೀರಿ ಬೆಳೆದಿದೆ” ಎಂದು ಆಕೆ ಹೇಳಿದ್ದಾರೆ.
ಭಾರತ ಪಾಕಿಸ್ತಾನವನ್ನು ಒಂದು ಭಯೋತ್ಪಾದಕ ರಾಷ್ಟ್ರವನ್ನಾಗಿ ಕಾಣುತ್ತದೆ. ಅದು ಅಂತಾರಾಷ್ಟ್ರೀಯ ಅನುದಾನವಾಗಿ ಸಿಕ್ಕ ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ನೆರೆಯ ದೇಶಗಳ ಮೇಲೆ ಪ್ರಯೋಗಿಸುವ ಭಯೋತ್ಪಾದನಾ ಸಂಘಟನೆಗಳ ತರಬೇತಿ, ಹಣಕಾಸು ಮತ್ತು ಬೆಂಬಲಕ್ಕೆ ಬಳಸುತ್ತಿದೆ. ಪುರಾತನ ಕಾಲದ ಶ್ರೇಷ್ಠ ಕಲಿಕಾ ಸ್ಥಳವಾದ ತಕ್ಷಶಿಲಾದ ನೆಲದಲ್ಲಿ ಇಂದು ಭಯೋತ್ಪಾದನೆಯ ಐವಿ ಲೀಗ್ ಗೆ ಆತಿಥ್ಯ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. “ರಾಷ್ಟ್ರದ ನೀತಿಯಾಗಿ ಇದನ್ನು ಬಳಸಿದಾಗ ಯುದ್ಧಾಪರಾಧ. ನನ್ನ ದೇಶ ಮತ್ತು ಇತರ ನೆರೆಯ ದೇಶಗಳು ಇಂದು ಪಾಕಿಸ್ತಾನ ಧೀರ್ಘಾವಧಿಯಲ್ಲಿ ಬೆಳೆಸಿದ ಭಯೋತ್ಪಾದನೆಯನ್ನು ಎದುರಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಬಹಳಷ್ಟು ಭಯೋತ್ಪಾದಕರು ಪಾಕಿಸ್ತಾನ ಮತ್ತು ನೆರೆಯ ತಾಲಿಬಾನ್ ಮತ್ತು ಹಕ್ಕಾನಿ ಜಾಲದಲ್ಲಿ ಅಡಗಿದ್ದಾರೆ. ತಾಲಿಬಾನ್ ಮುಖ್ಯಸ್ಥ ಮುಲಾ ಓಮರ್ ಮತ್ತು ಅಲ್ ಖೈದಾ ಸುಪ್ರೀಂ ಒಸಾಮ ಬಿನ್ ಲಾದೆನ್ ಪಾಕಿಸ್ತಾನದಲ್ಲಿ ಅಡಗಿದ್ದರು. ಒಸಾಮನನ್ನು 2011ರಲ್ಲಿ ಅಮೆರಿಕದ ದಾಳಿಯಲ್ಲಿ ಕೊಲ್ಲಲಾಗಿದೆ. ಭಾರತ ಈ ಭಾಷಣಗಳಿಂದ ಸಂತೃಪ್ತವಾಗಲಿಲ್ಲ. ನಂತರ ಭಾರತದ ಸಮಾರಂಭವೊಂದರಲ್ಲಿ ಮಾಲ್ಟಾ ಮತ್ತು ಬ್ರಿಟನ್ ಇದ್ದರೂ ಒಬ್ಬ ಅತಿಥಿ ಮಾತ್ರ ಕಾಣಲಿಲ್ಲ. ಪಾಕಿಸ್ತಾನದ ಪ್ರಧಾನಿ ನವಾಝ್ ಷರೀಫ್ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಲಾಲಳನ್ನು ನಾಯಕಿ ಎನ್ನುವ ಬದಲಾಗಿ ಬುರ್ಹಾನ್ ವಾನಿಯನ್ನು ಮೆಚ್ಚಿಕೊಂಡಿರುವ ಬಗ್ಗೆಯೂ ಅಧಿಕೃತ ಟ್ವೀಟ್‌ಗಳು ಬಂದಿದ್ದವು. “ಭಾರತ ಮಾಲ್ಟಾ ಮತ್ತು ಬ್ರಿಟನ್ ಜೊತೆಗೆ ರಿಸೆಪ್ಷನ್‌ನಲ್ಲಿ ಭಾಗವಹಿಸಿದೆ. ಬಹಳಷ್ಟು ಪ್ರಧಾನಿಗಳು ಮತ್ತು ಇತರರು ಇದ್ದರು. ಆದರೆ ಯಾರು ಬರಲಿಲ್ಲ ಎಂದು ಊಹೆಯ ಅಗತ್ಯವಿಲ್ಲ” ಎಂದು ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದರು.
ಕೃಪೆ: dnaindia.com







